- Kannada News Photo gallery Mahesh babu Daughter Sitara Ghattamaneni Poses IN front of Statue of Liberty in New York
ಅಮೆರಿಕದ ನ್ಯೂಯಾರ್ಕ್ನಲ್ಲಿ ನಿಂತು ಪೋಸ್ ನೀಡಿದ ಮಹೇಶ್ ಬಾಬು ಮಗಳು ಸಿತಾರಾ
ನ್ಯೂಯಾರ್ಕ್ನಲ್ಲಿ ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ ಇದೆ. ಅದರ ಸಮೀಪ ನಿಂತು ಸಿತಾರಾ ಪೋಸ್ ನೀಡಿದ್ದಾಳೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾಳೆ. ಈ ಫೋಟೋಗೆ ಅಭಿಮಾನಿಗಳಿಂದ ಲೈಕ್ಸ್ ಬರುತ್ತಿದೆ.
Updated on: Jun 27, 2022 | 6:35 AM

ಮಹೇಶ್ ಬಾಬು ಅವರ ಮಗಳು ಸಿತಾರಾ ತಂದೆ ಜತೆ ಸಾಕಷ್ಟು ದೇಶಗಳನ್ನು ಸುತ್ತಾಟ ನಡೆಸುತ್ತಾಳೆ. ಇತ್ತೀಚೆಗೆ ಜರ್ಮನಿಯಲ್ಲಿ ಸಮಯ ಕಳೆದಿದ್ದ ಸಿತಾರಾ ಈಗ ನ್ಯೂಯಾರ್ಕ್ಗೆ ಹಾರಿದ್ದಾಳೆ.

ನ್ಯೂಯಾರ್ಕ್ನಲ್ಲಿ ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ ಇದೆ. ಅದರ ಸಮೀಪ ನಿಂತು ಸಿತಾರಾ ಪೋಸ್ ನೀಡಿದ್ದಾಳೆ. ಈ ಫೋಟೋಗಳನ್ನು ಆಕೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾಳೆ. ಈ ಫೋಟೋಗೆ ಅಭಿಮಾನಿಗಳಿಂದ ಲೈಕ್ಸ್ ಬರುತ್ತಿದೆ.

ಸಿತಾರಾ ತನ್ನದೇ ಯೂಟ್ಯೂಬ್ ಚಾನೆಲ್ ಹೊಂದಿದ್ದಾಳೆ. ಅಲ್ಲಿ ಅನೇಕ ಸೆಲೆಬ್ರಿಟಿಗಳ ಸಂದರ್ಶನವನ್ನು ಅವಳು ಪೋಸ್ಟ್ ಮಾಡುತ್ತಾ ಇರುತ್ತಾಳೆ. ಆಕೆಯ ಮಾತುಗಳು ಅಭಿಮಾನಿಗಳಿಗೆ ಇಷ್ಟವಾಗುತ್ತದೆ.

ಸಿತಾರಾಗೆ ಇನ್ಸ್ಟಾಗ್ರಾಮ್ನಲ್ಲಿ 79 ಲಕ್ಷ ಹಿಂಬಾಲಕರಿದ್ದಾರೆ. ಸ್ಟಾರ್ ಕಿಡ್ ಆದ ಕಾರಣಕ್ಕೆ ಅವಳಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗ ಇದೆ. ಎಲ್ಲರೂ ಅವಳನ್ನು ಇಷ್ಟಪಡುತ್ತಾರೆ.

ಇತ್ತೀಚೆಗೆ ತೆರೆಗೆ ಬಂದ ‘ಸರ್ಕಾರು ವಾರಿ ಪಾಟ’ ಚಿತ್ರದ ಪ್ರಮೋಷನ್ಗೆ ಬಳಕೆ ಆದ ಹಾಡಿನಲ್ಲಿ ಸಿತಾರಾ ಹೆಜ್ಜೆ ಹಾಕಿದ್ದರು. ಈ ಹಾಡು ಸಖತ್ ವೈರಲ್ ಆಗಿತ್ತು.



















