Updated on:Dec 21, 2023 | 10:49 AM
ಡಿಸೆಂಬರ್ ಆರಂಭ ಆಗುತ್ತಿದ್ದಂತೆ ಅನೇಕ ಸೆಲೆಬ್ರಿಟಿಗಳು ವಿದೇಶಕ್ಕೆ ತೆರಳುತ್ತಾರೆ. ಅಲ್ಲಿ ಹಾಯಾಗಿ ಸಮಯ ಕಳೆಯುತ್ತಾರೆ. ದಿಶಾ ಪಟಾಣಿ ಹಾಗೂ ಮೌನಿ ರಾಯ್ ಕೂಡ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ದಿಶಾ ಪಟಾಣಿ ಹಾಗೂ ಮೌನಿ ರಾಯ್ಗೆ ಬಾಲಿವುಡ್ನಲ್ಲಿ ಬೇಡಿಕೆ ಇದೆ. ಹಲವು ಸಿನಿಮಾಗಳನ್ನು ಒಪ್ಪಿ ಇವರು ನಟಿಸುತ್ತಿದ್ದಾರೆ. ಇಬ್ಬರೂ ಒಟ್ಟಿಗೆ ಟ್ರಿಪ್ಗೆ ತೆರಳಿದ್ದಾರೆ. ಈ ಮೂಲಕ ತಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅನ್ನೋದನ್ನು ಸಾಬೀತು ಮಾಡಿದ್ದಾರೆ.
ದಿಶಾ ಪಟಾಣಿ ಹಾಗೂ ಮೌನಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳಿಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ. ದಿಶಾ ಅವರನ್ನು ‘ನನ್ನ ಫೇವರಿಟ್ ಪರ್ಸನ್’ ಎಂದು ಮೌನಿ ಕರೆದಿದ್ದಾರೆ.
ದಿಶಾ ಪಟಾಣಿ ಬಿಕಿನಿ ಧರಿಸಿ ಬೀಚ್ ಅಂಚಿನಲ್ಲಿ ನಿಂತಿದ್ದಾರೆ. ಈ ಫೋಟೋಗಳನ್ನು ನೋಡಿ ಫ್ಯಾನ್ಸ್ ಕಣ್ಣರಳಿಸಿದ್ದಾರೆ. ಅವರ ಬೋಲ್ಡ್ ಫೋಟೋ ನೋಡಿ ಹಲವರು ಮೆಚ್ಚಿಕೊಂಡಿದ್ದಾರೆ.
ದಿಶಾ ಪಟಾಣಿ ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಈ ಮೊದಲು ಟೈಗರ್ ಶ್ರಾಫ್ ಜೊತೆ ಅವರು ಡೇಟಿಂಗ್ ಮಾಡುತ್ತಿದ್ದರು. ಆದರೆ, ಇವರ ಪ್ರೇಮ ಬ್ರೇಕಪ್ನಲ್ಲಿ ಕೊನೆ ಆಗಿದೆ.
ಮೌನಿ ರಾಯ್ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ಅವರು ಸಿನಿಮಾಗಳಲ್ಲೂ ನಟಿಸಿ ಫೇಮಸ್ ಆಗಿದ್ದಾರೆ. ‘ಕೆಜಿಎಫ್’ ಸಿನಿಮಾದ ಹಿಂದಿ ವರ್ಷನ್ ‘ಗಲಿ ಗಲಿ’ ಹಾಡಿನಲ್ಲಿ ಮೌನಿ ಹೆಜ್ಜೆ ಹಾಕಿದ್ದರು.
Published On - 10:43 am, Thu, 21 December 23