AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲೇಜು ವಿದ್ಯಾರ್ಥಿಗಳು ಮನಸೋತಿರುವ ಮೋಟೋ G84 5G ಫೋನ್ ಇಂದಿನಿಂದ ಖರೀದಿಗೆ ಲಭ್ಯ

Moto G84 First Sale in India: ಆಕರ್ಷಕ ಕ್ಯಾಮೆರಾ, ವೇಗದ ಚಾರ್ಜಿಂಗ್ ಮತ್ತು ಟ್ರೆಂಡಿ ವಿನ್ಯಾಸವನ್ನು ಒಳಗೊಂಡಿರುವ ಮೋಟೋ G84 5G ಫೋನ್ ಇಂದಿನಿಂದ ಖರೀದಿಗೆ ಸಿಗಲಿದೆ. Pantone ಬಣ್ಣದ ಆವೃತ್ತಿಯಲ್ಲಿ ರಿಲೀಸ್ ಆದ ಈ ಸ್ಮಾರ್ಟ್‌ಫೋನ್​ಗೆ ಯುವಕರು ಮನಸೋತಿದ್ದಾರೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Vinay Bhat
|

Updated on: Sep 08, 2023 | 6:55 AM

Share
ಮೋಟೋರೊಲಾ ಕಂಪನಿ ತನ್ನ ಬಜೆಟ್-ಕೇಂದ್ರಿತ ಮೋಟೋ G-ಸರಣಿಯ ಅಡಿಯಲ್ಲಿ ಕಳೆದ ವಾರ ಹೊಸ ಮೋಟೋ ಜಿ84 5ಜಿ (Moto G84 5G) ಸ್ಮಾರ್ಟ್​ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಈ ಫೋನ್‌ನ ಬೆಲೆ 20,000ರೂ. ಗಿಂತ ಕಡಿಮೆ ಇದೆ. ಈ ಫೋನನ್ನು ಯುವ ಗ್ರಾಹಕರಿಗೆ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾಗಿದೆ.

1 / 7
ಆಕರ್ಷಕ ಕ್ಯಾಮೆರಾ, ವೇಗದ ಚಾರ್ಜಿಂಗ್ ಮತ್ತು ಟ್ರೆಂಡಿ ವಿನ್ಯಾಸವನ್ನು ಒಳಗೊಂಡಿರುವ ಮೋಟೋ G84 5G ಫೋನ್ ಇಂದಿನಿಂದ ಖರೀದಿಗೆ ಸಿಗಲಿದೆ. Pantone ಬಣ್ಣದ ಆವೃತ್ತಿಯಲ್ಲಿ ರಿಲೀಸ್ ಆದ ಈ ಸ್ಮಾರ್ಟ್‌ಫೋನ್​ಗೆ ಯುವಕರು ಮನಸೋತಿದ್ದಾರೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

2 / 7
ಮೋಟೋ G84 5G ಸ್ಮಾರ್ಟ್​ಫೋನ್ ಭಾರತದಲ್ಲಿ ಕೇವಲ ಒಂದು ಸಂಗ್ರಹಣೆಯಲ್ಲಿ ಮಾತ್ರ ಅನಾವರಣಗೊಂಡಿದೆ. ಇದರ 12GB RAM + 256GB ಸ್ಟೋರೇಜ್ ಸಾಮರ್ಥ್ಯಕ್ಕೆ 19,999 ರೂ. ನಿಗದಿ ಮಾಡಲಾಗಿದೆ. ಬ್ಯಾಂಕ್ ಅಥವಾ ವಿನಿಮಯ ಕೊಡುಗೆಗಳೊಂದಿಗೆ, ಗ್ರಾಹಕರು ಬೆಲೆಯನ್ನು 18,999 ರೂ. ಗೆ ಇಳಿಸಬಹುದು.

3 / 7
ಮೋಟೋ G84 5G ಫೋನಿನ ಮೊದಲ ಮಾರಾಟವು ಇಂದು (ಸೆಪ್ಟೆಂಬರ್ 8) ನಡೆಯಲಿದೆ. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್, ರಿಲಯನ್ಸ್ ಡಿಜಿಟಲ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ. ಐಸಿಐಸಿಐ ಬ್ಯಾಂಕ್ ಕೊಡುಗೆಯೊಂದಿಗೆ, ಫೋನ್ ಅನ್ನು 1,000 ರೂ. ರಿಯಾಯಿತಿ ದರದೊಂದಿಗೆ ಖರೀದಿಸಬಹುದು.

4 / 7
ಮೋಟೋ G84 ಸ್ಮಾರ್ಟ್​ಫೋನ್ 120Hz ರಿಫ್ರೆಶ್ ರೇಟ್ ಮತ್ತು 1300 nits ಗರಿಷ್ಠ ಬ್ರೈಟ್​ನೆಸ್ ಹೊಂದಿರುವ 10-ಬಿಟ್ 6.5-ಇಂಚಿನ pOLED ಡಿಸ್ ಪ್ಲೇಯನ್ನು ಹೊಂದಿದೆ. ಭದ್ರತೆಗಾಗಿ, ಆನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಬಲಿಷ್ಠವಾದ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, 256GB UFS 2.2 ಸಂಗ್ರಹಣೆಯೊಂದಿಗೆ ಬರುತ್ತದೆ.

5 / 7
ಹಿಂಭಾಗವು ಎರಡು ಕ್ಯಾಮೆರಾಗಳನ್ನು ಒಳಗೊಂಡಿದೆ 50-ಮೆಗಾಪಿಕ್ಸೆಲ್ OIS ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ನೀಡಲಾಗಿದೆ. ಹೆಚ್ಚುವರಿಯಾಗಿ ಮ್ಯಾಕ್ರೋ ಅಥವಾ ಡೆಪ್ತ್ ಕ್ಯಾಮೆರಾಗಳ ಆಯ್ಕೆ ನೀಡಲಾಗಿಲ್ಲ. ಬದಲಿಗೆ, ಸೆಕೆಂಡರಿ ಕ್ಯಾಮೆರಾದಲ್ಲಿ ಮ್ಯಾಕ್ರೋ ಫೋಟೋಗಳನ್ನು ತೆಗೆಯಬಹುದು. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16-ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ.

6 / 7
ಮೋಟೋ G84 ಸ್ಮಾರ್ಟ್​ಫೋನ್ 30W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿಯಿಂದ ಚಾಲಿತವಾಗಿದೆ. ಈ ಫೋನ್ ಮೋಟೋ Spatial ಆಡಿಯೋ ಬೆಂಬಲದೊಂದಿಗೆ ಡಾಲ್ಬಿ ಅಟ್ಮಾಸ್ ಸ್ಪೀಕರ್‌ಗಳನ್ನು ಹೊಂದಿದೆ. 5G, Wi-Fi 802.11ax, ಬ್ಲೂಟೂತ್ 5.1, GPS, NFC, USB ಟೈಪ್-C ಪೋರ್ಟ್ ಯೊಂದಿಗೆ ಬರುತ್ತದೆ.

7 / 7
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Follow Us
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?

ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು

ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!

ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ

‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್

ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ

ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!

ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ

ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್

ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ