- TV9 Kannada Photo gallery Cricket photos India T20 Squad Shake Up: Will Samson, Tilak, Prasidh Lose Their Spots?
ಸಂಜು ಸ್ಯಾಮ್ಸನ್ ಸೇರಿದಂತೆ ಟೀಂ ಇಂಡಿಯಾದ ಈ ಮೂವರಿಗೆ ಶೀಘ್ರದಲ್ಲೇ ಗೇಟ್ಪಾಸ್
T20 Team India: ಕಳಪೆ ಹಾಗೂ ಅಸ್ಥಿರ ಪ್ರದರ್ಶನ ನೀಡುತ್ತಿರುವ ಟಿ20 ಟೀಂ ಇಂಡಿಯಾದ ಕೆಲವು ಆಟಗಾರರು ತಂಡದಿಂದ ಹೊರಗುಳಿಯುವ ಸಾಧ್ಯತೆಯಿದೆ. ಯುವ ಪ್ರತಿಭೆಗಳಿಗೆ ಅವಕಾಶ ಸಿಗದಂತೆ ಮಾಡುತ್ತಿರುವ ಇವರಿಗೆ ಮಂಡಳಿ ಕೊನೆಯ ಅವಕಾಶ ನೀಡಿದೆ. ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಅವರ ನಿಧಾನಗತಿಯ ಬ್ಯಾಟಿಂಗ್ ಮತ್ತು ಪ್ರಸಿದ್ಧ್ ಕೃಷ್ಣರ ದುಬಾರಿ ಬೌಲಿಂಗ್ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಇವರು ಇಷ್ಟರಲ್ಲೇ ತಂಡದಿಂದ ಗೇಟ್ಪಾಸ್ ಪಡೆಯುವುದು ಖಚಿತ.
Updated on: Jul 02, 2026 | 6:57 PM

ಟಿ20 ಸರಣಿಗಾಗಿ ವಿದೇಶ ಪ್ರವಾಸದಲ್ಲಿರುವ ಟೀಂ ಇಂಡಿಯಾಕ್ಕೆ ಕೆಲವು ಆಟಗಾರರ ಕಳಪೆ ಪ್ರದರ್ಶನ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಭವಿಷ್ಯದ ಬಲಿಷ್ಠ ಟಿ20 ತಂಡವನ್ನು ಕಟ್ಟುವ ಸಲುವಾಗಿ ಈ ಆಟಗಾರರಿಗೆ ತಂಡದಲ್ಲಿ ಅವಕಾಶಗಳ ಮೇಲೆ ಅವಕಾಶಗಳನ್ನು ನೀಡಲಾಗುತ್ತಿದೆಯಾದರೂ ಅವರ ಪ್ರದರ್ಶನ ಮಾತ್ರ ಸ್ಥಿರವಾಗಿಲ್ಲ. ಒಂದು ಪಂದ್ಯದಲ್ಲಿ ಮಿಂಚಿದರೆ, ಉಳಿದ ಐದು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ (PC-BCCI).

ಇದರಿಂದಾಗಿ ಭಾರತದಲ್ಲಿರುವ ಉಳಿದ ಯುವ ಪ್ರತಿಭೆಗಳಿಗೂ ತಂಡದಲ್ಲಿ ಅವಕಾಶ ನೀಡಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ತಂಡದಲ್ಲಿರುವ ಆಟಗಾರರಿಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆಯಾದರೂ ಅವರ ಪ್ರದರ್ಶನದಲ್ಲಿ ಸುಧಾರಣೆ ಕಂಡುಬಂದಿಲ್ಲ. ಹೀಗಾಗಿ ಕೆಲವು ಆಟಗಾರರಿಗೆ ಭಾರತ ಟಿ20 ತಂಡದಿಂದ ಇಷ್ಟರಲ್ಲೇ ಗೇಟ್ಪಾಸ್ ಸಿಗುವುದು ಖಚಿತವಾಗಿದೆ. ಅವರಲ್ಲಿ ಪ್ರಮುಖ 3 ಆಟಗಾರರ ವಿವರ ಇಲ್ಲಿದೆ (PC-BCCI).

ಟೀಂ ಇಂಡಿಯಾದ ಅನುಭವಿ ಆರಂಭಿಕ ಸಂಜು ಸ್ಯಾಮ್ಸನ್ ಅವರ ಪ್ರದರ್ಶನ ತೀರ ಕಳಪೆಯಾಗಿದೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಜೊತೆಗೆ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿಯೂ ಅವರ ಆಟ ವಿಶೇಷವಾಗಿರಲಿಲ್ಲ. ನಿರಂತರವಾಗಿ ಕಳಪೆ ಪ್ರದರ್ಶನ ನೀಡುತ್ತಿರುವ ಸಂಜು ಅವರ ಸ್ಥಾನದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳು ಉದ್ಭವಿಸಿವೆ. ಹೀಗಾಗಿ ಮುಂದಿನ ಸರಣಿ ವೇಳೆಗೆ ಸಂಜು ಅವರ ಭವಿಷ್ಯ ನಿರ್ಧಾರವಾಗಲಿದೆ (PC-PTI).

ಯಾವುದೇ ತಂಡಕ್ಕೂ ಮಧ್ಯಮ ಕ್ರಮಾಂಕ ದೊಡ್ಡ ಶಕ್ತಿಯಾಗಿರುತ್ತದೆ. ಆದರೆ ಭಾರತ ಟಿ20 ತಂಡದ ಮಧ್ಯಮ ಕ್ರಮಾಂಕದಲ್ಲಿ ಆಡುವ ತಿಲಕ್ ವರ್ಮಾ ಕೆಲವು ಉತ್ತಮ ಇನ್ನಿಂಗ್ಸ್ಗಳನ್ನು ಆಡಿದ್ದರೂ, ಅವರ ಸ್ಟ್ರೈಕ್ ರೇಟ್ ಕಳವಳಕಾರಿ ವಿಷಯವಾಗಿದೆ. ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿವ ಅವರು ಕೊನೆಯ ಮೂರು ಇನ್ನಿಂಗ್ಸ್ಗಳಲ್ಲಿ 19 (21), 55 (46) ಮತ್ತು 13 (13) ರನ್ ಗಳಿಸಿದ್ದಾರೆ. ಅಂದರೆ ತಿಲಕ್ ರನ್ ಗಳಿಸುತ್ತಿದ್ದಾರೆಯಾದರೂ ಅದರಲ್ಲಿ ವೇಗವಿಲ್ಲ. ಹೀಗಾಗಿ ಅವರ ಸ್ಥಾನವೂ ಅಪಾಯದಲ್ಲಿದೆ (PC-PTI).

ಇದು ಬ್ಯಾಟ್ಸ್ಮನ್ಗಳ ಕಥೆಯಾದರೆ, ಬೌಲಿಂಗ್ ವಿಭಾಗದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಭಾರತ ಟಿ20 ತಂಡದ ಬಾಗಿಲು ಭಾಗಶಃ ಮುಚ್ಚಿದೆ ಎನ್ನಬಹುದು. ಐಪಿಎಲ್ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುವ ಪ್ರಸಿದ್ಧ್ ಭಾರತ ಟಿ20 ತಂಡದಲ್ಲಿ ಮಾತ್ರ ರನ್ ಮಷಿನ್ ಆಗಿ ಗುರುತಿಸಿಕೊಂಡಿದ್ದಾರೆ. ಉಳಿದ ಬೌಲರ್ಗಳಿಗೆ ಹೋಲಿಸಿಕೊಂಡರೆ, ಪ್ರಸಿದ್ಧ್ ಅವರ ಬೌಲಿಂಗ್ನಲ್ಲಿ ವಿಶೇಷತೆ ಇಲ್ಲ. ಹೀಗಾಗಿ ಅವರಿಗೂ ಟಿ20 ತಂಡದಿಂದ ಗೇಟ್ಪಾಸ್ ಸಿಗುವುದು ಖಚಿತವಾಗಿದೆ (PC-PTI).




