AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಿ ನೆಲದಲ್ಲಿ ಅತಿ ಹೆಚ್ಚು ರನ್; ಅಗ್ರಸ್ಥಾನದಲ್ಲಿ ರೋಹಿತ್

Team India ODI Crisis: ಐಪಿಎಲ್ ನಂತರ ಟೀಂ ಇಂಡಿಯಾ ವಿದೇಶಿ ಏಕದಿನ ಸರಣಿಗಳಲ್ಲಿ ವೈಫಲ್ಯ ಕಂಡಿದೆ. ಬ್ಯಾಟಿಂಗ್ ವಿಭಾಗದ ಕಳಪೆ ಪ್ರದರ್ಶನವೇ ಮುಖ್ಯ ಕಾರಣ. ರೋಹಿತ್ ಶರ್ಮಾ ಗರಿಷ್ಠ ರನ್ ಗಳಿಸಿದ್ದರೂ, ತಂಡದಿಂದ ಕೈಬಿಡುವ ಸಾಧ್ಯತೆಯಿದೆ. ಆದರೆ, ಕಳಪೆ ಪ್ರದರ್ಶನ ನೀಡಿದ ಕೆಎಲ್ ರಾಹುಲ್ ಅವರನ್ನು ಉಳಿಸಿಕೊಳ್ಳಲಾಗಿದೆ. ಇದು ತಂಡದ ಆಯ್ಕೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪೃಥ್ವಿಶಂಕರ
|

Updated on: Jul 20, 2026 | 9:09 PM

Share
ಐಪಿಎಲ್ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಟೀಂ ಇಂಡಿಯಾಕ್ಕೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಅಫ್ಘಾನಿಸ್ತಾನ ವಿರುದ್ಧದ ಸರಣಿಯನ್ನು ಬಿಟ್ಟರೆ, ಉಳಿದ ಮೂರು ಸರಣಿಗಳಲ್ಲಿ ತಂಡದ ಪ್ರದರ್ಶನ ಹೀನಾಯವಾಗಿತ್ತು. ಅದರಲ್ಲೂ ಐರ್ಲೆಂಡ್ ಹಾಗೂ ಇಂಗ್ಲೆಂಡ್‌ ಪ್ರವಾಸಗಳಲ್ಲಿ ತಂಡದ ಬ್ಯಾಟಿಂಗ್‌ ವಿಭಾಗ ಸಪ್ಪೆ ಪ್ರದರ್ಶನ ನೀಡಿತು (PC-BCCI).

1 / 6
ಮೊದಲಿಗೆ ಐರ್ಲೆಂಡ್ ವಿರುದ್ಧ ವೈಟ್ ವಾಶ್ ಆಗಿದ್ದ ಟೀಂ ಇಂಡಿಯಾ ಆ ಬಳಿಕ ಇಂಗ್ಲೆಂಡ್ ಪ್ರವಾಸದಲ್ಲೂ ತನ್ನ ಕಳಪೆ ಪ್ರದರ್ಶನವನ್ನು ಮುಂದುವರೆಸಿತು. ಮೊದಲು ಟಿ20 ಸರಣಿಯನ್ನು ಕಳೆದುಕೊಂಡ ಭಾರತ ತಂಡ ನಂತರ ಏಕದಿನ ಸರಣಿಯನ್ನೂ ಸೋತಿದೆ. ಗಮನಿಸಬೇಕಾದ ಸಂಗತಿಯೆಂದರೆ ಟೀಂ ಇಂಡಿಯಾ ಕಳೆದ ಮೂರು ವಿದೇಶಿ ಏಕದಿನ ಸರಣಿಗಳನ್ನು ಸೋತಿದೆ. ಇದಕ್ಕೆ ಕಾರಣ ಬ್ಯಾಟಿಂಗ್‌ ವಿಭಾಗದ ವೈಫಲ್ಯ(PC-BCCI).

2 / 6
ಆದಾಗ್ಯೂ ಇಲ್ಲಿ ಅಚ್ಚರಿಯ ಸಂಗತಿಯೆಂದರೆ ಈ ಮೂರು ವಿದೇಶಿ ಏಕದಿನ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬ್ಯಾಟ್ಸ್‌ಮನ್‌ನನ್ನು ಏಕದಿನ ತಂಡದಿಂದ ಕೈಬಿಡಲು ತಯಾರಿ ನಡೆಸಲಾಗುತ್ತಿದೆ. ಇದಕ್ಕೆ ತದ್ವೀರುದ್ದವಾಗಿ ಈ ಮೂರು ಸರಣಿಗಳಲ್ಲಿ ಕೆಟ್ಟ ಪ್ರದರ್ಶನ ನೀಡಿದ ಆಟಗಾರನನ್ನು ತಂಡದಲ್ಲಿಯೇ ಮುಂದುವರೆಸಲಾಗುತ್ತಿದೆ(PC-BCCI).

3 / 6
ವಿದೇಶದಲ್ಲಿ ಆಡಿದ ಕೊನೆಯ ಮೂರು ಏಕದಿನ ಸರಣಿಗಳಲ್ಲಿ ಭಾರತದ ಪರ ರೋಹಿತ್ ಶರ್ಮಾ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ರೋಹಿತ್ ಆಡಿರುವ 9 ಪಂದ್ಯಗಳಲ್ಲಿ 534 ರನ್ ಗಳಿಸಿದ್ದಾರೆ. ರೋಹಿತ್ ಹೊರತುಪಡಿಸಿ ತಂಡದ ಬೇರೆ ಯಾವುದೇ ಬ್ಯಾಟ್ಸ್‌ಮನ್ 300 ರನ್‌ಗಳ ಗಡಿಯನ್ನು ತಲುಪಿಲ್ಲ(PC-BCCI).

4 / 6
ವಿದೇಶದಲ್ಲಿ ಆಡಿದ ಕೊನೆಯ ಮೂರು ಏಕದಿನ ಸರಣಿಗಳಲ್ಲಿ, ಶುಭ್​ಮನ್ ಗಿಲ್ ಆಡಿದ 9 ಪಂದ್ಯಗಳಲ್ಲಿ 288 ರನ್ ಬಾರಿಸಿದ್ದರೆ, ವಿರಾಟ್ ಕೊಹ್ಲಿ 276 ರನ್ ಮತ್ತು ಅಕ್ಷರ್ ಪಟೇಲ್ 214 ರನ್ ಗಳಿಸಿದ್ದಾರೆ. ಶ್ರೇಯಸ್ ಅಯ್ಯರ್ ಕಳೆದ ಮೂರು ಏಕದಿನ ಸರಣಿಗಳಲ್ಲಿ ಆಡಿದ 8 ಪಂದ್ಯಗಳಲ್ಲಿ 211 ರನ್ ಬಾರಿಸಿದ್ದಾರೆ. ವಾಷಿಂಗ್ಟನ್ ಸುಂದರ್ ಕೂಡ ಆಡಿದ 7 ಇನ್ನಿಂಗ್ಸ್‌ಗಳಲ್ಲಿ ಕೇವಲ 126 ರನ್ ಗಳಿಸಿದ್ದಾರೆ(PC-BCCI).

5 / 6
ಇವರನ್ನು ಹೊರತುಪಡಿಸಿದರೆ, ಕಳೆದ ಮೂರು ವಿದೇಶಿ ಏಕದಿನ ಸರಣಿಗಳಲ್ಲಿ ಅತಿ ಕಡಿಮೆ ರನ್ ಕಲೆಹಾಕಿದ ಬ್ಯಾಟರ್​​ಗಳ ಪಟ್ಟಿಯಲ್ಲಿ ಕೆಎಲ್ ರಾಹುಲ್ ಅವರ ಸ್ಥಿತಿ ಹೀನಾಯವಾಗಿದೆ. ಕಳೆದ ಮೂರು ವಿದೇಶ ಏಕದಿನ ಸರಣಿಗಳಲ್ಲಿ 6 ಏಕದಿನ ಪಂದ್ಯಗಳನ್ನಾಡಿರುವ ರಾಹುಲ್ ಕೇವಲ 93 ರನ್ ಗಳಿಸಿದ್ದಾರೆ. ವಿದೇಶಿ ನೆಲಗಳಲ್ಲಿ ರಾಹುಲ್ ಅವರ ಪ್ರದರ್ಶನ ಇದೇ ರೀತಿ ಮುಂದುವರೆದರೆ ಅವರ ಸ್ಥಾನಕ್ಕೆ ಕುತ್ತು ಬರುವುದು ಖಚಿತ(PC-BCCI).

6 / 6
Follow Us
ಶಾಸ್ತ್ರದ ಪ್ರಕಾರ ಪತ್ನಿ ಚೆನ್ನಮ್ಮನನ್ನು ಕಳಿಸಿಕೊಟ್ಟ ದೇವೇಗೌಡ್ರು

ತಾಯಿ ಚೆನ್ನಮ್ಮ ಅಂತಿಮ ಸಂಸ್ಕಾರದ ಬಳಿಕ ಕುಮಾರಸ್ವಾಮಿ ಭಾವುಕ ಮಾತು

ಮಣ್ಣಲ್ಲಿ ಮಣ್ಣಾದ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ‘ಚೆನ್ನಮ್ಮ‘

ಜಂತರ್ ಮಂತರ್ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ

ಅಂತ್ಯಕ್ರಿಯೆಗೂ ಮುನ್ನ ಚೆನ್ನಮ್ಮನ ಬಗ್ಗೆ ಹೆಚ್​​​​ಡಿಡಿ ಭಾವುಕ ಮಾತು

ಪ್ರೀತಿಯ ಚುಂಬನ: ಪುತ್ರ ರೇವಣ್ಣರಿಂದ ತಾಯಿಗೆ ಅಂತಿನ ನಮನ

ತಾಯಿ ಹಣೆಗೆ ಮುತ್ತಿಟ್ಟು ಕಣ್ಣೀರು ಹಾಕಿದ ಹೆಚ್​​​​.ಡಿ ಕುಮಾರಸ್ವಾಮಿ

ಚೆನ್ನಮ್ಮರ ಅಂತಿಮ ವಿಧಿವಿಧಾನ ಕಾರ್ಯ ನೆರವೇರಿಸುವವರು ಇವರೇ

ಚನ್ನಮ್ಮ ಪಾರ್ಥಿವ ಶರೀರ ಹೊತ್ತು ತರಲು ಹೂವಿನ ಪಲ್ಲಕಿ ಹೇಗಿದೆ ನೋಡಿ

ಸೇತುವೆ ಸರಳು ಕಟ್: ರಾಯಚೂರು-ಮಂತ್ರಾಲಯ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್‌