- Kannada News Photo gallery Public sector banks turnaround register profits asset quality review NPAs The continuous efforts of NDA govt
PSBs Profit: ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಿಗೆ ಭರ್ಜರಿ ಲಾಭ; ಕಾರಣ ಇಲ್ಲಿದೆ
ಸೆಪ್ಟೆಂಬರ್ನಲ್ಲಿ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಎಸ್ಬಿಐ, ಕೆನರಾ ಸೇರಿದಂತೆ ಸರ್ಕಾರಿ ಸ್ವಾಮ್ಯದ ಹಲವು ಬ್ಯಾಂಕ್ಗಳು ಉತ್ತಮ ಲಾಭ ಗಳಿಸಿವೆ. ಕೆಲವು ವರ್ಷಗಳ ಹಿಂದೆ ನಷ್ಟದ ಹಾದಿಯಲ್ಲಿದ್ದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳೀಗ ಲಾಭದ ಹಾದಿಗೆ ಮರಳಿರುವುದು ಹೇಗೆ? ಯಾವೆಲ್ಲ ಬ್ಯಾಂಕ್ಗಳು ಲಾಭ ಗಳಿಸಿವೆ? ಇಲ್ಲಿದೆ ಮಾಹಿತಿ.
Updated on: Nov 11, 2022 | 3:21 PM

US Treasury removes India from its Currency Monitoring List latest Business and World news in Kannada

Public sector banks turnaround register profits asset quality review NPAs The continuous efforts of NDA govt

ಅನುತ್ಪಾದಕ ಆಸ್ತಿಯನ್ನು ಕಡಿಮೆ ಮಾಡಲು ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಸ್ಥಿತಿಯನ್ನು ಬಲಪಡಿಸಲು ನಮ್ಮ ಸರ್ಕಾರ ಮಾಡಿದ ನಿರಂತರ ಪ್ರಯತ್ನಗಳ ಫಲಿತಾಂಶ ಈಗ ಕಾಣಿಸುತ್ತಿದೆ. ಸರ್ಕಾರಿ ಸ್ವಾಮ್ಯದ ಎಲ್ಲ 12 ಬ್ಯಾಂಕ್ಗಳು ಲಾಭ ಗಳಿಸಿವೆ ಎಂದು ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ.

ಎಸ್ಬಿಐ ಲಾಭದಲ್ಲಿ ಶೇಕಡಾ 74ರಷ್ಟು ಹೆಚ್ಚಳವಾಗಿದ್ದು, 13,265 ಕೋಟಿ ರೂ. ಆಗಿದೆ.

ಕೆನರಾ ಬ್ಯಾಂಕ್ ಲಾಭದಲ್ಲಿ ಶೇಕಡಾ 89ರ ಹೆಚ್ಚಳವಾಗಿ 2,525 ಕೋಟಿ ರೂ. ಆಗಿದೆ.

ಯುಸಿಒ ಬ್ಯಾಂಕ್ ಲಾಭ ಶೇಕಡಾ 145ರಷ್ಟು ಹೆಚ್ಚಾಗಿ 504 ಕೋಟಿ ರೂ. ಆಗಿದೆ.

ಬ್ಯಾಂಕ್ ಆಫ್ ಬರೋಡ ಲಾಭ ಶೇಕಡಾ 58.70 ಹೆಚ್ಚಾಗಿ 3,312.42 ಕೋಟಿ ರೂ. ಆಗಿದೆ.









