- Kannada News Photo gallery Samantha Ruth Prabhu enjoys her London trip for Citadel Honey Bunny promotion Entertainment News in Kannada
ವಿದೇಶದಲ್ಲಿ ಸಮಂತಾ ಸುತ್ತಾಟ; ಚಂದದ ಕಾಸ್ಟ್ಯೂಮ್ ಧರಿಸಿ ಕಣ್ಣು ಕುಕ್ಕಿದ ನಟಿ
ನಟಿ ಸಮಂತಾ ರುತ್ ಪ್ರಭು ಅವರು ಲಂಡನ್ನಲ್ಲಿ ಸುತ್ತಾಡುತ್ತಿದ್ದಾರೆ. ‘ಸಿಟಾಡೆಲ್: ಹನಿ ಬನಿ’ ವೆಬ್ ಸಿರೀಸ್ ಪ್ರಚಾರದ ಸಲುವಾಗಿ ಅವರು ಅಲ್ಲಿಗೆ ತೆರಳಿದ್ದಾರೆ. ತಮ್ಮ ತಂಡದ ಜೊತೆ ಪ್ರಮೋಷನ್ನಲ್ಲಿ ಭಾಗವಹಿಸಿದ ಸಮಂತಾ ಅವರು ಬಗೆಬಗೆಯ ವಿನ್ಯಾಸದ ಡ್ರೆಸ್ ಧರಿಸಿ ಮಿಂಚಿದ್ದಾರೆ. ಫ್ಯಾನ್ಸ್ ಪೇಜ್ಗಳಲ್ಲಿ ನಟಿಯ ಈ ಹೊಸ ಫೋಟೋಗಳು ವೈರಲ್ ಆಗುತ್ತಿವೆ.
Updated on: Sep 26, 2024 | 9:16 PM

ಸಿನಿಮಾ ಮಾತ್ರವಲ್ಲದೇ ವೆಬ್ ಸರಣಿಯಲ್ಲೂ ಸಮಂತಾ ರುತ್ ಪ್ರಭು ಅವರಿಗೆ ಸಖತ್ ಬೇಡಿಕೆ ಇದೆ. ‘ದಿ ಫ್ಯಾಮಿಲಿ ಮ್ಯಾನ್ 2’ ಯಶಸ್ಸಿನ ಬಳಿಕ ಅವರು ‘ಸಿಟಾಡೆಲ್: ಹನಿ ಬನಿ’ ವೆಬ್ ಸಿರೀಸ್ನಲ್ಲಿ ಅಭಿನಯಿಸಿದ್ದಾರೆ. ಅದರ ಬಿಡುಗಡೆಗೆ ಫ್ಯಾನ್ಸ್ ಕಾದಿದ್ದಾರೆ.

‘ಸಿಟಾಡೆಲ್: ಹನಿ ಬನಿ’ ವೆಬ್ ಸಿರೀಸ್ನಲ್ಲಿ ಸಮಂತಾ ಮತ್ತು ವರುಣ್ ಧವನ್ ಅವರು ಜೋಡಿಯಾಗಿ ನಟಿಸಿದ್ದಾರೆ. ‘ಅಮೇಜಾನ್ ಪ್ರೈಂ ವಿಡಿಯೋ’ ಒಟಿಟಿ ಮೂಲಕ ಈ ವೆಬ್ ಸರಣಿ ರಿಲೀಸ್ ಆಗಲಿದೆ. ಇದರಲ್ಲಿ ಸಮಂತಾ ಸಖತ್ ಆ್ಯಕ್ಷನ್ ಮೆರೆದಿದ್ದಾರೆ.

‘ದಿ ಫ್ಯಾಮಿಲಿ ಮ್ಯಾನ್’ ಖ್ಯಾತಿಯ ರಾಜ್ ಮತ್ತು ಡಿಕೆ ಅವರು ‘ಸಿಟಾಡೆಲ್: ಹನಿ ಬನಿ’ ವೆಬ್ ಸರಣಿಗೆ ನಿರ್ದೇಶನ ಮಾಡಿದ್ದಾರೆ. ವಿದೇಶದಲ್ಲಿ ಇದರ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದ್ದು, ಅದರಲ್ಲಿ ಸಮಂತಾ ರುತ್ ಪ್ರಭು ಭಾಗಿ ಆಗಿದ್ದಾರೆ.

ನವೆಂಬರ್ನಲ್ಲಿ ‘ಸಿಟಾಡೆಲ್: ಹನಿ ಬನಿ’ ಪ್ರಸಾರ ಆರಂಭ ಆಗಲಿದೆ. ಸದ್ಯ ಸಮಂತಾ ಅವರು ಹೊಸ ಸಿನಿಮಾಗಳ ಆಯ್ಕೆಯಲ್ಲಿ ಅವಸರ ಮಾಡುತ್ತಿಲ್ಲ. ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಕಡೆಗೆ ಅವರು ಹೆಚ್ಚು ಗಮನ ಹರಿಸುತ್ತಿದ್ದಾರೆ.

ಈ ವೆಬ್ ಸರಣಿಗಾಗಿ ಸಮಂತಾ ಅವರು ಸಖತ್ ಕಷ್ಟಪಟ್ಟಿದ್ದಾರೆ. ಆ್ಯಕ್ಷನ್ ದೃಶ್ಯಗಳಿಗಾಗಿ ಸಿಕ್ಕಾಪಟ್ಟೆ ತರಬೇತಿ ಪಡೆದುಕೊಂಡಿದ್ದರು. ಈ ಸಿರೀಸ್ ಬಿಡುಗಡೆ ಆದ ಬಳಿಕ ಸಮಂತಾ ಅವರ ಚಾರ್ಮ್ ಇನ್ನಷ್ಟು ಹೆಚ್ಚಾಗಲಿದೆ ಎಂಬುದು ಫ್ಯಾನ್ಸ್ ಅಭಿಪ್ರಾಯ.




