ಡೇವಿಡ್ ಬೆಕಮ್ಗೆ ಭಾರತೀಯ ಸಂಸ್ಕೃತಿಯ ಪರಿಚಯ ಮಾಡಿಸಿದ ಸೋನಂ ಕಪೂರ್ ದಂಪತಿ
David Beckham: ಭಾರತಕ್ಕೆ ಆಗಮಿಸಿದ್ದ ಖ್ಯಾತ ಮಾಜಿ ಫುಟ್ಬಾಲ್ ಕ್ರೀಡಾಪಟು ಡೇವಿಡ್ ಬೆಕಮ್, ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಅವರ ಪತಿ ಆನಂದ್ ಅಹೂಜಾರ ಅತಿಥಿಯಾಗಿ ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಭಾರತೀಯ ಸಂಸ್ಕೃತಿಯ ಪರಿಚಯವನ್ನು ಈ ಜೋಡಿ ಡೇವಿಡ್ಗೆ ಮಾಡಿಕೊಟ್ಟಿದ್ದಾರೆ.
Updated on: Nov 17, 2023 | 11:15 PM
Share

ಭಾರತ-ನ್ಯೂಜಿಲೆಂಡ್ ಪಂದ್ಯ ವೀಕ್ಷಿಸಿದ ಡೇವಿಡ್ ಬೆಕಮ್, ಸೋನಂ ಕಪೂರ್ ಮತ್ತು ಆನಂದ್ ಅಹೂಜಾರ ಮನೆಗೆ ಅತಿಥಿಯಾಗಿ ತೆರಳಿದರು.

ಯುನೆಸೆಫ್ ರಾಯಭಾರಿಯಾಗಿ ವಿಶ್ವಕಪ್ ಸೆಮಿಫೈನಲ್ ಪಂದ್ಯ ವೀಕ್ಷಿಸಲು ಇಂಗ್ಲೆಂಡ್ನ ಖ್ಯಾತ ಫುಟ್ಬಾಲ್ ಆಟಗಾರ ಡೇವಿಡ್ ಬೆಕಮ್ ಭಾರತಕ್ಕೆ ಬಂದಿದ್ದರು.

ಇದೀಗ ಸೋನಂ ಕಪೂರ್ ಡೇವಿಡ್ ಬೆಕಮ್ ಅತಿಥಿಯಾಗಿ ತಮ್ಮ ಮನೆಗೆ ಆಗಮಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಸೋನಂ ಕಪೂರ್ ದಂಪತಿ ಡೇವಿಡ್ ಬೆಕಮ್ಗೆ ದೊಡ್ಡ ಪಾರ್ಟಿ ನೀಡಿದ್ದಾರೆ ಎನ್ನಲಾಯ್ತು. ಹಲವು ಅತಿಥಿಗಳು ಸಹ ಪಾರ್ಟಿಯಲ್ಲಿದ್ದರು.

ಅತಿಥಿಯಾಗಿ ಮನೆಗೆ ಬಂದ ಡೇವಿಡ್ ಬೆಕಮ್ಗೆ ಭಾರತೀಯ ಸಂಸ್ಕೃತಿಯ ಸಣ್ಣ ಪರಿಚಯವನ್ನು ದಂಪತಿ ಮಾಡಿಸಿದ್ದಾರೆ.

ಆರತಿ ಎತ್ತಿ ಮನೆಗೆ ಕರೆದಿರುವ ಸೋನಂ ದಂಪತಿ, ಡೇವಿಡ್ ಬೆಕಮ್ಗೆ ತಮ್ಮ ಆಚರಣೆಗಳ ಪರಿಚಯ ಮಾಡಿಸಿಕೊಟ್ಟಿದ್ದಾರೆ.

ಡೇವಿಡ್ ಬೆಕಮ್ ಕೈಗೆ ಹೂವನ್ನು ಕಟ್ಟಿ ಅವರನ್ನೂ ಸಹ ಪೂಜೆಯ ಭಾಗವನ್ನಾಗಿಸಿದ್ದಾರೆ.
Related Photo Gallery
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್ ವಿಡಿಯೋ
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಸಂಸತ್ ಮೇಲಿನ ದಾಳಿ, ಅಫ್ಜಲ್ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ಸ್ಕ್ವಾಷ್ ವಿಶ್ವಕಪ್ ಗೆದ್ದ ಭಾರತ




