- Kannada News Photo gallery Pooja Gandhi marrying Vijay Ghorpade in Yelhanka in Mantra Mangalya style
ಪೂಜಾ ಗಾಂಧಿ ಮದುವೆ ಸಂಭ್ರಮ: ಇಲ್ಲಿವೆ ಚಿತ್ರಗಳು
Pooja Gandhi: ನಟಿ ಪೂಜಾ ಗಾಂಧಿ ಇಂದು ಯಲಹಂಕದಲ್ಲಿ ಉದ್ಯಮಿ ವಿಜಯ್ ಘೋರ್ಪಡೆ ಅವರೊಟ್ಟಿಗೆ ವಿವಾಹವಾಗುತ್ತಿದ್ದಾರೆ. ಮದುವೆಯು ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯ ಮಾದರಿಯಲ್ಲಿ ನಡೆದಿದೆ.
Updated on:Nov 29, 2023 | 9:27 PM

ನಟಿ ಪೂಜಾ ಗಾಂಧಿ ಇಂದು ವಿವಾಹವಾಗುತ್ತಿದ್ದಾರೆ. ಅವರ ವಿವಾಹ ಯಲಯಂಕದದಲ್ಲಿ ನಡೆಯುತ್ತಿದೆ.

ನವೆಂಬರ್ 29ರ ಸಂಜೆ ಮದುವೆ ಕಾರ್ಯಕ್ರಮ ಆರಂಭವಾಗಿದ್ದು, ಕನ್ನಡ ಚಿತ್ರರಂಗದ ಹಾಗೂ ರಾಜಕೀಯ ರಂಗದ ಗಣ್ಯರು ಮದುವೆಯಲ್ಲಿ ಭಾಗಿಯಾಗಿದ್ದಾರೆ.

ಪೂಜಾ ಗಾಂಧಿ, ವಿಜಯ್ ಘೋರ್ಪಡೆ ಹೆಸರಿನ ಉದ್ಯಮಿಯೊಬ್ಬರನ್ನು ವಿವಾಹವಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಲಾಜಿಸ್ಟಿಕ್ ಸಂಸ್ಥೆಯೊಂದನ್ನು ವಿಜಯ್ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಪೂಜಾ ಗಾಂಧಿ ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯ ಮಾದರಿಯಲ್ಲಿ ವಿವಾಹವಾಗುತ್ತಿರುವುದು ವಿಶೇಷ.

ಪಂಜಾಬಿ ಮೂಲದವರಾಗಿರುವ ಪೂಜಾ ಗಾಂಧಿ ಕನ್ನಡತಿಯೇ ಆಗಿಬಿಟ್ಟಿದ್ದಾರೆ. ಅವರು ತಮ್ಮ ವಿವಾಹ ಕಾರ್ಯಕ್ರಮಕ್ಕೆ ಕನ್ನಡದಲ್ಲಿಯೇ ಆಮಂತ್ರಣ ಬರೆದು ಹಂಚಿಕೊಂಡಿದ್ದರು.

ಪೂಜಾ ಗಾಂಧಿಯನ್ನು ಕನ್ನಡಕ್ಕೆ ಪರಿಚಯಿಸಿದ ಯೋಗರಾಜ್ ಭಟ್, ನಟಿ ಸುಧಾರಾಣಿ ಸೇರಿದಂತೆ ಇನ್ನೂ ಹಲವು ಸೆಲೆಬ್ರಿಟಿಗಳು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಪೂಜಾ ಗಾಂಧಿ ದಶಕಕ್ಕೂ ಹೆಚ್ಚು ಸಮಯದಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾತ್ರವಲ್ಲದೆ ರಾಜಕೀಯದಲ್ಲಿಯೂ ತೊಡಗಿಕೊಂಡಿದ್ದರು ಪೂಜಾ.
Published On - 9:02 pm, Wed, 29 November 23



















