‘ಕಮಲ್ ಶ್ರೀದೇವಿ’ ಸಿನಿಮಾಗೆ ಚಿತ್ರೀಕರಣ ಮುಕ್ತಾಯ; ಶೀರ್ಷಿಕೆಯಿಂದಲೇ ಗಮನ ಸೆಳೆದ ಚಿತ್ರ
ಸಚಿನ್ ಚೆಲುವರಾಯ ಸ್ವಾಮಿ, ರಮೇಶ್ ಇಂದಿರಾ, ಕಿಶೋರ್, ಸಂಗೀತಾ ಭಟ್ ಮುಂತಾದವರು ‘ಕಮಲ್ ಶ್ರೀದೇವಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರೀಕರಣ ಮುಗಿಸಿಕೊಂಡಿರುವ ಈ ಚಿತ್ರತಂಡ ಈಗ ಪ್ರಚಾರ ಕಾರ್ಯದ ಕಡೆಗೆ ಗಮನ ಹರಿಸಿದೆ. ಸುನೀಲ್ ಅವರು ‘ಕಮಲ್ ಶ್ರೀದೇವಿ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.
Updated on: Jul 07, 2025 | 4:52 PM

‘ಕಮಲ್ ಶ್ರೀದೇವಿ’ ಸಿನಿಮಾಗೆ 63 ದಿನಗಳ ಚಿತ್ರೀಕರಣ ಕಾಲ ಚಿತ್ರೀಕರಣ ಮಾಡಲಾಗಿದೆ. ಮೈಸೂರಿನಲ್ಲಿ ಶೂಟಿಂಗ್ ಮುಕ್ತಾಯ ಆಗಿದೆ. ಬಳಿಕ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಿತ್ರತಂಡದಿಂದ ಚಾಲನೆ ನೀಡಲಾಗಿದೆ.

ಈ ಸಿನಿಮಾದ ನಾಯಕ ನಟ ಸಚಿನ್ ಚೆಲುವರಾಯ ಸ್ವಾಮಿ, ಅವರ ಪತ್ನಿ ಶ್ರೀಮತಿ ಆಕಾಂಕ್ಷಾ ಪಟಮಕ್ಕಿ, ಸಹ-ನಿರ್ಮಾಪಕ ರಾಜವರ್ಧನ್, ನಿರ್ದೇಶಕರಾದ ಸುನೀಲ್ ಮತ್ತು ಚಿತ್ರತಂಡದವರು ಈ ವೇಳೆ ಭಾಗಿಯಾಗಿದ್ದರು. ‘ಕಮಲ್ ಶ್ರೀದೇವಿ’ ಬಿಡುಗಡೆಗೆ ತಯಾರಿ ನಡೆಯುತ್ತಿದೆ.

ಎನ್. ಚೆಲುವರಾಯ ಸ್ವಾಮಿ ಅವರು ‘ಕಮಲ್ ಶ್ರೀದೇವಿ’ ಸಿನಿಮಾವನ್ನು ಅರ್ಪಿಸಲಿದ್ದಾರೆ. ‘ಸ್ವರ್ಣಾಂಬಿಕ ಪಿಕ್ಚರ್ಸ್ ಬ್ಯಾನರ್’ ಮೂಲಕ ಬಿ.ಕೆ. ಧನಲಕ್ಷ್ಮೀ ಅವರು ನಿರ್ಮಾಣ ಮಾಡುತ್ತಿದ್ದಾರೆ. Barnswallow ಕಂಪನಿಯ ರಾಜವರ್ಧನ್ ಅವರು ಸಹ-ನಿರ್ಮಾಪಕರಾಗಿದ್ದಾರೆ.

ಸಚಿನ್ ಚೆಲುವರಾಯ ಸ್ವಾಮಿ ಜೊತೆಗೆ ಈ ಚಿತ್ರದಲ್ಲಿ ಕಿಶೋರ್, ಸಂಗೀತಾ ಭಟ್, ರಮೇಶ್ ಇಂದಿರಾ ಸೇರಿದಂತೆ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಸಂಪೂರ್ಣ ಕ್ರಿಯೇಟಿವ್ ಜವಾಬ್ದಾರಿಯನ್ನು ರಾಜವರ್ಧನ್ ಹೊತ್ತಿಕೊಂಡಿದ್ದಾರೆ. ಈ ಚಿತ್ರದ ಶೀರ್ಷಿಕೆ ಗಮನ ಸೆಳೆದಿದೆ.

ಟೈಟಲ್ ಕಾರಣಕ್ಕೆ ‘ಕಮಲ್ ಶ್ರೀದೇವಿ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಮೊದಲು ಕ್ರಿಯೇಟೀವ್ ಕಾನ್ಸೆಪ್ಟ್ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ‘ಎಲ್ಲವೂ ಅಂದುಕೊಂಡಂತೆ ನಡೆದಿದೆ. ಆಗಸ್ಟ್, ಸೆಪ್ಟೆಂಬರ್ ವೇಳೆಗೆ ರಿಲೀಸ್ ಮಾಡುತ್ತೇವೆ’ ಎಂದಿದ್ದಾರೆ ಚಿತ್ರತಂಡದವರು.




