ದುಲ್ಕರ್ ಸಲ್ಮಾನ್ 41ನೇ ಸಿನಿಮಾಗೆ ಮುಹೂರ್ತ; ಶುಭ ಕೋರಿದ ನಟ ನಾನಿ
ಹೊಸದೊಂದು ಹೃದಯಸ್ಪರ್ಶಿ ಲವ್ ಸ್ಟೋರಿ ಸಿನಿಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಮಲಯಾಳಂನ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಅವರು ರೆಡಿಯಾಗಿದ್ದಾರೆ. ದುಲ್ಕರ್ ಅಭಿನಯದ ಹೊಸ ಸಿನಿಮಾಗೆ ಮುಹೂರ್ತ ಮಾಡಲಾಗಿದೆ. ಟಾಲಿವುಡ್ ನಟ ನಾನಿ ಅವರು ಕ್ಲ್ಯಾಪ್ ಮಾಡಿದ್ದಾರೆ. ಮುಹೂರ್ತದ ಫೋಟೋಗಳು ಇಲ್ಲಿವೆ.
Updated on: Aug 04, 2025 | 6:09 PM

ಇದು ದುಲ್ಕರ್ ಸಲ್ಮಾನ್ ನಟಿಸುತ್ತಿರುವ 41ನೇ ಸಿನಿಮಾ. ಅದ್ದೂರಿಯಾಗಿ ಮುಹೂರ್ತ ಸಮಾರಂಭ ನೆರವೇರಿದೆ. ಇನ್ನೂ ಶೀರ್ಷಿಕೆ ಬಹಿರಂಗ ಆಗಿಲ್ಲ. ಸದ್ಯಕ್ಕೆ ಈ ಸಿನಿಮಾವನ್ನು ‘DQ41’ ಎಂದು ಕರೆಯಲಾಗುತ್ತಿದೆ.

ಈ ಸಿನಿಮಾದ ಮೊದಲ ದೃಶ್ಯಕ್ಕೆ ನಟ ನಾನಿ ಅವರು ಕ್ಲ್ಯಾಪ್ ಮಾಡುವ ಮೂಲಕ ಶುಭ ಹಾರೈಸಿದರು. ಈ ಸಿನಿಮಾಗೆ ರವಿ ನೆಲಕುಡಿತಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ರವಿ ನಿರ್ದೇಶನದ ಮೊದಲ ಸಿನಿಮಾ ಇದು.

ಯುವ ನಿರ್ದೇಶಕನ ಜತೆ ದುಲ್ಕರ್ ಸಲ್ಮಾನ್ ಕೈ ಜೋಡಿಸಿರುವುದರಿಂದ ನಿರೀಕ್ಷೆ ಮೂಡಿದೆ. ‘ಸೀತಾ ರಾಮಂ’ ಸಿನಿಮಾದಲ್ಲಿ ಗಮನ ಸೆಳೆದಿದ್ದ ದುಲ್ಕರ್ ಅವರು ಮತ್ತೆ ಹೃದಯಸ್ಪರ್ಶಿ ಪ್ರೇಮಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಈ ಚಿತ್ರವು ‘ಎಸ್‌ಎಲ್‌ವಿ’ ಬ್ಯಾನರ್ ಮೂಲಕ ನಿರ್ಮಾಣ ಆಗುತ್ತಿದೆ. ದುಲ್ಕರ್ ಸಲ್ಮಾನ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಮಲಯಾಳಂ ಹಾಗೂ ತೆಲುಗು ಸಿನಿಮಾರಂಗದಲ್ಲಿ ಅವರು ಮಿಂಚುತ್ತಿದ್ದಾರೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಜಿವಿ ಪ್ರಕಾಶ್ ಕುಮಾರ್ ಅವರು ‘DQ41’ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ತೆಲುಗು, ಮಲಯಾಳಂ, ಕನ್ನಡ, ತಮಿಳು ಮತ್ತು ಹಿಂದಿಯಲ್ಲೂ ಈ ಸಿನಿಮಾ ರಿಲೀಸ್ ಆಗಲಿದೆ.




