- TV9 Kannada Photo gallery Shivamogga Mango Dish Competition: Women Showcase Culinary Skills; See Photos
ಶಿವಮೊಗ್ಗದಲ್ಲಿ ವಿಶಿಷ್ಟ ಮಾವಿನ ಖಾದ್ಯಗಳ ಸ್ಪರ್ಧೆ: ಕೈಚಳಕ ತೋರಿಸಿದ ಮಹಿಳೆಯರು; ಇಲ್ಲಿವೆ ಫೋಟೋಸ್
ಶಿವಮೊಗ್ಗದಲ್ಲಿ ನಡೆದ ಮಾವಿನಹಣ್ಣಿನ ಡೆಸರ್ಟ್ ಸ್ಪರ್ಧೆಯಲ್ಲಿ ಮಹಿಳೆಯರು ತಮ್ಮ ಅದ್ಭುತ ಕೈಚಳಕ ಪ್ರದರ್ಶಿಸಿದರು. ಮಾವಿನ ಲಡ್ಡು, ಮ್ಯಾಂಗೋ ಮೂಸ್, ಚೀಸ್ ಕೇಕ್ ಸೇರಿದಂತೆ ತರಹೇವಾರಿ ಖಾದ್ಯಗಳು ಎಲ್ಲರ ಕಣ್ಮನ ಸೆಳೆದವು. ಬಿವಿಐ ಮತ್ತು ಜೆಸಿಐ-ವಿವೇಕ್ ಸಂಸ್ಥೆಗಳು ಆಯೋಜಿಸಿದ್ದ ಈ ಸ್ಪರ್ಧೆ, ಆಹಾರ ಪ್ರಿಯರಿಗೆ ಹೊಸ ಅನುಭವ ನೀಡಿದೆ. ಫೋಟೋಸ್ ಇಲ್ಲಿವೆ ನೋಡಿ.
Updated on: Jun 04, 2026 | 5:26 PM

ಶಿವಮೊಗ್ಗದ ಬಿವಿಐ ಹಾಗೂ ಜೆಸಿಐ-ವಿವೇಕ್ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾವಿನಹಣ್ಣಿನ ವಿಶೇಷ ಡೆಸರ್ಟ್ ಸ್ಪರ್ಧೆಯು ಸಾರ್ವಜನಿಕರ ಗಮನ ಸೆಳೆಯಿತು. ವಿವಿಧ ವಯೋಮಾನದ ಮಹಿಳೆಯರು ಅತ್ಯಂತ ಉತ್ಸಾಹದಿಂದ ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಕಳೆ ತುಂಬಿದರು.

ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಲಲನೆಯರು ಸಾಂಪ್ರದಾಯಿಕ ಉಡುಗೆಗಳಲ್ಲಿ ಕಂಗೊಳಿಸಿದರು. ಕೇವಲ ವೈಯಕ್ತಿಕ ಅಲಂಕಾರಕ್ಕಷ್ಟೇ ಸೀಮಿತವಾಗದೆ, ತಾವು ಸಿದ್ಧಪಡಿಸಿದ ಖಾದ್ಯಗಳನ್ನು ಅಷ್ಟೇ ಸುಂದರವಾಗಿ ಅಲಂಕರಿಸಿ ಪ್ರದರ್ಶನಕ್ಕಿಟ್ಟಿದ್ದು ನೋಡುಗರ ಕಣ್ಮನ ಸೆಳೆಯಿತು. ಮಾವಿನ ಹಣ್ಣಿನ ವೈವಿಧ್ಯತೆ ಇಲ್ಲಿ ಅನಾವರಣಗೊಂಡಿತು.

ಮನೆಯಿಂದಲೇ ಸಿದ್ಧಪಡಿಸಿಕೊಂಡು ತಂದಿದ್ದ ಮಾವಿನ ಲಡ್ಡು, ಮ್ಯಾಂಗೋ ಮೂಸ್, ಚೀಸ್ ಕೇಕ್ ಹಾಗೂ ಶಾಯಿ ಟುಕ್ರಾ ಅಂತಹ ಹೊಸ ಬಗೆಯ ಖಾದ್ಯಗಳು ಕಂಡುಬಂದವು. ಮ್ಯಾಂಗೋ ಹೋಳಿಗೆ ಮತ್ತು ಗೋಲ್ಡೆನ್ ಪುಡ್ಡಿಂಗ್‌ಗಳಂತಹ ತರಹೇವಾರಿ ಸಿಹಿ ಪದಾರ್ಥಗಳು ಆಹಾರ ಪ್ರಿಯರ ಬಾಯಿರುಚಿಯನ್ನು ಹೆಚ್ಚಿಸಿದವು.

ಮಹಿಳೆಯರು ತಮ್ಮ ಕೈಚಳಕದ ಮೂಲಕ ಮಾವಿನ ಹಣ್ಣಿನಲ್ಲಿ ಏನೆಲ್ಲಾ ಅದ್ಭುತ ಖಾದ್ಯಗಳನ್ನು ತಯಾರಿಸಬಹುದು ಎಂಬುದನ್ನು ಸಾಬೀತುಪಡಿಸಿದರು. ಪ್ರತಿಯೊಂದು ಖಾದ್ಯವೂ ವಿಶಿಷ್ಟ ರುಚಿ ಮತ್ತು ವಿನ್ಯಾಸವನ್ನು ಹೊಂದಿದ್ದು, ನೆರೆದಿದ್ದ ಪ್ರೇಕ್ಷಕರಲ್ಲಿ ಮತ್ತು ಆಯೋಜಕರಲ್ಲಿ ಆಶ್ಚರ್ಯವನ್ನು ಉಂಟುಮಾಡಿತು.

ಸಂಘಟಕರು ಸ್ಪರ್ಧೆಯನ್ನು ಬಹಳ ಅಚ್ಚುಕಟ್ಟಾಗಿ ರೂಪಿಸಿದ್ದರು. ಮಹಿಳೆಯರ ಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸುವ ಮೂಲಕ, ತಾವು ಯಾರಿಗೂ ಕಡಿಮೆ ಇಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಬಳಿಕ ಸ್ಪರ್ಧಾಳುಗಳು ತಮ್ಮ ಅನುಭವ ಹಂಚಿಕೊಂಡರು.

ಈ ಸ್ಪರ್ಧೆಯು ಕೇವಲ ಗೆಲುವಿಗಾಗಿ ಸೀಮಿತವಾಗಿರದೆ, ಭಾರತೀಯ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಉಳಿಸುವ ಪ್ರಯತ್ನವಾಗಿತ್ತು. ಆಧುನಿಕತೆ ನಡುವೆಯೂ ನಮ್ಮ ಪರಂಪರೆಯ ಸಿಹಿ ಪದಾರ್ಥಗಳ ಮಹತ್ವವನ್ನು ಸಾರಿ ಹೇಳಿದೆ.




