- Kannada News Photo gallery Happy Birthday Katrina Kaif Bollywood actress with husband actor Vicky Kaushal celebrate birthday in Maldives
Happy Birthday Katrina Kaif: ಮದುವೆ ಬಳಿಕ ಮೊದಲ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಾರ್ಬಿ ಡಾಲ್ ಕತ್ರಿನಾ ಕೈಫ್
HBD Katrina Kaif: ಇಂದು ಬಾಲಿವುಡ್ ನಟಿ ಕತ್ರಿನಾ ಕೈಫ್ ಹುಟ್ಟುಹಬ್ಬ. ಕಳೆದ 15 ವರ್ಷಗಳಲ್ಲಿ ಬಾಲಿವುಡ್ ನಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿರುವ ಕ್ಯಾಟ್ ನಟ ಸಲ್ಮಾನ್ ಖಾನ್ ಅವರಿಂದ ಹಿಡಿದು ಅಕ್ಷಯ್ ಕುಮಾರ್ ವರೆಗೂ ತೆರೆ ಹಂಚಿಕೊಂಡಿದ್ದಾರೆ.
Updated on:Jul 16, 2022 | 8:05 AM

ಇಂದು ಬಾಲಿವುಡ್ ನಟಿ ಕತ್ರಿನಾ ಕೈಫ್ ಹುಟ್ಟುಹಬ್ಬ. ಕಳೆದ 15 ವರ್ಷಗಳಲ್ಲಿ ಬಾಲಿವುಡ್ ನಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿರುವ ಕ್ಯಾಟ್ ನಟ ಸಲ್ಮಾನ್ ಖಾನ್ ಅವರಿಂದ ಹಿಡಿದು ಅಕ್ಷಯ್ ಕುಮಾರ್ ವರೆಗೂ ತೆರೆ ಹಂಚಿಕೊಂಡಿದ್ದಾರೆ.

ಬ್ಯಾಂಗ್-ಬ್ಯಾಂಗ್, ಟೈಗರ್ ಜಿಂದಾ ಹೈ, ಧೂಮ್ 3, ನಮಸ್ತೆ ಲಂಡನ್, ಆಜಬ್ ಪ್ರೇಮ್ ಕಿ ಘಜೀಜ್ ಕಹಾನಿ ಸೇರಿದಂತೆ ಅನೇಕ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬಾಲಿವುಡ್ ನ ಈ ಸುಂದರಿಗೆ ಇಂದು ಜನ್ಮ ದಿನದ ಸಂಭ್ರಮ.

ಕತ್ರಿನಾ ಕೈಫ್ ಈ ಬಾರಿ ತಮ್ಮ ಹುಟ್ಟು ಹಬ್ಬವನ್ನು ಮಾಲ್ಡಿವ್ಸ್ ನಲ್ಲಿ ಆಚರಿಸಿಕೊಳ್ಳಲಿದ್ದಾರಂತೆ. ಈ ಪ್ರಯುಕ್ತ ಪತಿ ವಿಕ್ಕಿ ಕೌಶಲ್ ಜೊತೆ ಅವರು ಮಾಲ್ಡಿವ್ಸ್ ಗೆ ಹಾರಿದ್ದಾರೆ. ಶುಕ್ರವಾರ ಮಧ್ಯಾಹ್ನವೇ ಪತಿ ಜೊತೆ ವಿಮಾನ ಏರಿದ್ದ ಕತ್ರಿನಾ ಮಧ್ಯ ರಾತ್ರಿಯಿಂದಲೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಕತ್ರಿನಾ ಕೈಫ್ ಅವರು ಹುಟ್ಟು ಹಬ್ಬವು ಈ ಬಾರಿ ವಿಶೇಷತೆಯಿಂದ ಕೂಡಿರಲಿದೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ, ಕತ್ರಿನಾ ಪ್ರಗ್ನೆಂಟ್ ಅನ್ನುವ ಸುದ್ದಿಯೂ ಹರಿದಾಡುತ್ತಿದೆ. ಹುಟ್ಟು ಹಬ್ಬದ ಗಿಫ್ಟ್ ಆಗಿ ಈ ಸಿಹಿ ಸುದ್ದಿಯನ್ನು ಇಂದು ಅವರು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ ಎನ್ನುವ ಮಾಹಿತಿಯೂ ಇದೆ.

ಕತ್ರಿನಾ ತಾಯಿ ಆಗುತ್ತಿರುವ ವಿಷಯ ಹಲವು ದಿನಗಳಿಂದ ಬಾಲಿವುಡ್ ನಲ್ಲಿ ಹರಿದಾಡುತ್ತಿದ್ದರೂ, ಈವರೆಗೂ ಕತ್ರಿನಾ ಆಗಲಿ, ವಿಕ್ಕಿ ಆಗಲಿ ಯಾವುದೇ ಖಚಿತ ಮಾಹಿತಿ ನೀಡಿಲ್ಲ.

ಇಂದು ನಡೆಯಲಿರುವ ಹುಟ್ಟು ಹಬ್ಬದ ಪಾರ್ಟಿಯಲ್ಲಿ ವಿಕ್ಕಿ ಸಹೋದರ ಸನ್ನಿ ಕೌಶಲ್ ಮತ್ತು ಶಾರ್ವತಿ ವಾಘ್ ಕೂಡ ಭಾಗಿಯಾಗಲಿದ್ದು, ಆಪ್ತರಿಗೂ ಆಹ್ವಾನ ನೀಡಿದ್ದಾರಂತೆ.

ಸದ್ಯ ಕತ್ರಿನಾ ಸಿನಿಮಾ ರಂಗದಲ್ಲೂ ಬ್ಯುಸಿಯಾಗಿದ್ದು, ಸಲ್ಮಾನ್ ಖಾನ್ ನಟನೆಯ ಸಿನಿಮಾದಲ್ಲಿ ಕತ್ರಿನಾ ನಟಿಸುತ್ತಿದ್ದರೆ, ವಿಕ್ಕಿ ದಿ ಇಮ್ಮಾರ್ಟಲ್ ಅಶ್ವತ್ಥಾಮ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನು ಕತ್ರಿನಾ ಕೈಫ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಮುಂಬರುವ ಹಾರರ್ ಕಾಮಿಡಿ ಚಿತ್ರ 'ಫೋನ್ ಭೂತ್'ನ ಹೊಸ ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಲಾಗಿದೆ.
Published On - 8:04 am, Sat, 16 July 22




