- Kannada News Photo gallery Rashmika Mandanna shares Cocktail 2 movie new posters with Kriti Sanon and Shahid Kapoor
ಗ್ಲಾಮರಸ್ ಫೋಟೋ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ರಶ್ಮಿಕಾ ಮಂದಣ್ಣ
‘ಕಾಕ್ಟೇಲ್’ ಚಿತ್ರದ ಬಹುನಿರೀಕ್ಷಿತ ಸೀಕ್ವೆಲ್ ಆಗಿರುವ ‘ಕಾಕ್ಟೇಲ್ 2’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ನಟಿಸಿದ್ದಾರೆ. ಅವರ ಜೊತೆ ಶಾಹಿದ್ ಕಪೂರ್, ಕೃತಿ ಸನನ್ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈ ಸಿನಿಮಾದ ಹೊಸ ಫೋಟೋಗಳು ಗಮನ ಸೆಳೆಯುತ್ತಿವೆ. ಫೋಟೋ ಗ್ಯಾಲರಿ ಇಲ್ಲಿದೆ..
Updated on: Apr 07, 2026 | 5:40 PM

ನಟಿ ರಶ್ಮಿಕಾ ಮಂದಣ್ಣ ಅವರು ದಕ್ಷಿಣ ಭಾರತದ ಚಿತ್ರರಂಗ ಮಾತ್ರವಲ್ಲದೇ ಬಾಲಿವುಡ್ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. ಅವರು ನಟಿಸುತ್ತಿರುವ ‘ಕಾಕ್ಟೇಲ್ 2’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ.

‘ಕಾಕ್ಟೇಲ್ 2’ ಸಿನಿಮಾದ ಹೊಸ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಿಂದ ಹೊಸ ಹಾಡು ರಿಲೀಸ್ ಆಗಲಿದೆ.

ರಶ್ಮಿಕಾ ಮಂದಣ್ಣ ಜೊತೆ ಬಾಲಿವುಡ್ ಬೆಡಗಿ ಕೃತಿ ಸನನ್ ಕೂಡ ಅಭಿನಯಿಸುತ್ತಿದ್ದಾರೆ. ಅವರ ಪಾತ್ರ ಕೂಡ ಸಖತ್ ಬೋಲ್ಡ್ ಆಗಿದೆ. ಪಡ್ಡೆ ಹುಡುಗರ ಕಣ್ಣು ಕುಕ್ಕವ ರೀತಿಯಲ್ಲಿ ಕೃತಿ ಸನನ್ ಕಾಣಿಸಿಕೊಂಡಿದ್ದಾರೆ.

ಕೃತಿ ಸನನ್ ಅವರ ಅಭಿಮಾನಿಗಳಲ್ಲಿ ‘ಕಾಕ್ಟೇಲ್ 2’ ಸಿನಿಮಾ ಬಗ್ಗೆ ಕೌತುಕ ಮೂಡಿದೆ. ಈ ಸಿನಿಮಾದಲ್ಲಿ ಡಿಫರೆಂಟ್ ಕಥೆ ಇರಲಿದೆ ಎಂದು ಫ್ಯಾನ್ಸ್ ಊಹಿಸಿದ್ದಾರೆ. ಜೂನ್ ತಿಂಗಳಲ್ಲಿ ಈ ಸಿನಿಮಾ ತೆರೆಕಾಣಲಿದೆ.

ಶಾಹಿದ್ ಕಪೂರ್ ಅವರು ‘ಕಾಕ್ಟೇಲ್ 2’ ಸಿನಿಮಾಗೆ ಹೀರೋ. ಈ ಚಿತ್ರದಲ್ಲಿ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ, ಕೃತಿ ಸನನ್ ಅವರ ಪಾತ್ರಗಳ ನಡುವಿನ ಕಹಾನಿ ಏನು ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.




