- Kannada News Photo gallery Heavy Rain in Bengaluru: Bengaluru various areas photos Bengaluru News in Kannada
ಜಿಟಿ ಜಿಟಿ ಮಳೆ, ಮಂಜು ಬೆಂಗಳೂರು ನಗರ ಕಂಡಿದ್ದು ಹೀಗೆ, ಇಲ್ಲಿದೆ ಫೋಟೋಸ್
ಜಿಟಿ, ಜಿಟಿ ಮಳೆ, ಮಂಜು ಬೆಂಗಳೂರು ನಗರ ಸೋಮವಾರ ಊಟಿ, ಕೊಡಗಿನಂತಾಗಿತ್ತು. ರಾಜಧಾನಿ ಜನರು ಕುಟುಂಬ ಸಮೇತ ನಗರದ ಪಾರ್ಕ್ಗಳಿಗೆ ತೆರಳಿ ಎಂಜಾಯ್ ಮಾಡಿದರು. ಮಳೆಯಿಂದ ಮಣ್ಣಿನ ರಸ್ತೆಗಳಲ್ಲಿ ನೀರು ನಿಂತಿದ್ದು, ಓಡಾಡಲು ಪಾದಾಚಾರಿಗಳಿಗೆ ಸಾಕಷ್ಟು ತೊಂದರೆಯಾಯಿತು.
Updated on: Jul 16, 2024 | 8:08 AM

ಅರಬ್ಬಿ ಸಮುದ್ರದಲ್ಲಿ ಟ್ರಫ್ ಉಂಟಾಗಿದ್ದು, ರಾಜ್ಯದೆಲ್ಲೆಡೆ ಮಳೆಯಾಗುತ್ತಿದೆ. ಸದ್ಯ ಇದರ ಎಫೆಕ್ಟ್ ಬೆಂಗಳೂರಿಗೂ ತಟ್ಟಿದ್ದು, ಸೋಮವಾರ ಬೆಳ್ಳಂ ಬೆಳ್ಳಗ್ಗೆಯಿಂದಲೇ ಮಳೆ ಶುರುವಾಗಿತ್ತು. ಬೆಂಗಳೂರಿನಲ್ಲಿ ಮುಂಜಾನೆ ಮೋಡ ಕವಿದ ವಾತಾವರಣ, ತುಂತುರು ಮಳೆಯಾಯಿತು.

ಅರಬ್ಬಿ ಸಮುದ್ರದಲ್ಲಿ ಟ್ರಫ್ ಉಂಟಾಗಿರುವ ಹಿನ್ನೆಲೆಯಲ್ಲಿ ಹವಮಾನ ಇಲಾಖೆ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಭಾಗಕ್ಕೆ ಈಗಾಗಲೇ ಅಲರ್ಟ್ ನೀಡಿದೆ.

ಬೆಂಗಳೂರಿಗೂ ಮಳೆಯ ಅಲರ್ಟ್ ನೀಡಲಾಗಿದೆ. ನಗರ ಅಕ್ಷರಶಃ ಊಟಿ, ಕೊಡಗಿನಂತಾಗಿತ್ತು. ಹೀಗಾಗಿ ರಾಜಧಾನಿ ಜನರು ಕುಟುಂಬ ಸಮೇತ ನಗರದ ಪಾರ್ಕ್ಗಳಿಗೆ ತೆರಳಿ ಎಂಜಾಯ್ ಮಾಡಿದರು. ಜಿಟಿ, ಜಿಟಿ ಮಳೆ, ಮಂಜು ಬೆಂಗಳೂರು ನಗರ ಸೋಮವಾರ ಅಕ್ಷರಶಃ ಮಲೆನಾಡಿದಂತಾಗಿತ್ತು.

ಜಿಟಿ, ಜಟಿ ಮಳೆಗೆ ವಾಹನ ಸವಾರರು ರೋಸಿ ಹೋದರು. ನಗರದ ರಸ್ತೆಗಳಲ್ಲಿ ನೀರು ಕೂಡ ತುಂಬಿದ್ದರಿಂದ ನಗರದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಗರ ಮಿಶನ್ ರಸ್ತೆ, ಕೋರಮಂಗಲ ರಸ್ತೆಯಲ್ಲಿ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

ನಗರದ ಲಾಲ್ಬಾಗ್ ಪ್ರೇಮಿಗಳು, ನವ ಜೋಡಿಗಳು ತೆರಳಿ ಮಳೆಯಲ್ಲಿ ಪರಸ್ಪರ ಫೋಟೋ ತೆಗೆದುಕೊಂಡು ಎಂಜಾಯ್ ಮಾಡಿದರು. ಮಳೆಯಿಂದ ಮಣ್ಣಿನ ರಸ್ತೆಗಳಲ್ಲಿ ನೀರು ನಿಂತಿದ್ದು, ಓಡಾಡಲು ಪಾದಾಚಾರಿಗಳಿಗೆ ಸಾಕಷ್ಟು ತೊಂದರೆಯಾಯಿತು.



















