- Kannada News Photo gallery Indian Railways: Do you know how trains in India are given different names Here is interesting information
ಭಾರತದ ರೈಲುಗಳಿಗೆ ಹೇಗೆ ಬೇರೆ ಬೇರೆ ಹೆಸರಿಡಲಾಗುತ್ತದೆ ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ರೈಲು ಭಾರತದ ಅತೀ ದೊಡ್ಡ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದ್ದು, ಸಾಮಾನ್ಯವಾಗಿ ಹೆಚ್ಚಿನ ಜನರು ಪ್ರಯಾಣಕ್ಕೆ ರೈಲನ್ನೇ ಅವಲಂಬಿಸಿದ್ದಾರೆ. ಆರಾಮದಾಯಕವಾಗಿರುವ ಮತ್ತು ಅಗ್ಗದ ಸಾರಿಗೆ ವ್ಯವಸ್ಥೆಯಾಗಿರುವ ಕಾರಣ ಭಾರತದ ಜನರು ದೂರದೂರುಗಳಿಗೆ ಪ್ರಯಾಣಿಸಲು ರೈಲನ್ನೇ ಆಯ್ಕೆ ಮಾಡುತ್ತಾರೆ. ಶತಾಬ್ದಿ ಎಕ್ಸ್‌ಪ್ರೆಸ್, ರಾಜಧಾನಿ ಎಕ್ಸ್‌ಪ್ರೆಸ್, ಡುರೊಂಟೊ ಎಕ್ಸ್‌ಪ್ರೆಸ್ ಎಂದು ಹಲವು ಹೆಸರಿನ ರೈಲುಗಳಿವೆ. ನೀವು ಕೂಡಾ ಟ್ರೈನ್‌ಗಳಲ್ಲಿ ಪ್ರಯಾಣಿಸಿರುತ್ತೀರಿ ಅಲ್ವಾ. ಆದ್ರೆ ಯಾವತ್ತಾದ್ರೂ ಈ ರೈಲುಗಳಿಗೆ ಹೇಗೆ ಹೆಸರನ್ನು ಇಡಲಾಗುತ್ತದೆ, ಇದಕ್ಕೂ ಏನಾದ್ರೂ ಕಾರಣ ಇದೆಯಾ ಎಂಬುದನ್ನು ಯೋಚಿಸಿದ್ದೀರಾ?
Updated on: May 08, 2025 | 4:15 PM

ಭಾರತದ ಜೀನನಾಡಿ ಎಂದೇ ಕರೆಸಿಕೊಳ್ಳುವ ಭಾರತೀಯ ರೈಲ್ವೆಯಲ್ಲಿ ಪ್ರತಿದಿನ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ನೀವು ಕೂಡಾ ಟ್ರೈನ್‌ಗಳಲ್ಲಿ ಪ್ರಯಾಣಿಸುವಾಗ ರೈಲುಗಳಿವೆ ವಿಭಿನ್ನ ಹೆಸರುಗಳು ಇರುವುದನ್ನು ಗಮನಿಸಿರುತ್ತೀರಿ ಅಲ್ವಾ. ಈ ರೈಲುಗಳಿಗೆ ಹೇಗೆ ಹೆಸರಿಡುತ್ತಾರೆ ಗೊತ್ತಾ? ಅದು ಹೇಗೆಂದರೆ, ರೈಲಿನ ಹೆಸರನ್ನು ಅದು ಪ್ರಾರಂಭವಾಗುವ ಮತ್ತು ಕೊನೆಗೊಳ್ಳುವ ನಿಲ್ದಾಣದ ಆಧಾರದ ಮೇಲೆ ಉದಾಹರಣೆಗೆ ಕೋಟಾ-ಪಾಟ್ನಾ, ಚೆನ್ನೈ-ಜೈಪುರ ಎಕ್ಸ್‌ಪ್ರೆಸ್ ಇತ್ಯಾದಿಗಳಂತೆ. ಇದಲ್ಲದೆ, ರೈಲು ಮಾರ್ಗದಲ್ಲಿ ಯಾವುದೇ ನಿಲ್ದಾಣವು ತುಂಬಾ ವಿಶೇಷವಾಗಿದ್ದರೆ ಅಥವಾ ಧಾರ್ಮಿಕ ಸ್ಥಳವಾಗಿದ್ದರೆ, ಆ ರೈಲಿಗೆ ಅದರ ಹೆಸರನ್ನು ಇಡಲಾಗುತ್ತದೆ.

ರೈಲಿನ ಹೆಸರನ್ನು ಅದು ಪ್ರಾರಂಭವಾಗುವ ಮತ್ತು ಕೊನೆಗೊಳ್ಳುವ ನಿಲ್ದಾಣದ ಆಧಾರದ ಮೇಲೆ ರೈಲು ಮಾರ್ಗದಲ್ಲಿ ಯಾವುದೇ ನಿಲ್ದಾಣವು ತುಂಬಾ ವಿಶೇಷವಾಗಿದ್ದರೆ ಅಥವಾ ಧಾರ್ಮಿಕ ಸ್ಥಳವಾಗಿದ್ದರೆ, ಆ ರೈಲಿಗೆ ಅದರ ಹೆಸರನ್ನು ಇಡಲಾಗುತ್ತದೆ. ಬನಾರಸ್‌ನಿಂದ ಹೊರಡುವ ರೈಲಿಗೆ ಕಾಶಿ ವಿಶ್ವನಾಥ ಎಕ್ಸ್‌ಪ್ರೆಸ್, ಅಲ್ಲದೆ ವೈಶಾಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿಗೆ ಬಿಹಾರದ ವೈಶಾಲಿಯಲ್ಲಿರುವ ಬೌದ್ಧರ ಪವಿತ್ರ ಸ್ಥಳದ ಹೆಸರನ್ನು ಇಡಲಾಗಿದೆ. ಇದಲ್ಲದೆ ಪರಂಪರೆ, ಸಂಸ್ಕೃತಿ, ಕವಿತೆಗಳು, ಪುಸ್ತಕಗಳು ಕಾದಂಬರಿಗಳ ಹೆಸರುಗಳನ್ನು ಕೂಡಾ ಕೆಲವೊಂದು ರೈಲುಗಳಿಗೆ ಇಡಲಾಗಿದೆ.

ರಾಜಧಾನಿ ಎಕ್ಸ್‌ಪ್ರೆಸ್: ರಾಜಧಾನಿ ಎಕ್ಸ್‌ಪ್ರೆಸ್ ದೆಹಲಿ ಮತ್ತು ಇತರ ರಾಜ್ಯಗಳ ರಾಜಧಾನಿಗಳ ನಡುವೆ ಚಲಿಸುತ್ತದೆ. ಈ ಕಾರಣಕ್ಕಾಗಿ ಈ ರೈಲುಗಳನ್ನು ರಾಜಧಾನಿ ಎಕ್ಸ್‌ಪ್ರೆಸ್ ಎಂದು ಕರೆಯಲಾಗುತ್ತದೆ. ರಾಜಧಾನಿ ಎಕ್ಸ್‌ಪ್ರೆಸ್ ಗಂಟೆಗೆ ಗರಿಷ್ಠ 140 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಇದನ್ನು ಭಾರತದ ಉನ್ನತ ಮಟ್ಟದ ರೈಲುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಶತಾಬ್ದಿ ಎಕ್ಸ್‌ಪ್ರೆಸ್: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ 100 ನೇ ಹುಟ್ಟುಹಬ್ಬದಂದು ಈ ರೈಲನ್ನು ಉದ್ಘಾಟಿಸಿದ ಕಾರಣ ಇದಕ್ಕೆ ಶತಾಬ್ದಿ ಎಕ್ಸ್‌ಪ್ರೆಸ್ ಎಂದು ಹೆಸರಿಡಲಾಯಿತು. ಈ ರೈಲು 400 ರಿಂದ 800 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಡುರೊಂಟೊ ಎಕ್ಸ್‌ಪ್ರೆಸ್: ಬಂಗಾಳಿ ಭಾಷೆಯಲ್ಲಿ ಡುರೊಂಟೊವನ್ನು ಅಡೆತಡೆಯಿಲ್ಲದ ಎಂದು ಕರೆಯಲಾಗುತ್ತದೆ. ಈ ಕಾರಣಕ್ಕಾಗಿ ಈ ರೈಲಿಗೆ ಡುರೊಂಟೊ ಎಕ್ಸ್‌ಪ್ರೆಸ್ ಎಂದು ಹೆಸರಿಡಲಾಗಿದೆ. ಡುರೊಂಟೊ ಎಕ್ಸ್‌ಪ್ರೆಸ್ ತನ್ನ ಪ್ರಯಾಣದ ಸಮಯದಲ್ಲಿ ಕೆಲವೇ ಕೆಲವು ನಿಲ್ದಾಣಗಳಲ್ಲಿ ಮಾತ್ರ ನಿಲ್ಲುತ್ತದೆ.

ಪವಿತ್ರ ಸ್ಥಳಗಳ ಹೆಸರು ಮಾತ್ರವಲ್ಲದೆ ಕಥೆ ಕಾದಂಬರಿಗಳ ಹೆಸರನ್ನು ಕೂಡಾ ರೈಲುಗಳಿಗೆ ಇಡಲಾಗುತ್ತದೆ. ಉದಾಹರಣೆಗೆ ಗೋದನ್ ಎಕ್ಸ್‌ಪ್ರೆಸ್, ಈ ರೈಲಿಗೆ ಪ್ರಸಿದ್ಧ ಹಿಂದಿ ಕಾದಂಬರಿ ಗೋದಾನ್ ಹೆಸರಿಡಲಾಗಿದೆ. ಈ ರೈಲು ಮುಂಬೈ ಮತ್ತು ಗೋರಖ್‌ಪುರದ ನಡುವೆ ಚಲಿಸುತ್ತದೆ. ಇದು 34 ಗಂಟೆಗಳಲ್ಲಿ ಒಟ್ಟು 1729 ಕಿಲೋಮೀಟರ್ ಪ್ರಯಾಣವನ್ನು ಒಳಗೊಂಡಿದೆ. ರೈಲು 22 ನಿಲ್ದಾಣಗಳಲ್ಲಿ ನಿಲ್ಲುತ್ತದೆ.

ಕಾದಂಬರಿಯ ಹೆಸರಿಟ್ಟ ಇನ್ನೊಂದು ರೈಲು ಯಾವುದೆಂದರೆ ಅರಣ್ಯಕ್ ಎಕ್ಸ್‌ಪ್ರೆಸ್. ರೈಲಿಗೆ ಪ್ರಸಿದ್ಧ ಬಂಗಾಳಿ ಕಾದಂಬರಿ ಅರಣ್ಯಕ್ ಹೆಸರಿಡಲಾಗಿದೆ. ಇದು ಪಶ್ಚಿಮ ಬಂಗಾಳದ ಶಾಲಿಮಾರ್ ಮತ್ತು ಭೋಜುದಿಹ್ ಜಂಕ್ಷನ್ ನಡುವೆ ಚಲಿಸುತ್ತದೆ. ಇದು ನಾಲ್ಕೂವರೆ ಗಂಟೆಗಳಲ್ಲಿ 281 ಕಿ.ಮೀ ಪ್ರಯಾಣವನ್ನು ಕ್ರಮಿಸುತ್ತದೆ.









