- Kannada News Photo gallery Rashmika Mandanna Birthday Animal and Pushpa The Rule actress Rashmika cute and bold photos
Rashmika Mandanna: ಪಡ್ಡೆ ಹುಡುಗರ ನಿದ್ದೆಗೆಡಿಸುವ ರಶ್ಮಿಕಾ ಮಂದಣ್ಣ; ಇಲ್ಲಿವೆ ನಟಿಯ ಬೋಲ್ಡ್ ಫೋಟೋಗಳು
Happy Birthday Rashmika Mandanna | Rashmika Photos: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇಂದು (ಏ.5) 26ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರಸ್ತುತ ಬಾಲಿವುಡ್ನಲ್ಲಿ ಒಂದರ ಹಿಂದೊಂದು ಆಫರ್ಗಳು ರಶ್ಮಿಕಾ ಪಾಲಾಗುತ್ತಿವೆ. ಪಾತ್ರಗಳ ಆಯ್ಕೆಯಲ್ಲಿ ರಶ್ಮಿಕಾ ವೈವಿಧ್ಯತೆ ತೋರುತ್ತಿದ್ದು, ಕ್ಯೂಟ್, ಬಬ್ಲಿ ಪಾತ್ರಗಳು, ಬೋಲ್ಡ್ ಪಾತ್ರಗಳು ಎಲ್ಲವನ್ನೂ ನಿರ್ವಹಿಸಿದ್ದಾರೆ. ನಟಿಯ ಕ್ಯೂಟ್ ಹಾಗೂ ಬೋಲ್ಡ್ ಫೋಟೋಗಳು ಇಲ್ಲಿವೆ.
Updated on: Apr 05, 2022 | 8:30 AM

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣಗೆ ಇಂದು ಜನ್ಮದಿನದ ಸಂಭ್ರಮ. ಕೊಡಗಿನ ಕುವರಿ 26ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.

ವಿರಾಜಪೇಟೆಯಲ್ಲಿ ಜನಿಸಿದ ರಶ್ಮಿಕಾ, ಸ್ಯಾಂಡಲ್ವುಡ್ನಲ್ಲಿ ಮಿಂಚಿ, ಟಾಲಿವುಡ್ನಲ್ಲೂ ಹೆಸರು ಮಾಡಿದವರು. ಇದೀಗ ಬಾಲಿವುಡ್ನ ಬಹುಬೇಡಿಕೆಯ ನಟಿಯಾಗುತ್ತಿದ್ದಾರೆ ರಶ್ಮಿಕಾ.

ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಳ್ಳುವ ರಶ್ಮಿಕಾಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಅವರೀಗ ‘ನ್ಯಾಷನಲ್ ಕ್ರಶ್’ ಎಂದೂ ಫ್ಯಾನ್ಸ್ಗಳಿಂದ ಗುರುತಿಸಿಕೊಳ್ಳುತ್ತಿದ್ದಾರೆ.

ಸಖತ್ ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಳ್ಳಲು ರಶ್ಮಿಕಾ ಹಿಂದೆ ಸರಿಯುವುದಿಲ್ಲ. ಪಾತ್ರಗಳಿಗಾಗಿ ಅವರು ಈಗಾಗಲೇ ಹಲವು ಬಾರಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಟಿ ಅಲ್ಲಿಯೂ ಬೋಲ್ಡ್ ದೃಶ್ಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇತ್ತೀಚೆಗೆ ತೆರೆಕಂಡ ‘ಪುಷ್ಪ ದಿ ರೈಸ್’ ಚಿತ್ರದಲ್ಲಿ ಶ್ರೀವಲ್ಲಿಯಾಗಿ ಕಾಣಿಸಿಕೊಂಡಿದ್ದ ರಶ್ಮಿಕಾ, ಹಳ್ಳಿ ಹುಡುಗಿಯ ಪಾತ್ರದಲ್ಲಿ ಮಿಂಚಿದ್ದರು.

ಪುಷ್ಪ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಬೋಲ್ಡ್ ದಿರಿಸಿನ ಮೂಲಕ ಸುದ್ದಿಯಾಗಿದ್ದ ರಶ್ಮಿಕಾ

ಪ್ರಸ್ತುತ ಹಲವು ಚಿತ್ರಗಳು ರಶ್ಮಿಕಾ ಬತ್ತಳಿಕೆಯಲ್ಲಿವೆ. ಹಿಂದಿ ಹಾಗೂ ತೆಲುಗಿನ ಪ್ರಖ್ಯಾತ ಸ್ಟಾರ್ ನಟರೊಂದಿಗೆ ರಶ್ಮಿಕಾ ತೆರೆಹಂಚಿಕೊಳ್ಳುತ್ತಿರುವುದು ವಿಶೇಷ.

ಇತ್ತೀಚೆಗಷ್ಟೇ ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದರು.

‘ಪುಷ್ಪ: ದಿ ರೂಲ್’ನಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ.

‘ಮಿಷನ್ ಮಜ್ನು’ ಹಾಗೂ ‘ಗುಡ್ಬೈ’ ಚಿತ್ರಗಳಲ್ಲಿ ರಶ್ಮಿಕಾ ಬಣ್ಣಹಚ್ಚುತ್ತಿದ್ದಾರೆ. ಈ ವರ್ಷ ಈ ಚಿತ್ರಗಳು ತೆರೆಕಾಣುವ ನಿರೀಕ್ಷೆಗಳಿವೆ.

ರಶ್ಮಿಕಾ ಮಂದಣ್ಣ ಬತ್ತಳಿಕೆಗೆ ಈ ವರ್ಷ ಮತ್ತಷ್ಟು ಚಿತ್ರಗಳು ಸೇರ್ಪಡೆಯಾಗುವ ನಿರೀಕ್ಷೆಗಳಿವೆ.




