AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಚಕತೆ ಸೃಷ್ಟಿಸಿರುವ ನಥಿಂಗ್ ಫೋನ್ 2a ಇಂದು ಬಿಡುಗಡೆ: ಬೆಲೆ ಎಷ್ಟಿರಬಹುದು?

ನಥಿಂಗ್ ಫೋನ್ 1 ಗಿಂತ ನಥಿಂಗ್ ಫೋನ್ 2(ಎ) ಬೆಲೆ ಕೂಡ ಅಗ್ಗವಾಗಿರಲಿದೆಯಂತೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಅಲ್ಟ್ರಾ ಪ್ರೊಸೆಸರ್‌ನಿಂದ ಚಾಲಿತವಾಗಲಿದೆ. ಹಾಗೆಯೆ ಇದು ‘ಗ್ಲಿಫ್ ಇಂಟರ್ಫೇಸ್’ ಇಲ್ಲದೆ ಬಿಡುಗಡೆಯಾಗಲಿದೆ ಎಂಬ ಮಾತಿದೆ. ಈ ಫೋನಿನ ಬೆಲೆ ಸುಮಾರು ರೂ. 31,000 ಇರಬಹುದು.

Vinay Bhat
|

Updated on: Mar 05, 2024 | 6:55 AM

Share
ಕಳೆದ ಎರಡು ವರ್ಷಗಳಿಂದ ನಥಿಂಗ್ ಫೋನ್ ಎಲ್ಲರನ್ನೂ ಆಕರ್ಷಿಸುತ್ತಿವೆ. ಭಾರತದಲ್ಲಿ ಫೋನ್ ಮಾರಾಟದ ವಿಷಯದಲ್ಲೂ ಇದು ಮುಂಚೂಣಿಯಲ್ಲಿದೆ. ಇದೀಗ ಈ ಕಂಪನಿಯ ಹೊಸ ಸ್ಮಾರ್ಟ್​ಫೋನ್ ಬಿಡುಗಡೆಗೆ ಸಜ್ಜಾಗಿದೆ. ಅದುವೇ ನಥಿಂಗ್ ಫೋನ್ 2(A). ಈ ಫೋನ್ ಇಂದು ಮಾರ್ಚ್ 5, 2024 ರಂದು ಭಾರತದಲ್ಲಿ ಅನಾವರಣಗೊಳ್ಳಲಿದೆ.

1 / 5
ಲಂಡನ್ ಮೂಲದ ನಥಿಂಗ್ ಟೆಕ್ನಾಲಜಿ ಕಂಪನಿಯು ಕಳೆದ ಕೆಲವು ತಿಂಗಳುಗಳಿಂದ ಈ ಹೊಸ ಫೋನ್ ಬಗ್ಗೆ ಒಂದಲ್ಲ ಒಂದು ಮಾಹಿತಿ ಹಂಚಿಕೊಳ್ಳುತ್ತಲೇ ಇದೆ. ನಥಿಂಗ್ ಫೋನ್ 2(A) 6.7-ಇಂಚಿನ 120Hz ಡಿಸ್​ಪ್ಲೇ ಮತ್ತು 12GB RAM ನೊಂದಿಗೆ ಬಿಡುಗಡೆ ಆಗುವ ಸಾಧ್ಯತೆಯಿದೆ ಎಂದು ಕೆಲವು ವರದಿಗಳಿವೆ.

2 / 5
ನಥಿಂಗ್ ಫೋನ್ 1 ಗಿಂತ ನಥಿಂಗ್ ಫೋನ್ 2(ಎ) ಬೆಲೆ ಕೂಡ ಅಗ್ಗವಾಗಿರಲಿದೆಯಂತೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಅಲ್ಟ್ರಾ ಪ್ರೊಸೆಸರ್‌ನಿಂದ ಚಾಲಿತವಾಗಲಿದೆ. ಹಾಗೆಯೆ ಇದು ‘ಗ್ಲಿಫ್ ಇಂಟರ್ಫೇಸ್’ ಇಲ್ಲದೆ ಬಿಡುಗಡೆಯಾಗಲಿದೆ ಎಂಬ ಮಾತಿದೆ. ಈ ಫೋನಿನ ಬೆಲೆ ಸುಮಾರು ರೂ. 31,000 ಇರಬಹುದು.

ನಥಿಂಗ್ ಫೋನ್ 1 ಗಿಂತ ನಥಿಂಗ್ ಫೋನ್ 2(ಎ) ಬೆಲೆ ಕೂಡ ಅಗ್ಗವಾಗಿರಲಿದೆಯಂತೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಅಲ್ಟ್ರಾ ಪ್ರೊಸೆಸರ್‌ನಿಂದ ಚಾಲಿತವಾಗಲಿದೆ. ಹಾಗೆಯೆ ಇದು ‘ಗ್ಲಿಫ್ ಇಂಟರ್ಫೇಸ್’ ಇಲ್ಲದೆ ಬಿಡುಗಡೆಯಾಗಲಿದೆ ಎಂಬ ಮಾತಿದೆ. ಈ ಫೋನಿನ ಬೆಲೆ ಸುಮಾರು ರೂ. 31,000 ಇರಬಹುದು.

3 / 5
ಈ ಸಾಧನವನ್ನು ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಬಿಡುಗಡೆ ಮಾಡಲಿದೆ ಎಂದು ವರದಿಗಳಿವೆ. ಹೆಚ್ಚುವರಿಯಾಗಿ, ಈ ಫೋನ್ 50MP ಡ್ಯುಯಲ್-ಕ್ಯಾಮೆರಾ ಸೆಟಪ್, 32MP ಮುಂಭಾಗದ ಕ್ಯಾಮೆರಾ ಮತ್ತು 1084×2412 ಪಿಕ್ಸೆಲ್ ರೆಸಲ್ಯೂಶನ್ ಡಿಸ್​ಪ್ಲೇಯೊಂದಿಗೆ ಬರುತ್ತದೆ. ನಥಿಂಗ್ ಫೋನ್ 2(A) ಕ್ಯಾಮೆರಾದಲ್ಲಿ Sony IMX615 ಸಂವೇದಕವನ್ನು ಹೊಂದಿರುವುದು ಖಚಿತವಾಗಿದೆ.

4 / 5
ಆಂಡ್ರಾಯ್ಡ್ 14-ಆಧಾರಿತ ನಥಿಂಗ್ ಓಎಸ್ 2.5 ಕಸ್ಟಮ್ ಸ್ಕಿನ್ ಆಫ್ ದಿ ಬಾಕ್ಸ್ ಮೂಲಕ ರನ್ ಆಗುತ್ತದೆ. ಬ್ಯಾಟರಿ ಸಾಮರ್ಥ್ಯವು ಎಷ್ಟೆಂದು ತಿಳಿದುಬಂದಿಲ್ಲ, ಈ ಫೋನ್ 45W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆಯಂತೆ. ಸಂಪರ್ಕ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್, GPS ಮತ್ತು USB ಟೈಪ್-C ಪೋರ್ಟ್ ಅನ್ನು ಒಳಗೊಂಡಿರಬಹುದು.

5 / 5
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Follow Us
ಬಿಡದಿ ಟೌನ್‌ಶಿಪ್‌ ವಿವಾದ: ಕಾನೂನಾತ್ಮಕ ಹೋರಾಟ ಮಾಡ್ತೇವೆ; ಕುಮಾರಸ್ವಾಮಿ

ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು

34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್

9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!

ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ

ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ

ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ

ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ

ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ

ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ