ಈ ವಾರ ಒಟಿಟಿಗೆ ಬಂದಿವೆ ಕುತೂಹಲಕಾರಿ ಸಿನಿಮಾಗಳು, ಪಟ್ಟಿ ಇಲ್ಲಿದೆ
OTT Release this week: ಪ್ರತಿ ವಾರದಂತೆ ಈ ವಾರವೂ ಒಟಿಟಿಗೆ ಕೆಲವು ಆಸಕ್ತಿಕರ ಸಿನಿಮಾ ಮತ್ತು ವೆಬ್ ಸರಣಿಗಳು ಬಂದಿವೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆದ ಕೆಲ ಸಿನಿಮಾಗಳು ಸಹ ಈ ವಾರ ಒಟಿಟಿಗೆ ಬಂದಿರುವುದು ವಿಶೇಷ. ಜೊತೆಗೆ ಹಾರರ್, ಥ್ರಿಲ್ಲರ್, ಕಾಮಿಡಿ, ಆಕ್ಷನ್ ಹೀಗೆ ಹಲವು ಜಾನರ್ನ ಹೊಸ ಸಿನಿಮಾ ಮತ್ತು ವೆಬ್ ಸರಣಿಗಳು ಒಟಿಟಿಗೆ ಬಂದಿವೆ. ಇಲ್ಲಿದೆ ನೋಡಿ ಪಟ್ಟಿ...
Updated on: Jul 04, 2026 | 3:27 PM

‘ಮುತ್ತಸ್ಸಿ’ ಕರ್ನಾಟಕ ಮತ್ತು ಕೇರಳದ ಗಡಿಯಲ್ಲಿನ ಕಾಡು ಹಳ್ಳಿಯೊಂದರಲ್ಲಿ ನಡೆಯುವ ಕತೆಯನ್ನು ಆಧರಿಸಿದ ವೆಬ್ ಸರಣಿ ‘ಮುತ್ತಸ್ಸಿ’ ಮಲಯಾಳಂ ಭಾಷೆಯ ವೆಬ್ ಸರಣಿಯಾದರೂ ತುಳು ಭಾಷೆ, ಕನ್ನಡದ ಬಳಕೆಯೂ ಸಾಕಷ್ಟಿದೆ. ಸೂಪರ್ ನ್ಯಾಚುರಲ್ ಕತೆಯನ್ನು ಒಳಗೊಂಡಿರುವ ಈ ವೆಬ್ ಸರಣಿ ಇದೀಗ ಜೀ5ನಲ್ಲಿ ಬಿಡುಗಡೆ ಆಗಿದೆ.

ನಸ್ಲಿನ್ ಗಫೂರ್ ನಟಿಸಿರುವ ಮಲಯಾಳಂ ಸಿನಿಮಾ ‘ಮಾಲಿವುಡ್ ಟೈಮ್ಸ್’ ಕೆಲ ದಿನಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸಾಧಾರಣ ಯಶಸ್ಸು ಕಂಡಿತ್ತು. ಸಿನಿಮಾದ ವಿಮರ್ಶಕರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ಸಿನಿಮಾವನ್ನು ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದಾಗಿದೆ.

ವಿಶ್ವ ವಿಖ್ಯಾತ ‘ಗೇಮ್ ಆಫ್ ಥ್ರೋನ್ಸ್’ ವೆಬ್ ಸರಣಿಯ ಪ್ರೀಕ್ವೆಲ್ ಆಗಿರುವ ‘ಹೌಸ್ ಆಫ್ ದಿ ಡ್ರ್ಯಾಗನ್’ನ ಮೂರನೇ ಸೀಸನ್ನ ಮೂರನೇ ಎಪಿಸೋಡ್ ಇದೇ ಭಾನುವಾರ ಬಿಡುಗಡೆ ಆಗಲಿದೆ. ಈ ವೆಬ್ ಸರಣಿಯನ್ನು ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದಾಗಿದೆ.

‘3 ಇಡಿಯಟ್ಸ್’, ‘ಪಿಕೆ’, ‘ಮುನ್ನಾಭಾಯಿ’, ‘ಲಗೆ ರಹೊ ಮುನ್ನಾಭಾಯಿ’ ಅಂಥಹಾ ಕಲ್ಟ್ ಕ್ಲಾಸಿಕ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ರಾಜ್ಕುಮಾರ್ ಹಿರಾನಿ ನಿರ್ದೇಶನ ಮಾಡಿರುವ ಮೊದಲ ವೆಬ್ ಸರಣಿ ‘ಪ್ರೀತಂ ಆಂಡ್ ಪೆದ್ರೊ’ ಈ ವಾರ ಒಟಿಟಿಗೆ ಬಂದಿದೆ. ಅರ್ಷದ್ ವಾರ್ಸಿ, ವಿಕ್ರಾಂತ್ ಮಾಸ್ಸಿ ಇನ್ನೂ ಕೆಲವರು ನಟಿಸಿರುವ ಈ ವೆಬ್ ಸರಣಿಯನ್ನು ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದಾಗಿದೆ.

ಮಲಯಾಳಂ ಚಿತ್ರರಂಗ ಹಾರರ್, ಥ್ರಿಲ್ಲರ್ ಸಿನಿಮಾಗಳನ್ನು ಅದ್ಭುತವಾಗಿ ತೆರೆಗೆ ತರುತ್ತಾರೆ. ಇದೀಗ ‘ಕರಕ್ಕಂ’ ಹೆಸರಿನ ಹಾರರ್ ಸಿನಿಮಾ ಒಟಿಟಿಗೆ ಬಂದಿದೆ. ಮಲಯಾಳಂನ ಈ ಸಿನಿಮಾ ಹಾರರ್ ಜೊತೆಗೆ ಹಾಸ್ಯವನ್ನೂ ಸಹ ಒಳಗೊಂಡಿದೆ. ಸಿನಿಮಾವನ್ನು ಸೋನಿ ಲಿವ್ನಲ್ಲಿ ವೀಕ್ಷಿಸಬಹುದಾಗಿದೆ.




