AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಈ ರೈಲು ನಿಲ್ದಾಣಗಳಿಂದ ನೇರವಾಗಿ ಫಾರಿನ್​ಗೆ ಹೋಗಬಹುದು ಗೊತ್ತೇ!

ನೆರೆಯ ರಾಷ್ಟ್ರಗಳಿಗೆ ನೇರ ಪ್ರಯಾಣಿಕ ರೈಲು ಸೇವೆ ಒದಗಿಸುವ ವಿಶ್ವದ ಕೆಲವೇ ದೇಶಗಳಲ್ಲಿ ಭಾರತವೂ ಒಂದು. ಗಡಿಯಾಚೆಗಿನ ಸಂಚಾರ, ವ್ಯಾಪಾರ, ಸಾಂಸ್ಕೃತಿಕ ಬಾಂಧವ್ಯ ಹಾಗೂ ಐತಿಹಾಸಿಕ ಸಂಪರ್ಕಗಳನ್ನು ಬಲಪಡಿಸಲು ಭಾರತವು ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ದೇಶಗಳೊಂದಿಗೆ ರೈಲು ಸಂಪರ್ಕವನ್ನು ಅಭಿವೃದ್ಧಿಪಡಿಸಿದೆ (ಈ ಪೈಕಿ ಸದ್ಯ ಪಾಕಿಸ್ತಾನದೊಂದಿಗಿನ ರೈಲು ಸಂಪರ್ಕ ಕಡಿತಗೊಂಡಿದೆ). ಭಾರತದಿಂದ ನೇರವಾಗಿ ಕಾರ್ಯನಿರ್ವಹಿಸುವ ಪ್ರಮುಖ ಅಂತಾರಾಷ್ಟ್ರೀಯ ರೈಲು ನಿಲ್ದಾಣ, ಮಾರ್ಗಗಳ ವಿವರ ಇಲ್ಲಿದೆ.

ಗಣಪತಿ ಶರ್ಮಾ
|

Updated on: Feb 16, 2026 | 2:41 PM

Share
ನೇಪಾಳಕ್ಕೆ ಹೋಗುವ ರೈಲುಗಳು ಮುಖ್ಯವಾಗಿ ಜಯನಗರ ರೈಲು ನಿಲ್ದಾಣದಿಂದ ಹೊರಡುತ್ತವೆ. ಇದು ಬಿಹಾರದ ಮಧುಬನಿ ಜಿಲ್ಲೆಯ ಗಡಿ ಭಾಗದಲ್ಲಿರುವ ಪ್ರಮುಖ ನಿಲ್ದಾಣ. ಇಲ್ಲಿಂದ ನೇಪಾಳದ ಜನಕಪುರಕ್ಕೆ ನೇರ ರೈಲು ಸೇವೆ ಲಭ್ಯವಿದೆ. ಗಡಿಯಾಚೆ ನೇಪಾಳದ ನಿಲ್ದಾಣವಿದೆ.

1 / 6
ಬಿಹಾರ–ನೇಪಾಳ ಗಡಿಯಲ್ಲಿರುವ ರಕ್ಸೌಲ್ ಜಂಕ್ಷನ್ ಕೂಡ ನೇಪಾಳ ಪ್ರವೇಶದ ಪ್ರಮುಖ ದ್ವಾರವಾಗಿ ಪರಿಗಣಿಸಲಾಗುತ್ತದೆ. ಭಾರತದ ವಿವಿಧ ಭಾಗಗಳಿಂದ ಇಲ್ಲಿಗೆ ಬರುವ ರೈಲುಗಳು ನೇಪಾಳದತ್ತ ಸಂಪರ್ಕ ಒದಗಿಸುತ್ತವೆ. ನೇಪಾಳಕ್ಕೆ ಭಾರತದಿಂದ ಮುಕ್ತ ಸಾರಿಗೆ ಸಂಪರ್ಕ ಇರುವುದರಿಂದ ರೈಲು ಸಂಪರ್ಕ ಕೂಡ ಸಾಮಾನ್ಯವಾಗಿದೆ.

2 / 6
ಭಾರತ–ಬಾಂಗ್ಲಾದೇಶ ರೈಲು ಸಂಪರ್ಕದಲ್ಲಿ ಪಶ್ಚಿಮ ಬಂಗಾಳದ ಪೆಟ್ರಾಪೋಲ್ ರೈಲು ನಿಲ್ದಾಣ ಮಹತ್ವದ ಪಾತ್ರ ವಹಿಸಿದೆ. ಬ್ರಿಟಿಷರ ಕಾಲದಲ್ಲೇ ನಿರ್ಮಿತವಾದ ಈ ನಿಲ್ದಾಣವು ಬಾಂಗ್ಲಾದೇಶದ ಖುಲ್ನಾ ಭಾಗದೊಂದಿಗೆ ಸಂಪರ್ಕ ಹೊಂದಿದ್ದು, ಇಲ್ಲಿಂದ ಪ್ರಸಿದ್ಧ ಬಂಧನ್ ಎಕ್ಸ್‌ಪ್ರೆಸ್ ರೈಲು ಸಂಚಾರ ಮಾಡುತ್ತದೆ. ಆದರೆ, ಗಮನವಿರಲಿ, ಈ ಮಾರ್ಗದಲ್ಲಿ ಪ್ರಯಾಣಿಸಲು ಪಾಸ್‌ಪೋರ್ಟ್ ಹಾಗೂ ವೀಸಾ ಅಗತ್ಯವಿದೆ.

3 / 6
ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ರಾಧಿಕಾಪುರ ರೈಲು ನಿಲ್ದಾಣವೂ ಭಾರತ–ಬಾಂಗ್ಲಾದೇಶ ರೈಲು ಸಂಚಾರದ ಪ್ರಮುಖ ಕೇಂದ್ರವಾಗಿದೆ. ಸರಕು ಹಾಗೂ ಪ್ರಯಾಣಿಕ ರೈಲುಗಳು ಎರಡೂ ದೇಶಗಳ ನಡುವೆ ಸಂಚರಿಸುತ್ತಿದ್ದು, ಇದು ಗಡಿ ಚೆಕ್‌ಪಾಯಿಂಟ್ ಆಗಿಯೂ ಕಾರ್ಯನಿರ್ವಹಿಸುತ್ತದೆ.

4 / 6
ಇನ್ನೊಂದು ಪ್ರಮುಖ ನಿಲ್ದಾಣವಾದ ಹಲ್ದಿಬರಿ ರೈಲು ನಿಲ್ದಾಣ. ಇದು ಬಾಂಗ್ಲಾದೇಶ ಗಡಿಯಿಂದ ಅಲ್ಪ ದೂರದಲ್ಲಿದೆ. ಇಲ್ಲಿಂದ ಚಿಲಹಟಿ ಮಾರ್ಗದ ಮೂಲಕ ಢಾಕಾ ಸೇರಿದಂತೆ ಹಲವು ಭಾಗಗಳಿಗೆ ರೈಲು ಸಂಪರ್ಕ ಕಲ್ಪಿಸಲಾಗುತ್ತದೆ. ವ್ಯಾಪಾರ ಹಾಗೂ ಪ್ರಯಾಣದ ದೃಷ್ಟಿಯಿಂದ ಈ ಮಾರ್ಗ ಅತ್ಯಂತ ಉಪಯುಕ್ತವಾಗಿದೆ.

5 / 6
ಭಾರತ–ಪಾಕಿಸ್ತಾನ ರೈಲು ಸಂಪರ್ಕದಲ್ಲಿ ಅಟ್ಟಾರಿ ರೈಲು ನಿಲ್ದಾಣ ಪ್ರಮುಖ ಕೇಂದ್ರವಾಗಿದೆ. ಹಿಂದೆ ಇಲ್ಲಿಂದ ಲಾಹೋರ್ ತನಕ ಪ್ರಸಿದ್ಧ ಸಂಜೋತಾ ಎಕ್ಸ್‌ಪ್ರೆಸ್ ಸಂಚರಿಸುತ್ತಿತ್ತು. ಆದರೆ ಪ್ರಸ್ತುತ ಭದ್ರತಾ ಕಾರಣಗಳಿಂದ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ.

6 / 6
Ganapathi Sharma
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ

ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ

ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್

ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ

ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ

ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್

ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ

40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?

ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ

ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ