ಬಾಯ್ಫ್ರೆಂಡ್ ಜತೆ ಇರಾ ಖಾನ್ ಬರ್ತ್ಡೇ ಆಚರಣೆ; ಮತ್ತಷ್ಟು ಫೋಟೋ ಹಂಚಿಕೊಂಡ ಆಮಿರ್ ಮಗಳು
ಫಿಟ್ನೆಸ್ ಕೋಚ್ ನೂಪುರ್ ಶಿಖಾರೆ ಜೊತೆಗೆ ಇರಾ ಖಾನ್ ಅವರು ಪ್ರೀತಿಯಲ್ಲಿ ಮುಳುಗಿರುವ ವಿಚಾರ ಕೂಡ ಈಗ ಗುಟ್ಟಾಗಿ ಉಳಿದಿಲ್ಲ. 25ನೇ ವರ್ಷದ ಹುಟ್ಟುಹಬ್ಬವನ್ನು ಅವರು ನೂಪುರ್ ಶಿಖಾರೆ ಜೊತೆಗೂ ಸೇರಿ ಆಚರಿಸಿಕೊಂಡಿದ್ದಾರೆ.
Updated on: May 10, 2022 | 8:37 AM

ಬಾಲಿವುಡ್ನ ಖ್ಯಾತ ನಟ ಆಮಿರ್ ಖಾನ್ ಅವರ ಪುತ್ರಿ ಇರಾ ಖಾನ್ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕುಟುಂಬದವರು, ಸ್ನೇಹಿತರು ಹಾಗೂ ಪ್ರಿಯಕರನ ಜೊತೆ ಪ್ರತ್ಯೇಕವಾಗಿ ಕೇಕ್ ಕಟ್ ಮಾಡುವ ಮೂಲಕ ಅವರು ಜನ್ಮದಿನವನ್ನು ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.

ಈ ಸಂದರ್ಭದ ಕೆಲವು ಫೋಟೋಗಳು ಇಂಟರ್ನೆಟ್ನಲ್ಲಿ ವೈರಲ್ ಆಗಿವೆ. ಭಾನುವಾರ (ಮೇ 8) ಮಗಳ 25ನೇ ವರ್ಷದ ಹುಟ್ಟುಹಬ್ಬವನ್ನು ಆಮಿರ್ ಖಾನ್ ಹಾಗೂ ಮಾಜಿ ಪತ್ನಿ ರೀನಾ ದತ್ತ ಅವರು ಜೊತೆಯಾಗಿ ಸೇರಿ ಆಚರಿಸಿದ್ದಾರೆ. ಎರಡನೇ ಪತ್ನಿ ಕಿರಣ್ ರಾವ್ ಅವರ ಪುತ್ರ ಆಜಾದ್ ಖಾನ್ ಕೂಡ ಇರಾ ಖಾನ್ ಜನ್ಮದಿನವನ್ನು ಸಂಭ್ರಮಿಸಿದ್ದಾನೆ.

ಎಲ್ಲರೂ ಒಟ್ಟಾಗಿ ಸೇರಿಕೊಂಡು ಸ್ವಿಮಿಂಗ್ ಪೂಲ್ ಸಮೀಪವೇ ಕೇಕ್ ಕತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ಇರಾ ಖಾನ್ ಅವರು ಬಿಕಿನಿ ಧರಿಸಿದ್ದಾರೆ. ಆಮಿರ್ ಖಾನ್ ಹಾಗೂ ಆಜಾದ್ ಖಾನ್ ಸ್ವಿಮ್ಮಿಂಗ್ ಡ್ರೆಸ್ನಲ್ಲಿಯೇ ಕಾಣಿಸಿಕೊಂಡಿದ್ದಾರೆ.

ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.

ಫಿಟ್ನೆಸ್ ಕೋಚ್ ನೂಪುರ್ ಶಿಖಾರೆ ಜೊತೆಗೆ ಇರಾ ಖಾನ್ ಅವರು ಪ್ರೀತಿಯಲ್ಲಿ ಮುಳುಗಿರುವ ವಿಚಾರ ಕೂಡ ಈಗ ಗುಟ್ಟಾಗಿ ಉಳಿದಿಲ್ಲ. 25ನೇ ವರ್ಷದ ಹುಟ್ಟುಹಬ್ಬವನ್ನು ಅವರು ನೂಪುರ್ ಶಿಖಾರೆ ಜೊತೆಗೂ ಸೇರಿ ಆಚರಿಸಿಕೊಂಡಿದ್ದಾರೆ.

ಫ್ಯಾಮಿಲಿ ಜೊತೆ ಕೇಕ್ ಕತ್ತರಿಸುವಾಗ ಇರಾ ಖಾನ್ ಅವರು ಬಿಕಿನಿ ಧರಿಸಿದ್ದಕ್ಕೆ ಕೆಲವು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊನೇ ಪಕ್ಷ ಈ ಸಂದರ್ಭದಲ್ಲಾದರೂ ಸರಿಯಾಗಿ ಬಟ್ಟೆ ಧರಿಸಬೇಕಿತ್ತು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು, ಇರಾ ಖಾನ್ ಅವರ ಪ್ರಿಯತಮ ನೂಪುರ್ ಶಿಖಾರೆ ಕೂಡ ಕೆಲವು ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.




