BBK 9 Winner Prize: ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿಗೆ ಸಿಕ್ಕ ಹಣ ಎಷ್ಟು ಗೊತ್ತಾ?
Bigg Boss Kannada Season winner: ‘ಕನ್ನಡ ಬಿಗ್ ಬಾಸ್ ಸೀಸನ್ 9’ ಗೆದ್ದ ಸ್ಪರ್ಧಿ ರೂಪೇಶ್ ಶೆಟ್ಟಿ 60 ಲಕ್ಷ ರೂಪಾಯಿ ಗೆದ್ದಿದ್ದಾರೆ. ಕಲರ್ಸ್ ಕನ್ನಡ ಕಡೆಯಿಂದ 50 ಲಕ್ಷ ಹಾಗೂ 10 ಲಕ್ಷ ರೂಪಾಯಿ ಸ್ಪಾನ್ಸರ್ ಹಣ ಸಿಗಲಿದೆ. ಒಟ್ಟೂ 60 ಲಕ್ಷ ರೂಪಾಯಿ ಹಣ ಸಿಗಲಿದೆ.
Updated on: Jan 01, 2023 | 12:40 AM

ರೂಪೇಶ್ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ರಾಕೇಶ್ ಅಡಿಗನ ಹಿಂದಿಕ್ಕಿ ರೂಪೇಶ್ ಕಪ್ ಎತ್ತಿದ್ದಾರೆ. ಅವರಿಗೆ ಎಲ್ಲರಿಂದ ಶುಭಾಶಯ ಬರುತ್ತಿದೆ.

‘ಕನ್ನಡ ಬಿಗ್ ಬಾಸ್ ಸೀಸನ್ 9’ ಗೆದ್ದ ಸ್ಪರ್ಧಿ ರೂಪೇಶ್ ಶೆಟ್ಟಿ 60 ಲಕ್ಷ ರೂಪಾಯಿ ಗೆದ್ದಿದ್ದಾರೆ. ಕಲರ್ಸ್ ಕನ್ನಡ ಕಡೆಯಿಂದ 50 ಲಕ್ಷ ಹಾಗೂ 10 ಲಕ್ಷ ರೂಪಾಯಿ ಸ್ಪಾನ್ಸರ್ ಹಣ ಸಿಗಲಿದೆ. ಒಟ್ಟೂ 60 ಲಕ್ಷ ರೂಪಾಯಿ ಹಣ ಸಿಗಲಿದೆ.

ಈ ಬಹುಮಾನದ ಮೊತ್ತಕ್ಕೆ ಶೇ.30 ಟ್ಯಾಕ್ಸ್ ಬೀಳಲಿದೆ. 60 ಲಕ್ಷ ರೂಪಾಯಿಯಲ್ಲಿ 18 ಲಕ್ಷ ರೂ. ಕಟ್ ಆಗಲಿದೆ. ಅಂದರೆ ಬಿಗ್ ಬಾಸ್ ಗೆದ್ದ ಸ್ಪರ್ಧಿಗೆ 42 ಲಕ್ಷ ರೂಪಾಯಿ ಸಿಕ್ಕಿದೆ.

ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ‘ಬಿಗ್ ಬಾಸ್ ಕನ್ನಡ ಒಟಿಟಿ’ ಮೂಲಕ ದೊಡ್ಮನೆ ಜರ್ನಿ ಆರಂಭಿಸಿದರು. ಅಲ್ಲಿ ರೂಪೇಶ್ ಶೆಟ್ಟಿ ಟಾಪ್ ಒನ್ ಆದರು. ನಂತರ ಇವರು ಟಿವಿ ಸೀಸನ್ಗೆ ಬಂದರು.

ಈಗ ಗೆದ್ದು ಅವರು ಬಿಗ್ ಬಾಸ್ ಕಪ್ ಎತ್ತಿದ್ದಾರೆ. ಇದು ರೂಪೇಶ್ ಶೆಟ್ಟಿ ಫ್ಯಾನ್ಸ್ಗೆ ಖುಷಿ ನೀಡಿದೆ.

TV9 Kannada
Read More



