Updated on: Nov 29, 2022 | 9:48 AM
ನಟಿ ಸಪ್ತಮಿ ಗೌಡ ಅವರು ‘ಕಾಂತಾರ’ ಸಿನಿಮಾ ಬಳಿಕ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ. ಅವರನ್ನು ಹಲವು ಆಫರ್ಗಳು ಹುಡುಕಿಕೊಂಡು ಬರುತ್ತಿವೆ.
ಸಪ್ತಮಿ ಗೌಡ ಅವರು ಈಗ ದೊಡ್ಡ ಚಿತ್ರ ಒಪ್ಪಿಕೊಂಡಿದ್ದಾರೆ. ಅಭಿಷೇಕ್ ಅಂಬರೀಷ್ ನಟನೆಯ ‘ಕಾಳಿ’ ಚಿತ್ರಕ್ಕೆ ನಾಯಕಿ ಆಗಿದ್ದಾರೆ ಅವರು.
ಈ ಚಿತ್ರದ ಮುಹೂರ್ತ ಬೆಂಗಳೂರಿನ ಬಂಡಿ ಮಂಕಾಳಮ್ಮ ದೇವಸ್ಥಾನದಲ್ಲಿ ನೆರವೇರಿದೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ.
ಸ್ವಪ್ನ ಕೃಷ್ಣ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ಹೆಬ್ಬುಲಿ’, ‘ಪೈಲ್ವಾನ್’ ಖ್ಯಾತಿಯ ಕೃಷ್ಣ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಮುಹೂರ್ತದ ಫೋಟೋಗಳನ್ನು ಸಪ್ತಮಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಕಾಂತಾರ’ ಚಿತ್ರದ ಬಳಿಕ ಅವರು ಪ್ಯಾನ್ ಇಂಡಿಯಾ ನಾಯಕಿ ಆಗಿದ್ದಾರೆ.