Updated on: May 02, 2023 | 8:05 AM
‘ಮೆಟ್ ಗಾಲಾ 2023’ ಅದ್ದೂರಿಯಾಗಿ ನೆರವೇರಿದೆ. ಅಮೆರಿಕದ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ನಲ್ಲಿ ಈ ಕಾರ್ಯಕ್ರಮ ನಡೆದಿದೆ. ನಟಿಯರಾದ ಆಲಿಯಾ ಭಟ್ ಹಾಗೂ ಪ್ರಿಯಾಂಕಾ ಚೋಪ್ರಾ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ.
ಆಲಿಯಾ ಭಟ್ ಅವರು ‘ಮೆಟ್ ಗಾಲಾ 2023’ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು ಇದೇ ಮೊದಲು. ಅವರ ಹಾಲಿವುಡ್ ಪ್ರಾಜೆಕ್ಟ್ ‘ಹಾರ್ಟ್ ಆಫ್ ಸ್ಟೋನ್’ ರಿಲೀಸ್ಗೆ ರೆಡಿ ಇದೆ. ಅದಕ್ಕೂ ಮೊದಲು ಅವರು ಮೆಟ್ ಗಾಲಾಗೆ ಕಾಲಿಟ್ಟಿದ್ದಾರೆ.
ಆಲಿಯಾ ಭಟ್ ಅವರ ಉಡುಗೆ ಎಲ್ಲರ ಗಮನ ಸೆಳೆದಿದೆ. ಅವರ ಡ್ರೆಸ್ ಅಭಿಮಾನಿಗಳಿಗೆ ಇಷ್ಟ ಆಗಿದೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಮೆಟ್ ಗಾಲಾ ವೇದಿಕೆ ಮೇಲೆ ಪ್ರಿಯಾಂಕಾ ಚೋಪ್ರಾ ಕೂಡ ಕಾಣಿಸಿಕೊಂಡಿದ್ದಾರೆ. ಅವರು ಇಲ್ಲಿ ಕಾಣಿಸಿಕೊಳ್ಳುತ್ತಿರುವುದು ನಾಲ್ಕನೇ ಬಾರಿಗೆ.
ಪ್ರಿಯಾಂಕಾ ಚೋಪ್ರಾ ಜೊತೆ ಪತಿ ನಿಕ್ ಜೋನಸ್ ಕೂಡ ಇದ್ದರು. ಇಬ್ಬರೂ ಕಪ್ಪು ಬಣ್ಣದ ಡ್ರೆಸ್ನಲ್ಲಿ ಮಿಂಚಿದ್ದಾರೆ.