ನಾನು ಮತ್ತು ಗುಂಡ 2: ಸೆಪ್ಟೆಂಬರ್ 5ರಂದು ತೆರೆಗೆ ಬರಲಿದೆ ಕಾಮಿಡಿ, ಎಮೋಷನಲ್ ಸಿನಿಮಾ
ರಾಕೇಶ್ ಅಡಿಗ, ರಚನಾ ಇಂದರ್ ಬಾಲನಟ ಜೀವನ್ ಮುಂತಾದವರು ‘ನಾನು ಮತ್ತು ಗುಂಡ 2’ ಚಿತ್ರದಲ್ಲಿ ನಟಿಸಿದ್ದಾರೆ. ‘ಪೊಯೆಮ್ ಪಿಕ್ಚರ್ಸ್’ ಲಾಂಛನದಲ್ಲಿ ರಘು ಹಾಸನ್ ಅವರು ಈ ಚಿತ್ರನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ. ಆರ್.ಪಿ. ಪಟ್ನಾಯಕ್ ಅವರ ಸಂಗೀತ, ರಿತ್ವಿಕ್ ಮುರಳಿಧರ್ ಅವರ ಹಿನ್ನೆಲೆ ಸಂಗೀತ, ತನ್ವಿಕ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ರೋಹಿತ್ ರಮನ್ ಅವರು ಸಂಭಾಷಣೆ ಮತ್ತು ಸಾಹಿತ್ಯ ರಚಿಸಿದ್ದಾರೆ.
Updated on: Sep 03, 2025 | 6:19 PM

2020ರಲ್ಲಿ ‘ನಾನು ಮತ್ತು ಗುಂಡ’ ಚಿತ್ರವು ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಸೆಳೆದಿತ್ತು. ಈಗ ಆ ಸಿನಿಮಾ ಮುಂದುವರಿದ ಭಾಗವಾಗಿ ‘ನಾನು ಮತ್ತು ಗುಂಡ 2’ ಸಿನಿಮಾ ತಯಾರಾಗಿದೆ. ಸೆ.5ರಂದು ಬಿಡುಗಡೆ ಆಗಲಿದೆ.

‘ನಾನು ಮತ್ತು ಗುಂಡ’ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದ ರಘು ಹಾಸನ್ ಅವರೇ ಈಗ ‘ನಾನು ಮತ್ತು ಗುಂಡ 2’ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಕೂಡ ಅವರೇ ಮಾಡಿದ್ದಾರೆ.

ಈ ಸಿನಿಮಾದಲ್ಲಿ ರಾಕೇಶ್ ಅಡಿಗ, ರಚನಾ ಇಂದರ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಆರ್.ಪಿ. ಪಟ್ನಾಯಕ್ ಅವರ ಸಂಗೀತ ಸಂಯೋಜನೆಯಲ್ಲಿ ಈ ಸಿನಿಮಾದ ಹಾಡುಗಳು ಮೂಡಿಬಂದಿದೆ.

ಸೆನ್ಸಾರ್ ಮಂಡಳಿಯಿಂದ ಈ ಸಿನಿಮಾಗೆ ಯಾವುದೇ ಕಟ್ ಇಲ್ಲದೇ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಶಂಕರನ ನಿಧನದ ಬಳಿಕ ಆತನ ಮಗನಿಂದ ಕಥೆ ಮುಂದುವರಿಯುತ್ತೆ. ಶಂಕರನ ಮಗನಾಗಿ ರಾಕೇಶ್ ಅಡಿಗ ನಟಿಸಿದ್ದಾರೆ.

ಊಟಿ, ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು, ಬೆಂಗಳುರು ಸುತ್ತಮುತ್ತ ‘ನಾನು ಮತ್ತು ಗುಂಡ 2’ ಸಿನಿಮಾಗೆ ಚಿತ್ರೀಕರಣ ಮಾಡಲಾಗಿದೆ. ಸಿಂಬಾ ಜೊತೆ ಬಂಟಿ ಎಂಬ ನಾಯಿ ಕೂಡ ಈ ಚಿತ್ರದಲ್ಲಿ ನಟಿಸಿದೆ.




