- Kannada News Photo gallery Kareena Kapoor Khan kids and family celebrate Ganesh Chaturthi Entertainment News in Kannada
ಗಣಪತಿ ಮೂರ್ತಿಗೆ ನಮಸ್ಕರಿಸಿದ ಕರೀನಾ ಮಕ್ಕಳು ತೈಮೂರ್, ಜೇಹ್ ಅಲಿ ಖಾನ್
ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ಗಣಪತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಅವರ ಮಕ್ಕಳಾದ ಜೇಹ್ ಅಲಿ ಖಾನ್ ಹಾಗೂ ತೈಮೂರ್ ಅಲಿ ಖಾನ್ ಕೂಡ ಇದರಲ್ಲಿ ಭಾಗಿ ಆಗಿದ್ದಾರೆ. ಗಣೇಶನಿಗೆ ನಮಿಸಿ ಆಶೀರ್ವಾದ ಪಡೆಯುತ್ತಿರುವ ಮಕ್ಕಳ ಫೋಟೋವನ್ನು ಕರೀನಾ ಅವರು ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.
Updated on: Sep 15, 2024 | 9:52 PM

ಬಾಲಿವುಡ್ ಮಂದಿಗೆ ಗಣೇಶ ಚತುರ್ಥಿ ಎಂದರೆ ತುಂಬ ಸ್ಪೆಷಲ್. ಹಿಂದಿ ಚಿತ್ರರಂಗದ ಬಹುತೇಖ ಎಲ್ಲ ಸೆಲೆಬ್ರಿಟಿಗಳು ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಕರೀನಾ ಕಪೂರ್ ಖಾನ್ ಅವರು ಕುಟುಂಬದವರು ಕೂಡ ಬಹಳ ಸಂಭ್ರಮದಿಂದ ಹಬ್ಬ ಆಚರಿಸಿದ್ದಾರೆ.

ಕರೀನಾ ಕಪೂರ್ ಖಾನ್ ಅವರು ತಮ್ಮ ಮನೆಯಲ್ಲಿನ ಗಣೇಶ ಹಬ್ಬದ ಝಲಕ್ ತೋರಿಸಲು ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರ ಮಕ್ಕಳಾದ ತೈಮೂರ್ ಅಲಿ ಖಾನ್, ಜೇಹ್ ಅಲಿ ಖಾನ್ ಗಣೇಶನ ವಿಗ್ರಹಕ್ಕೆ ನಮಿಸಿ ಆಶೀರ್ವಾದ ಪಡೆದರು.

ಹಿಂದಿ ಚಿತ್ರರಂಗದಲ್ಲಿ ಕಪೂರ್ ಕುಟುಂಬ ಬಹಳ ದೊಡ್ಡದು. ಹಬ್ಬದ ಸಲುವಾಗಿ ಈ ಕುಟುಂಬದ ಎಲ್ಲರೂ ಒಂದೆಡೆ ಸೇರಿದ್ದಾರೆ. ರಣಬೀರ್ ಕಪೂರ್, ಆಲಿಯಾ ಭಟ್, ರಹಾ ಕಪೂರ್ ಸೇರಿದಂತೆ ಅನೇಕರು ಒಟ್ಟಾಗಿ ಸೇರಿ ಗಣೇಶ ಚತುರ್ಥಿ ಆಚರಣೆ ಮಾಡಿದ್ದಾರೆ.

ಒಂದು ಕಾಲದ ಬಹುಬೇಡಿಕೆಯ ನಟಿ ಕರೀಷ್ಮಾ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಡೀ ಕಪೂರ್ ಕುಟುಂಬ ಈ ಹಬ್ಬದಲ್ಲಿ ಭಾಗಿಯಾಗಿದೆ. ಜನರು ಈ ಕಮೆಂಟ್ ಮೂಲಕ ಹಬ್ಬದ ಶುಭ ಕೋರಿದ್ದಾರೆ.

ಸೈಫ್ ಅಲಿ ಖಾನ್ ಅವರ ಮಗಳು ಸಾರಾ ಅಲಿ ಖಾನ್ ಕೂಡ ಪರಮ ದೈವ ಭಕ್ತೆ. ಅವರು ಕೂಡ ಈ ವರ್ಷ ಖುಷಿಯಿಂದ ಗಣೇಶ ಚತುರ್ಥಿಯನ್ನು ಆಚರಿಸಿದರು. ಆ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಅವರು ಕೂಡ ಬೇಡಿಕೆಯ ನಟಿ ಆಗಿದ್ದಾರೆ.




