- Kannada News Photo gallery KGF Chapter 2 actress Raveena Tandon shares new photos of her in white dress
ಶ್ವೇತವರ್ಣದ ಉಡುಗೆ ಧರಿಸಿ ಅಭಿಮಾನಿಗಳನ್ನು ಸೆಳೆದುಕೊಂಡ ‘ಕೆಜಿಎಫ್ 2’ ನಟಿ ರವೀನಾ ಟಂಡನ್
ರವೀನಾ ಟಂಡನ್ ಅವರು ಶೇರ್ ಮಾಡಿಕೊಂಡಿರುವ ಹೊಸ ಫೋಟೋಗಳಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಶ್ವೇತವರ್ಣದ ದಿರಿಸಿನಲ್ಲಿ ರವೀನಾ ಮಿಂಚಿದ್ದಾರೆ.
Updated on: May 18, 2022 | 1:11 PM

KGF Chapter 2 actress Raveena Tandon shares new photos of her in white dress

KGF Chapter 2 actress Raveena Tandon shares new photos of her in white dress

ಹಲವು ವರ್ಷಗಳಿಂದ ರವೀನಾ ಟಂಡನ್ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಈಗ ಅವರಿಗೆ 47 ವರ್ಷ ವಯಸ್ಸು. ಈಗಲೂ ಅವರು ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಕನ್ನಡಿಗರು ‘ಮಸ್ತ್ ಮಸ್ತ್ ಹುಡುಗಿ’ಗೆ ಅಪಾರ ಅಭಿಮಾನ ತೋರಿಸಿದ್ದಾರೆ.

ಹಿಂದಿ, ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಬೆಂಗಾಳಿ ಭಾಷೆಯ ಸಿನಿಮಾಗಳಲ್ಲೂ ರವೀನಾ ಟಂಡನ್ ನಟಿಸಿದ್ದಾರೆ. ಅನೇಕ ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ದೇಶಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ.

ಅನೇಕ ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿಯೂ ರವೀನಾ ಟಂಡನ್ ಕೆಲಸ ಮಾಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ವೆಬ್ ಸರಣಿ ಲೋಕಕ್ಕೂ ಅವರು ಕಾಲಿಟ್ಟಿದ್ದಾರೆ. ಕಳೆದ ವರ್ಷ ನೆಟ್ಫ್ಲಿಕ್ಸ್ ಮೂಲಕ ಬಿಡುಗಡೆ ಆದ ‘ಅರಣ್ಯಕ್’ ವೆಬ್ ಸಿರೀಸ್ ಮೂಲಕ ಅವರು ಒಟಿಟಿ ಜಗತ್ತಿಗೆ ಎಂಟ್ರಿ ನೀಡಿದರು.




