Hairstyles : ನಿಮ್ಮ ಕೂದಲಿನ ಅಂದ ಹೆಚ್ಚಿಸುತ್ತೆ ಈ ಕೇಶ ವಿನ್ಯಾಸಗಳು
ಹೆಣ್ಣು ಮಕ್ಕಳಿಗೆ ಬೆಳಗ್ಗೆ ಬೇಗನೇ ಎದ್ದು ಮನೆಯ ಕೆಲಸವನ್ನೆಲ್ಲಾ ಮುಗಿಸಿ ಆಫೀಸಿಗೆ ಹೊರಡುವ ಹೊತ್ತಿಗೆ ಸುಸ್ತೋ ಸುಸ್ತು ಆಗಿರುತ್ತದೆ. ಈ ವೇಳೆಯಲ್ಲಿ ಮಹಿಳೆಯರು ಉಡುಗೆಗೆ ಗಮನ ಕೊಟ್ಟಷ್ಟು ಕೇಶ ವಿನ್ಯಾಸದ ಕಡೆಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ತರಾತುರಿಯಲ್ಲಿ ಕೂದಲಿಗೆ ರಬ್ಬರ್ ಬ್ಯಾಂಡ್ ಹಾಕಿಕೊಂಡು ಹೋಗುತ್ತಾರೆ. ಆದರೆ ಆಫೀಸಿಗೆ ಹೋಗುವ ಹೆಣ್ಣು ಮಕ್ಕಳಿಗೆ ಕೆಲವೇ ಕೆಲವು ನಿಮಿಷದಲ್ಲಿ ಮಾಡಬಹುದಾದ ಕೇಶವಿನ್ಯಾಸಗಳಿದ್ದು, ಈ ಹೇರ್ ಸ್ಟೈಲ್ ಮೂಲಕ ಹೊಸ ಲುಕ್ ಪಡೆಯಬಹುದಾಗಿದೆ.
Updated on: Aug 24, 2024 | 6:13 PM

ಮೆಸ್ಸಿ ಬನ್ : ಓಲ್ಡ್ ಇಸ್ ಗೋಲ್ಡ್ ಎನ್ನುವ ಮಾತಿನಂತೆ ಎಲ್ಲಾ ಪ್ರಾಯದವರಿಗೂ ಹೇಳಿ ಮಾಡಿಸಿದ ಕೇಶ ವಿನ್ಯಾಸವಿದು. ನೆತ್ತಿಯ ಮೇಲೆ ಬಿಂದಾಸ್ ಆಗಿ ಕಾಣುವಂತೆ ಎತ್ತಿ ಕಟ್ಟಿ ತುರುಬನ್ನು ಹಾಕಿದರೆ ನೋಡಲು ಆಕರ್ಷಕವಾಗಿಯೇ ಕಾಣುತ್ತದೆ. ನೋಡಲು ಮೆಸ್ಸಿಯಾಗಿ ಕಾಣುವ ಈ ಕೇಶ ವಿನ್ಯಾಸ ಬೇಸಿಗೆಯಲ್ಲಿ ಎಲ್ಲರೂ ಇಷ್ಟ ಪಡುತ್ತಾರೆ.

ಲೋ ಸ್ಲೀಕ್ ಪೋನಿಟೇಲ್ : ಹೆಚ್ಚಿನವರು ಈ ಕೇಶ ವಿನ್ಯಾಸವನ್ನು ಇಷ್ಟ ಪಡುತ್ತಾರೆ. ಕೂದಲನ್ನು ಸಿಕ್ಕು ಇಲ್ಲದಂತೆ ನಯವಾಗಿ ಬಾಚಿಕೊಳ್ಳಬೇಕು. ನೆತ್ತಿಗಿಂತ ಕೆಳಭಾಗದಲ್ಲಿ ಎಲ್ಲಾ ಕೂದಲನ್ನು ಬಿಗಿಯಾದ ಪೋನಿಟೇಲ್ ಆಗಿ ಒಟ್ಟುಗೂಡಿಸಿ ರಬ್ಬರ್ ಬ್ಯಾಂಡ್ ಹಾಕಿದರೆ ಎಲ್ಲಾ ಉಡುಗೆಗೂ ಈ ಕೇಶ ವಿನ್ಯಾಸವು ಒಪ್ಪುತ್ತದೆ.

ಕ್ರೌನ್ ಬ್ರೈಡ್ ಬನ್ : ಮೊದಲಿಗೆ ಕೂದಲನ್ನು ಬಾಚಿ, ಹೈಪೋನಿ ಕಟ್ಟಿಕೊಳ್ಳಬೇಕು. ಅದಾದ ಬಳಿಕ ಕೂದಲನ್ನು ಮೂರು ಸಮ ಭಾಗಗಾಗಿ ವಿಂಗಡಿಸಿ, ಜಡೆ ಹೆಣೆದುಕೊಳ್ಳಿ. ಆ ಜಡೆಯನ್ನು ಹಣೆಗೆ ಒಂದು ಸುತ್ತು ಸುತ್ತಿ, ಹೈಪೋನಿ ಕಟ್ಟಿಕೊಂಡಲ್ಲಿ ಹೇರ್‌ಪಿನ್ ಸಹಾಯದಿಂದ ಪಿನ್ ಮಾಡಿಕೊಂಡರೆ ಈ ಕೇಶವಿನ್ಯಾಸದಿಂದ ಆಕರ್ಷಕವಾಗಿ ಕಾಣಬಹುದು.

ಹಾಫ್ ಟ್ವಿಸ್ಟೆಡ್ ಮೆಸ್ಸಿ ನಾಟ್ : ಈ ಕೂದಲಿನ ವಿನ್ಯಾಸವು ನೈಸರ್ಗಿಕವಾಗಿದ್ದರೆ ಎಲ್ಲರಿಗೂ ಇಷ್ಟವಾಗುತ್ತದೆ. ಕೂದಲನ್ನು ಅರ್ಧ ಗಂಟು ಹಾಕಿ ಅದನ್ನು ಒಂದು ಸುತ್ತು ಹಾಕಿ ಪಿನ್ ಹಾಕಿದರೆ ಹಾಫ್ ಟ್ವಿಸ್ಟೆಡ್ ಮೆಸ್ಸಿ ನಾಟ್ ಕೇಶವಿನ್ಯಾಸವು ಆಗುತ್ತದೆ. ಈ ಹೇರ್ ಸ್ಟೈಲ್ ಎಲ್ಲರಿಗೂ ಹೊಂದುತ್ತದೆ.

ಕ್ಲಾಸಿಕ್ ಟಾಪ್ ನಾಟ್ ಬನ್ : ಸುಲಭವಾಗಿ ಮಾಡಬಹುದಾದ ಕೇಶವಿನ್ಯಾಸವಿದಾಗಿದ್ದು, ಕೂದಲನ್ನು ಸೇರಿಸಿ ಅದನ್ನು ಪೋನಿಟೇಲ್ ರೀತಿ ಹಾಕಬಹುದು. ಆ ಬಳಿಕ ಕೂದಲನ್ನು ಚೆನ್ನಾಗಿ ಟ್ವಿಸ್ಟ್ ಮಾಡಿ, ತುರುಬಿನ ರೀತಿ ಹಾಕಿ ಪಿನ್ ಮಾಡಿದರೆ ಕ್ಲಾಸಿಕ್ ಟಾಪ್ ನಾಟ್ ಬನ್ ನಲ್ಲಿ ಆಕರ್ಷಕವಾಗಿ ಕಾಣುವಿರಿ.

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.
Read More



