- Kannada News Photo gallery Rishab Shetty Hugged To Abhishek Ambareesh And Wish Him Happy Married Life
Rishab Shetty: ಆರತಕ್ಷತೆಯಲ್ಲಿ ಹಗ್ ಕೊಟ್ಟು ಅಭಿಗೆ ವಿಶ್ ಮಾಡಿದ ರಿಷಬ್ ಶೆಟ್ಟಿ
ಅಭಿಷೇಕ್ ಅಂಬರೀಷ್ಗೆ ರಿಷಬ್ ಅವರು ಹಗ್ ಕೊಟ್ಟು ವಿಶ್ ಮಾಡಿದ್ದಾರೆ. ಹೊಸ ಬಾಳಿಗೆ ಅವರು ಶುಭ ಹಾರೈಸಿದ್ದಾರೆ.
Updated on: Jun 08, 2023 | 10:15 AM

ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿಡಪ ಅವರ ಆರತಕ್ಷತೆ ಕಾರ್ಯಕ್ರಮಕ್ಕೆ ಸಾಕಷ್ಟು ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ಈ ದಂಪತಿಗೆ ರಾಜಕಾರಣಿಗಳು, ಚಿತ್ರರಂಗದ ಗಣ್ಯರು ವಿಶ್ ಮಾಡಿದ್ದಾರೆ. ಅದ್ದೂರಿಯಾಗಿ ಈ ಸಮಾರಂಭ ನಡೆದಿದೆ.

ರಿಷಬ್ ಶೆಟ್ಟಿ ಅವರು ಕೂಡ ಆರತಕ್ಷತೆ ಸಮಾರಂಭಕ್ಕೆ ತೆರಳಿದ್ದರು. ಪತ್ನಿ ಪ್ರಗತಿ ಶೆಟ್ಟಿ ಕೂಡ ರಿಷಬ್ ಜೊತೆಯಲ್ಲಿ ಇದ್ದರು. ಈ ಫೋಟೋ ವೈರಲ್ ಆಗಿದೆ.

ಅಭಿಷೇಕ್ ಅಂಬರೀಷ್ಗೆ ರಿಷಬ್ ಅವರು ಹಗ್ ಕೊಟ್ಟು ವಿಶ್ ಮಾಡಿದ್ದಾರೆ. ಹೊಸ ಬಾಳಿಗೆ ಅವರು ಶುಭ ಹಾರೈಸಿದ್ದಾರೆ.

ಆರತಕ್ಷತೆ ವೇದಿಕೆ ಗಮನ ಸೆಳೆದಿದೆ. ಕ್ರಿಸ್ಟಲ್ ಶಾಂಡ್ಲಿಯರ್ ಲೈಟ್ಸ್ ಬಳಸಿ ವೇದಿಕೆ ಸಿದ್ಧಪಡಿಸಲಾಗಿತ್ತು. 300 ಶಾಂಡ್ಲಿಯರ್ ಬಳಕೆ ಆಗಿದ್ದು, 72 ಅಡಿ ಅಗಲದ 32 ಉದ್ದದ ಶಾಂಡ್ಲಿಯರ್ ಇದರಲ್ಲಿ ಇತ್ತು.

ರಿಷಬ್ ಶೆಟ್ಟಿ ಅವರು ‘ಕಾಂತಾರ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಶೀಘ್ರವೇ ಈ ಸಿನಿಮಾ ಶೂಟಿಂಗ್ ಆರಂಭ ಆಗಲಿದೆ. ಇದರ ಮಧ್ಯೆ ಬಿಡುವು ಮಾಡಿಕೊಂಡು ಅವರು ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.




