- Kannada News Photo gallery Kitchen Hack: Here are different ways you can wash dishes without dishwashing soap, Checkout the details in kannada language
Kitchen Hack: ಸೋಪ್ ಬಳಸದೆಯೇ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಇಲ್ಲಿದೆ ಸಿಂಪಲ್ ಟಿಪ್ಸ್
ಅಂಗಡಿಯಿಂದ ಖರೀದಿಸಿದ ಪಾತ್ರೆ ತೊಳೆಯುವ ಸೋಪ್‌ಗಿಂತ ಭಿನ್ನವಾಗಿ ರಾಸಾಯನಿಕ ಮುಕ್ತವಾಗಿರುವ ಈ ಸುಲಭ ವಿಧಾನವನ್ನು ನೀವು ಟ್ರೈ ಮಾಡಿ.
Updated on:Apr 02, 2023 | 10:47 AM

ಸಾಮಾನ್ಯವಾಗಿ ಪಾತ್ರೆ ತೊಳೆಯಲು ಸೋಪ್ ಅಥವಾ ಲಿಕ್ವಿಡ್ ಗಳನ್ನು ಬಳಸಲಾಗುತ್ತದೆ. ಆದರೆ ಹಿಂದಿನ ಕಾಲದಲ್ಲಿ ಯಾವ ರೀತಿ ಯಾವ ಪಾತ್ರೆಗಳನ್ನು ತೊಳೆಯುತ್ತಿದ್ದರು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿಂಬೆ ರಸ: ಇದು ಪಾತ್ರೆಗಳನ್ನು ಸ್ವಚ್ಛವಾಗಿಡುವುದರ ಜೊತೆಗೆ ನಿಂಬೆಯ ಸುವಾಸನೆಯನ್ನು ನೀಡುತ್ತದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ 4-5 ಟೇಬಲ್ ಸ್ಪೂನ್ ಅಡುಗೆ ಸೋಡಾ ತೆಗೆದುಕೊಳ್ಳಿ ಮತ್ತು ಇದಕ್ಕೆ ಒಂದು ನಿಂಬೆ ಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್ನಿಂದ ಪಾತ್ರೆಗಳನ್ನು ತೊಳೆಯಿರಿ.

ಕಟ್ಟಿಗೆ ಸುಟ್ಟ ಬೂದಿ: ಪ್ರಾಚೀನ ಕಾಲದಲ್ಲಿ, ಜನರು ಪಾತ್ರೆ ತೊಳೆಯುವ ಸಾಬೂನುಗಳು ಲಭ್ಯವಿಲ್ಲದಿದ್ದಾಗ, ಅವರು ಪಾತ್ರೆಗಳನ್ನು ಸ್ವಚ್ಛಗೊಳಿಸಲು ಕಟ್ಟಿಗೆ ಸುಟ್ಟ ಬೂದಿ ಬಳಸುತ್ತಿದ್ದರು. ಬೂದಿಯಿಂದ ನೈಸರ್ಗಿಕವಾಗಿ ಪಾತ್ರೆ ತೊಳೆಯುವ ಪುಡಿಯನ್ನು ತಯಾರಿಸಬಹುದು.

ಅಕ್ಕಿ ನೀರು: ಇದು ಜಿಡ್ಡಿನ ಭಕ್ಷ್ಯಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಒಂದು ಬಟ್ಟಲಿನಲ್ಲಿ ಸ್ವಲ್ಪ ಅಕ್ಕಿ ನೀರನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಪಾತ್ರೆ ತೊಳೆಯುವ ಸ್ಪಂಜನ್ನು ಅದ್ದಿ ಮತ್ತು ಸ್ಕ್ರಬ್ ಮಾಡಿ.

ಟೊಮೆಟೊ ಸಿಪ್ಪೆ: ಇದರಲ್ಲಿ ಉಳಿದಿರುವ ರಸವು ಪಾತ್ರೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸುತ್ತದೆ ಮತ್ತು ಅವುಗಳನ್ನು ಹೊಳೆಯುವಂತೆ ಮಾಡುತ್ತದೆ. ಟೊಮೆಟೊ ಸಿಪ್ಪೆಯಿಂದ ಪಾತ್ರೆಗಳನ್ನು ಉಜ್ಜಿಕೊಳ್ಳಿ ಮತ್ತು 10 ರಿಂದ 15 ನಿಮಿಷಗಳ ಕಾಲ ಬಿಡಿ. ಈಗ ನೀರಿನಿಂದ ತೊಳೆಯಿರಿ.

ಅಡುಗೆ ಸೋಡಾ: ಅಡುಗೆ ಸೋಡಾ ಹಾಕಿ ಪಾತ್ರೆ ತೊಳೆಯುವ ಮೊದಲು ಪಾತ್ರೆಗಳನ್ನೆಲ್ಲಾ ಬಿಸಿ ನೀರಿನಲ್ಲಿ ಹಾಕಿಡಿ. ಇದಾದ ಬಳಿಕ ಪ್ರಾತೆಗಳ ಮೇಲೆ ಅಡುಗೆ ಸೋಡಾವನ್ನು ಪಾತ್ರೆಗಳ ಮೇಲೆ ಸಿಂಪಡಿಸಿ, 5 ರಿಂದ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಈಗ ಸ್ಪಾಂಜ್ ಅನ್ನು ನೀರಿನಲ್ಲಿ ಅದ್ದಿ ಮತ್ತು ಪ್ಲೇಟ್ಗಳನ್ನು ತೊಳೆಯಿರಿ.
Published On - 10:43 am, Sun, 2 April 23

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Read More




