- Kannada News Photo gallery Siddharth Anand Pics: Meet the man behind Shah Rukh Khan's Pathaan movie success
Siddharth Anand: ಬಾಲಿವುಡ್ಗೆ 2023ರ ಮೊದಲ ಬ್ಲಾಕ್ ಬಸ್ಟರ್ ನೀಡಿದ ‘ಪಠಾಣ್’ ನಿರ್ದೇಶಕ ಸಿದ್ದಾರ್ಥ್ ಆನಂದ್
Shah Rukh Khan | Pathaan Movie: ಶಾರುಖ್ ಖಾನ್ಗೆ ದೊಡ್ಡ ಗ್ಯಾಪ್ ಬಳಿಕ ಗೆಲುವು ತಂದುಕೊಟ್ಟ ಖ್ಯಾತಿ ಸಿದ್ದಾರ್ಥ್ ಆನಂದ್ ಅವರಿಗೆ ಸಲ್ಲುತ್ತದೆ. ‘ಪಠಾಣ್’ ಯಶಸ್ಸಿನಿಂದ ಅವರ ಡಿಮ್ಯಾಂಡ್ ಹೆಚ್ಚಾಗಿದೆ.
Updated on: Jan 26, 2023 | 8:30 AM

ಇಷ್ಟು ದಿನಗಳ ಕಾಲ ಸೊರಗಿದ್ದ ಬಾಲಿವುಡ್ ಬಾಕ್ಸ್ ಆಫೀಸ್ಗೆ ಹೊಸ ಮೆರುಗು ಸಿಕ್ಕಿದೆ. ‘ಪಠಾಣ್’ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ. ಈ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ.

ಈ ಹಿಂದೆ ‘ವಾರ್’ ಸಿನಿಮಾ ಮಾಡಿದ್ದ ಸಿದ್ದಾರ್ಥ್ ಆನಂದ್ ಅವರು ಈಗ ‘ಪಠಾಣ್’ ಮೂಲಕ ಮತ್ತೆ ಕಮಾಲ್ ಮಾಡಿದ್ದಾರೆ. ದೇಶಭಕ್ತಿ ಕಥಾಹಂದರ ಇರುವ ಸಾಹಸ ಪ್ರಧಾನ ಸಿನಿಮಾವನ್ನು ಅವರು ವೀಕ್ಷಕರಿಗೆ ನೀಡಿದ್ದಾರೆ.

ಸಿದ್ದಾರ್ಥ್ ಆನಂದ್ ಅವರ ಕಸುಬುದಾರಿಕೆಗೆ ಎಲ್ಲರಿಂದ ಮೆಚ್ಚುಗೆ ಕೇಳಿಬರುತ್ತಿದೆ. ಶಾರುಖ್ ಖಾನ್ ಅವರಿಗೆ ಹಲವು ವರ್ಷಗಳ ಬಳಿಕ ಗೆಲುವು ತಂದು ಕೊಟ್ಟ ಕೀರ್ತಿ ಸಿದ್ದಾರ್ಥ್ ಆನಂದ್ಗೆ ಸಲ್ಲುತ್ತದೆ.

ಹಿಂದಿ ಚಿತ್ರರಂಗದಲ್ಲಿ ಸಿದ್ದಾರ್ಥ್ ಆನಂದ್ ಅವರು ಬಹುಬೇಡಿಕೆಯ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರ ಮುಂಬರುವ ಚಿತ್ರಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

‘ಪಠಾಣ್’ ಸಿನಿಮಾದಲ್ಲಿ ಎಲ್ಲ ಪಾತ್ರಗಳಿಗೆ ಸಿದ್ದಾರ್ಥ್ ಆನಂದ್ ಅವರು ಸಮಾನ ಆದ್ಯತೆ ನೀಡಿದ್ದಾರೆ. ಅವರ ಕೆಲಸದ ಶೈಲಿಗೆ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಚಿತ್ರದ ಭರ್ಜರಿ ಗೆಲುವಿಗೆ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.




