- Kannada News Photo gallery Deepika Padukone Kissing Scene with Siddhant Chaturvedi In Gehraiyaan Trailer
Deepika Padukone: ವೈರಲ್ ಆಗುತ್ತಿದೆ ದೀಪಿಕಾ-ಸಿದ್ಧಾಂತ್ ಚತುರ್ವೇದಿ ಕಿಸ್ಸಿಂಗ್ ದೃಶ್ಯ; ಇಲ್ಲಿವೆ ಫೋಟೋಗಳು
‘ಗೆಹರಾಯಿಯಾ’ ಚಿತ್ರವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ನೇರವಾಗಿ ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ಈ ಚಿತ್ರ ರಿಲೀಸ್ ಆಗಲಿದೆ.
Updated on:Jan 24, 2022 | 2:53 PM

ಮದುವೆ ಬಳಿಕ ಸಾಕಷ್ಟು ಹೀರೋಯಿನ್ಗಳು ಮಡಿವಂತಿಕೆ ಮೆರೆಯುತ್ತಾರೆ. ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸೋಕೆ ನಿರಾಕರಿಸುತ್ತಾರೆ. ಆದರೆ, ಇನ್ನು ಕೆಲವರು ಹಾಗಲ್ಲ. ಪಾತ್ರ ನಿಜಕ್ಕೂ ಅದನ್ನು ಬೇಡಿದರೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸೋಕೂ ರೆಡಿ ಇರುತ್ತಾರೆ.

ನಟಿ ದೀಪಿಕಾ ಪಡುಕೋಣೆ (Deeepika Padukone) ಕೂಡ ಇದೇ ಸಾಲಿಗೆ ಸೇರುತ್ತಾರೆ. ಇಂದು ರಿಲೀಸ್ ಆಗಿರುವ ‘ಗೆಹರಾಯಿಯಾ’ ಟ್ರೇಲರ್ನಲ್ಲಿ ದೀಪಿಕಾ ಮಸ್ತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಅವರ ಕಿಸ್ಸಿಂಗ್ ದೃಶ್ಯಗಳು ಈ ಟ್ರೇಲರ್ನಲ್ಲಿ ಎಲ್ಲರ ಕಣ್ಣು ಕುಕ್ಕಿದೆ. ಈ ಟ್ರೇಲರ್ಗೆ ನಾನಾ ರೀತಿಯ ಕಮೆಂಟ್ಗಳು ಬರುತ್ತಿವೆ.

‘ಗೆಹರಾಯಿಯಾ’ ಚಿತ್ರದಲ್ಲಿ ಸಂಬಂಧಗಳ ಬಗ್ಗೆ ಹೇಳಲಾಗಿದೆ ಎಂಬುದನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ. ಆಲಿಶಾ (ದೀಪಿಕಾ ಪಡುಕೋಣೆ) ಹಾಗೂ ಕರಣ್ (ಧೈರ್ಯ ಕರ್ವ) ಪ್ರೇಮಿಗಳು.

ಆದರೆ, ಇವರ ನಡುವೆ ಯಾವುದೂ ಸರಿ ಇಲ್ಲ. ಇವರ ಸಂಬಂಧ ಸಂಪೂರ್ಣವಾಗಿ ಕೆಟ್ಟು ಹೋಗಿದೆ. ಆಗ ಆಲಿಶಾಗೆ ಪರಿಚಯ ಆಗೋದು, ಝೈನ್ (ಸಿದ್ಧಾಂತ್ ಚತುರ್ವೇದಿ ಚತುರ್ವೇದಿ). ಆಲಿಶಾ ಕಸಿನ್ ಟಿಯಾ (ಅನನ್ಯಾ ಪಾಂಡೆ) ಹಾಗೂ ಝೈನ್ ಮದುವೆ ನಿಗದಿ ಆಗಿದೆ. ಆದರೆ, ಝೈನ್ ಹಾಗೂ ಆಲಿಶಾ ನಡುವೆ ಅಫೇರ್ ಬೆಳೆಯುತ್ತದೆ.

ಇದಿಷ್ಟು ವಿಚಾರವನ್ನು ಟ್ರೇಲರ್ನಲ್ಲಿ ಹೇಳಲಾಗಿದೆ. ಈ ಸಿನಿಮಾದ ಕಥೆ ಹೇಗೆ ಸಾಗುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಈ ಸಿನಿಮಾದಲ್ಲಿ ದೀಪಿಕಾ ಹಾಗೂ ಸಿದ್ಧಾಂತ್ ಚತುರ್ವೇದಿ ನಡುವೆ ಸಾಕಷ್ಟು ಕಿಸ್ಸಿಂಗ್ ದೃಶ್ಯಗಳಿವೆ. ದೀಪಿಕಾ ಸಿನಿಮಾದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಸದ್ಯ, ಟ್ರೇಲರ್ ಸಾಕಷ್ಟು ವೈರಲ್ ಆಗುತ್ತಿದೆ. ದೀಪಿಕಾ ನಟನೆ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಗೆಹರಾಯಿಯಾ’ ಚಿತ್ರವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ನೇರವಾಗಿ ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ಈ ಚಿತ್ರ ರಿಲೀಸ್ ಆಗಲಿದೆ.

ಈ ಸಿನಿಮಾ ತುಂಬ ರೊಮ್ಯಾಂಟಿಕ್ ಆದಂತಹ ಕಥೆಯನ್ನು ಒಳಗೊಂಡಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸಾಕ್ಷಿ ಸಿಕ್ಕಿದೆ. ‘ಗೆಹರಾಯಿಯಾ’ ಬಗ್ಗೆ ದೀಪಿಕಾ ಪಡುಕೋಣೆ ಅವರಿಗೆ ವಿಶೇಷ ಪ್ರೀತಿ ಇದೆ. ನಟಿ ಅನನ್ಯಾ ಪಾಂಡೆ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಈ ಚಿತ್ರ ಫೆಬ್ರವರಿ 11ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ.
Published On - 4:36 pm, Thu, 20 January 22




