AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಹಬ್ಬ, ಯಾವೆಲ್ಲ ಸಿನಿಮಾ ಬಿಡುಗಡೆ?

Movie release: ಮತ್ತೊಂದು ಶುಕ್ರವಾರ ಬಂದಿದೆ. ಮತ್ತೆ ಚಿತ್ರಮಂದಿರಗಳಿಗೆ ಹೊಸ ಸಿನಿಮಾಗಳು ಬಂದಿವೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕಲೆದ ಕೆಲ ವಾರಗಳಿಂದಲೂ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದ್ದ ಕಾರಣಕ್ಕೆ ಕನ್ನಡ ಸೇರಿದಂತೆ ಪರಭಾಷೆಯ ಕೆಲ ಸಿನಿಮಾಗಳು ಸಹ ಬಿಡುಗಡೆಯಿಂದ ದೂರ ಸರಿದಿದ್ದವು, ಈ ವಾರ ಕೆಲವು ಒಳ್ಳೆಯ ಚಿತ್ರಮಂದಿರಗಳು ಬರುತ್ತಿವೆ. ಇಲ್ಲಿದೆ ನೋಡಿ ಪಟ್ಟಿ...

ಮಂಜುನಾಥ ಸಿ.
|

Updated on: Oct 30, 2025 | 6:35 PM

Share
ಡಾರ್ಲಿಂಗ್ ಕೃಷ್ಣ ನಟನೆಯ ‘ಬ್ರ್ಯಾಟ್’ ಸಿನಿಮಾ ಈ ವಾರ ಚಿತ್ರಮಂದಿರಗಳಿಗೆ ಬಂದಿದೆ. ಕ್ರಿಕೆಟ್ ಬೆಟ್ಟಿಂಗ್ ಕುರಿತ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದ ಟ್ರೈಲರ್, ಹಾಡುಗಳು ಈಗಾಗಲೇ ಗಮನ ಸೆಳೆದಿವೆ. ಡಾರ್ಲಿಂಗ್ ಕೃಷ್ಣ ಮತ್ತು ತಂಡ ಸಹ ಒಳ್ಳೆಯ ಪ್ರಚಾರ ಮಾಡಿದೆ.

1 / 8
ಕೋಮಲ್ ಮತ್ತು ಬಿಗ್​​ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ನಟಿಸಿರುವ ‘ಕೋಣ’ ಸಿನಿಮಾ ಈ ವಾರ ತೆರೆಗೆ ಬಂದಿದೆ. ತನಿಷಾ ಕುಪ್ಪಂದ ನಾಯಕಿಯಾಗಿ ನಟಿಸಿರುವ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಬಹಳ ಗಮನ ಸೆಳೆದಿದೆ.

2 / 8
‘ಒಮೆನ್’ ಹೆಸರಿನ ಥ್ರಿಲ್ಲರ್ ಕನ್ನಡ ಸಿನಿಮಾ ಒಂದು ನಾಳೆಯೇ ಬಿಡುಗಡೆ ಆಗುತ್ತಿದೆ. ಕೊಲೆಯ ಜಾಡು ಹಿಡಿದು ಹೋಗುವ ನಾಯಕನ ಕತೆಯನ್ನು ಸಿನಿಮಾ ಒಳಗೊಂಡಿದೆ. ಅಜಯ್ ಕುಮಾರ್ ನಾಯಕ, ನಿಶ್ಮಾ ಶೆಟ್ಟಿ ನಾಯಕಿ. ಸಿನಿಮಾದ ಟ್ರೈಲರ್ ಕುತೂಹಲ ಮೂಡಿಸುತ್ತಿದೆ.

3 / 8
‘ಬಾಹುಬಲಿ: ದಿ ಬಿಗಿನಿಂಗ್’, ‘ಬಾಹುಬಲಿ: ದಿ ಕನ್​​ಕ್ಲೂಷನ್’ ಎರಡನ್ನೂ ಸೇರಿಸಿ ‘ಬಾಹುಬಲಿ: ದಿ ಎಪಿಕ್’ ಹೆಸರಿನಲ್ಲಿ ಮರು ಬಿಡುಗಡೆ ಮಾಡಲಾಗುತ್ತಿದ್ದು, ನಾಳೆ (ಶುಕ್ರವಾರ) ಸಿನಿಮಾ ಭಾರತ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ.

4 / 8
ತೆಲುಗಿನ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿರುವ ರವಿತೇಜ ಮತ್ತು ಕನ್ನಡತಿ ಶ್ರೀಲೀಲಾ ಒಟ್ಟಿಗೆ ನಟಿಸಿರುವ ‘ಮಾಸ್ ಜಾತರ’ ಸಿನಿಮಾ ನಾಳೆ (ಅಕ್ಟೋಬರ್ 31) ಬಿಡುಗಡೆ ಆಗುತ್ತಿದೆ. ಪಕ್ಕಾ ಮಾಸ್-ಮಸಾಲಾ ಸಿನಿಮಾ ಇದಾಗಿದೆ. ಸಿನಿಮಾನಲ್ಲಿ ಶ್ರೀಲೀಲಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

5 / 8
ಮೋಹನ್​​ಲಾಲ್ ಪುತ್ರ ಪ್ರಣವ್ ಮೋಹನ್​​ಲಾಳ್ ನಟನೆಯ ಕುತೂಹಲಕಾರಿ ಹಾರರ್ ಥ್ರಿಲ್ಲರ್ ಕತೆಯನ್ನು ಒಳಗೊಂಡಿರುವ ವಿಚಿತ್ರ ಹೆಸರಿನ ‘ಡೈಸ್ ಇರಾಯ್’ ಮಲಯಾಳಂ ಸಿನಿಮಾ ನಾಳೆ (ಶುಕ್ರವಾರ) ಬಿಡುಗಡೆ ಆಗಲಿದೆ. ಈ ಸಿನಿಮಾನಲ್ಲಿ ಮೋಹನ್​​ಲಾಲ್ ಸಹ ಅತಿಥಿ ಪಾತ್ರದಲ್ಲಿ ನಟಿಸಿದ್ದಾರಂತೆ.

6 / 8
ತಮಿಳಿನ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಆರ್ಯನ್’ ಸಹ ನಾಳೆ (ಅಕ್ಟೋಬರ್ 31) ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾನಲ್ಲಿ ವಿಷ್ಣು ವಿಜಯನ್ ನಾಯಕ, ಕನ್ನಡತಿ ಶ್ರದ್ಧಾ ಶ್ರೀನಾಥ್ ನಾಯಕಿ. ಸಿನಿಮಾದ ಟ್ರೈಲರ್ ಕುತೂಹಲ ಮೂಡಿಸುವಂತಿದೆ.

7 / 8
ಪರೇಶ್ ರಾವಲ್ ನಟನೆಯ ‘ದಿ ತಾಜ್ ಸ್ಟೋರಿ’ ಸಿನಿಮಾ ಸಹ ನಾಳೆ (ಶುಕ್ರವಾರ) ಬಿಡುಗಡೆ ಆಗಲಿದೆ. ತಾಜ್ ಮಹಲ್​ನ ಮೂಲದ ಕುರಿತಾದ ಚರ್ಚೆಯನ್ನು ಈ ಸಿನಿಮಾನಲ್ಲಿ ಮಾಡಲಾಗಿದೆ. ಸಿನಿಮಾ ವಿವಾದವನ್ನೂ ಸೃಷ್ಟಿ ಮಾಡಿದೆ.

8 / 8
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ

ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ

'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?

ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ

ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ

ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!

ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ