Updated on: Nov 28, 2023 | 4:29 PM
ಉಲನ್ ದಾರದಲ್ಲಿ ದಿ.ಪುನೀತ್ ರಾಜಕುಮಾರ್ ಅವರ ಕಲಾಕೃತಿ ಅರಳಿದ್ದು, ಈ ಮೂಲಕ ಅಭಿಮಾನಿಗಳು ಅಪ್ಪುವಿನ ಮೇಲಿಟ್ಟಿರುವ ಅಭಿಮಾನವನ್ನು ಮೆರೆದಿದ್ದಾರೆ.
ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದ ಪುನೀತ್ ಅಭಿಮಾನಿಗಳು ಸೇರಿಕೊಂಡು ಈ ಕೈಚಳಕ ತೋರಿಸಿದ್ದು, ತಮ್ಮ ನೆಚ್ಚಿನ ನಟನ ಚಿತ್ರಣವನ್ನು ಉಲನ್ ದಾರದಲ್ಲಿ ಬಿಡಿಸಿದ್ದಾರೆ.
ಇನ್ನು ಈ ಉಲನ್ ದಾರದಿಂದ ಮಾಡಿದ ಕಲಾಕೃತಿಯನ್ನು ಕಾರಟಗಿ ಪಟ್ಟಣದಲ್ಲಿರುವ ಲಕ್ಷ್ಮಿ ಚಿತ್ರಮಂದಿರದ ಬಳಿ ಅಳವಡಿಸಲಾಗಿದೆ.
ಪುನೀತ್ ರಾಜಕುಮಾರ್ ಅಭಿಮಾನಿಗಳಾದ ಕಾರಟಗಿ ಪಟ್ಟಣದ ನಿವಾಸಿ ಗಿರಿ ಮತ್ತು ಸ್ನೇಹಿತರು ಸೇರಿಕೊಂಡು ಈ ವಿಭಿನ್ನ ರೀತಿಯ ಕೈಚಳಕ ತೋರಿಸಿದ್ದಾರೆ.
ಐದು ಕಿಲೋ ಉಲನ್ ದಾರ ಬಳಸಿ, ಐದು ದಿನ ಸಮಯದಲ್ಲಿ ಈ ವಿಭಿನ್ನ ಕಲಾಕೃತಿ ನಿರ್ಮಾಣ ಮಾಡಿದ್ದು, ಬರೊಬ್ಬರಿ ಹದಿನೈದು ಅಡಿ ಎತ್ತರದ ಕಲಾಕೃತಿ ಇದಾಗಿದೆ.
ಪುನೀತ್ ರಾಜಕುಮಾರ್ ಅವರ ಸ್ಮರಣೆಗಾಗಿ ಈ ಕಲಾಕೃತಿಯನ್ನು ಅಭಿಮಾನಿಗಳು ಸಿದ್ದಮಾಡಿದ್ದು, ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.