- Kannada News Photo gallery Cricket photos Shami's Blitz: SRH Crumbles to 4/26 Against LSG in Home Opener IPL 2026
SRH vs LSG: W,W,W,W.. ಸನ್ರೈಸರ್ಸ್ಗೆ ಆರಂಭದಲ್ಲೇ ಮರ್ಮಾಘಾತ
SRH Crumbles to 4/26 Against LSG : ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆರಂಭದಲ್ಲೇ ಆಘಾತಕ್ಕೊಳಗಾಗಿದೆ. ಮೊದಲು ಬೌಲಿಂಗ್ ಆಯ್ದುಕೊಂಡ ಲಕ್ನೋ, ಕೇವಲ 26 ರನ್‌ಗಳಿಗೆ ಸನ್‌ರೈಸರ್ಸ್‌ನ ಪ್ರಮುಖ 4 ವಿಕೆಟ್‌ಗಳನ್ನು ಕಬಳಿಸಿತು. ಮೊಹಮ್ಮದ್ ಶಮಿ ಅವರ ಮಾರಕ ಬೌಲಿಂಗ್‌ನಿಂದ ಅಭಿಷೇಕ್ ಮತ್ತು ಟ್ರಾವಿಸ್ ಹೆಡ್ ಬೇಗನೆ ವಿಕೆಟ್ ಒಪ್ಪಿಸಿದರು. ಸನ್‌ರೈಸರ್ಸ್‌ನ ನಾಯಕ ಇಶಾನ್ ಕಿಶನ್ ಕೂಡ ಅಲ್ಪ ಮೊತ್ತಕ್ಕೆ ಔಟಾಗಿದ್ದಾರೆ.
Updated on: Apr 05, 2026 | 4:21 PM

ತವರಿನಲ್ಲಿ ತನ್ನ ಮೊದಲ ಪಂದ್ಯವನ್ನಾಡುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ, ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಸನ್‌ರೈಸರ್ಸ್ ತಂಡಕ್ಕೆ ಆರಂಭದಲ್ಲೇ 4 ಆಘಾತಗಳು ಎದುರಾಗಿವೆ.

ಲೀಗ್ನಲ್ಲಿ ಮೂರನೇ ಪಂದ್ಯವನ್ನಾಡುತ್ತಿರುವಸನ್‌ರೈಸರ್ಸ್ ತಂಡಕ್ಕೆ ಮೊದಲ ಪಂದ್ಯಸಲ್ಲಿ ಸಾಧಾರಣ ಆರಂಭ ಸಿಕ್ಕಿತ್ತು. ಆದರೆ ಎರಡನೇ ಪಂದ್ಯದಲ್ಲಿ ಆರಂಭಿಕರಿಬ್ಬರು ಅಬ್ಬರಿಸಿದ್ದರು. ಹೀಗಾಗಿ ಮೂರನೇ ಪಂದ್ಯದಲ್ಲೂ ಅದನ್ನೇ ನಿರೀಕ್ಷಿಸಲಾಗಿತ್ತು. ಆದರೆ ಮೂರನೇ ಪಂದ್ಯದಲ್ಲಿ ಎಲ್ಲಾ ಲೆಕ್ಕಾಚಾರಗಳನ್ನು ಲಕ್ನೋ ವೇಗಿ ಮೊಹಮ್ಮದ್ ಶಮಿ ಬುಡಮೇಲು ಮಾಡಿದರು.

ಲಕ್ನೋ ಪರ ಬೌಲಿಂಗ್ ಆರಂಭಿಸಿದ ಮೊಹಮ್ಮದ್ ಶಮಿ ಮೊದಲ ಓವರ್ನಲ್ಲೇ ಅಭಿಷೇಕ್ ವಿಕೆಟ್ ಉರುಳಿಸಿದರು. ಅಭಿಷೇಕ್ಗೆ ಈ ಪಂದ್ಯದಲ್ಲಿ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ. ಶಮಿ ಎಸೆದ ಈ ಓವರ್ನ ಕೊನೆಯ ಎಸೆತದಲ್ಲಿ ಅಭಿಷೇಕ್, ಸ್ಲಿಪ್ನಲ್ಲಿ ನಿಂತಿದ್ದ ಫಿಲ್ಡರ್ಗೆ ಖ್ಯಾಚಿತ್ತು ನಿರ್ಗಮಿಸಿದರು. ಆಗ ತಂಡದ ಮೊತ್ತ ಕೇವಲ 1 ರನ್ ಆಗಿತ್ತು.

ಇನ್ನಿಂಗ್ಸ್ನ ಮೂರನೇ ಓವರ್ನಲ್ಲಿ ಮತ್ತೆ ದಾಳಿಗಿಳಿದ ಶಮಿ, ಈ ಓವರ್ನಲ್ಲಿ ಮತ್ತೊಬ್ಬ ಆರಂಭಿಕ ಟ್ರಾವಿಸ್ ಹೆಡ್ಗೆ ಖೆಡ್ಡಾ ತೊಡಿದರು. ಶಮಿಯ ನಿಧಾನಗತಿಯ ಎಸೆತವನ್ನು ಅರಿಯದ ಹೆಡ್, ಖ್ಯಾಚಿತ್ತು ಔಟಾದರು. ಆಗ ತಂಡದ ಮೊತ್ತ ಕೇವಲ 8 ರನ್ಗಳಾಗಿತ್ತು.

ಶಮಿ ಬಳಿಕ ಬೌಲಿಂಗ್ಗೆ ಬಂದ ಪ್ರಿನ್ಸ್ ಯಾದವ್, ಈ ಓವರ್ನ ಮೂರನೇ ಎಸೆತದಲ್ಲಿ ಎಸ್ಆರ್ಎಚ್ ನಾಯಕ ಇಶಾನ್ ಕಿಶನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಕಿಶನ್ ಕೇವಲ 1 ರನ್ ಬಾರಿಸಿ ಔಟಾದರು. ಸನ್‌ರೈಸರ್ಸ್ ಪರ ಮೊದಲ ಪಂದ್ಯವನ್ನಾಡಿದ ಲಿವಿಂಗ್ಸ್ಟೋನ್ ಕೂಡ 14 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಹೀಗಾಗಿ ಸನ್‌ರೈಸರ್ಸ್ ತಂಡ 26 ರನ್‌ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತು.




