Updated on: Jun 27, 2023 | 10:58 PM
ನಟಿ ಸಮಂತಾ ತಮ್ಮ ಗೆಳೆಯರೊಟ್ಟಿಗೆ ಸೇರಿಕೊಂಡು ಸರ್ಬಿಯಾನಲ್ಲಿ ಸುತ್ತಾಡುತ್ತಿದ್ದಾರೆ.
ಸಮಂತಾರ ಸರ್ಬಿಯಾ ಸುತ್ತಾಟಕ್ಕೆ ಜೊತೆಯಾದ ಗೆಳೆಯರು ಇವರೇ ನೋಡಿ.
ಸರ್ಬಿಯಾದಲ್ಲಿ ತನ್ನ ಕೆಲವು ಗೆಳೆಯರೊಟ್ಟಿಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ, ಕಾಫಿ ಶಾಪ್ಗಳಲ್ಲಿ ಕುಳಿತು ಕಾಫಿ ಕುಡಿದಿದ್ದಾರೆ.
ಸಿಟಾಡೆಲ್ ಹಿಂದಿ ವೆಬ್ ಸರಣಿ ಶೂಟಿಂಗ್ನಿಂದ ಬಿಡುವು ಪಡೆದಿರುವ ಸಮಂತಾ ವಿದೇಶಿ ಪ್ರವಾಸದಲ್ಲಿ ತೊಡಗಿದ್ದಾರೆ.
ಸಮಂತಾರಿಗೆ ಪ್ರವಾಸಗಳೆಂದರೆ ಅಚ್ಚು ಮೆಚ್ಚು ಆಗಾಗ್ಗೆ ಗೆಳೆಯ-ಗೆಳತಿಯರೊಟ್ಟಿಗೆ ಪ್ರವಾಸ ಮಾಡುತ್ತಿರುತ್ತಾರೆ.
ನಾಗ ಚೈತನ್ಯರಿಂದ ವಿಚ್ಛೇದನ ಪಡೆದ ಸಮಯದಲ್ಲಿಯೂ ಸಮಂತಾ ಖಿನ್ನತೆಯಿಂದ ಹೊರಗೆ ಬರಲು ಗೆಳತಿಯರೊಟ್ಟಿಗೆ ಪ್ರವಾಸಕ್ಕೆ ತೆರಳಿದ್ದರು.
ಸಮಂತಾ ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಖುಷಿ ಸಿನಿಮಾ. ಸಿಟಾಡೆಲ್ ವೆಬ್ ಸರಣಿ ಶೀಘ್ರವೇ ಬಿಡುಗಡೆ ಆಗಲಿದೆ.