AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾಕ್ಟರ್ ಆಗಿ ಸ್ಯಾಂಡಲ್‌ವುಡ್-ಬಾಲಿವುಡ್​ನಲ್ಲಿ ಮಿಂಚಿದ ಜನಪ್ರಿಯ ತಾರೆಯರು

National Doctors Day 2026: ಸಿನಿಮಾ ರಂಗ ಎಂದರೆ ಕೇವಲ ಬಣ್ಣ, ಗ್ಲಾಮರ್ ಮತ್ತು ನಟನೆ ಮಾತ್ರ ಎಂದುಕೊಳ್ಳುವವರೇ ಹೆಚ್ಚು. ಆದರೆ ಬೆಳ್ಳಿತೆರೆಯಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿರುವ ಹಲವು ತಾರೆಯರು, ನಿಜ ಜೀವನದಲ್ಲಿ ಸ್ಟೆತಸ್ಕೋಪ್ ಹಿಡಿದ ಹೆಮ್ಮೆಯ ವೈದ್ಯರಾಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

 ಶ್ರೀಲಕ್ಷ್ಮೀ ಎಚ್
| Edited By: |

Updated on:Jul 01, 2026 | 3:23 PM

Share
ಇಂದು (ಜುಲೈ 1) ರಾಷ್ಟ್ರೀಯ ವೈದ್ಯರ ದಿನಾಚರಣೆಯ ಸಂಭ್ರಮ. ಈ ವಿಶೇಷ ದಿನದಂದು ಕಠಿಣವಾದ ವೈದ್ಯಕೀಯ ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿ, ಬಳಿಕ ಚಿತ್ರರಂಗದಲ್ಲೂ ತಮ್ಮದೇ ಆದ ಹೊಸ ಮುದ್ರೆ ಒತ್ತಿರುವ ದಕ್ಷಿಣ ಭಾರತ ಹಾಗೂ ಬಾಲಿವುಡ್‌ನ ಜನಪ್ರಿಯ ಸ್ಟಾರ್ಸ್ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ.

1 / 7
ದಕ್ಷಿಣ ಭಾರತದ ಖ್ಯಾತ ನಟಿ ಶ್ರೀಲೀಲಾ ಅವರು ಇತ್ತೀಚೆಗಷ್ಟೇ ಎಂಬಿಬಿಎಸ್ (MBBS) ಪದವಿ ಮುಗಿಸಿದ್ದಾರೆ. ಅವರು ಡಿ.ವೈ. ಪಾಟೀಲ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದ್ದಾರೆ. ಶ್ರೀಲೀಲಾ ಅವರು ನಟನೆ ಮತ್ತು ಓದು ಎರಡನ್ನೂ ಸಮನಾಗಿ ನಿಭಾಯಿಸಿದ್ದಾರೆ.

2 / 7
ನಟಿ ಸಾಯಿ ಪಲ್ಲವಿ ಅವರು ಜಾರ್ಜಿಯಾದ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಓದಿದ್ದಾರೆ. ಅವರು 2016 ರಲ್ಲಿ ತಮ್ಮ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿದರು. ಬಳಿಕ ಭಾರತದಲ್ಲಿ ವೈದ್ಯಕೀಯ ಪರೀಕ್ಷೆಯನ್ನೂ ಪಾಸ್ ಮಾಡಿದ್ದಾರೆ. ಆದರೆ ಸದ್ಯ ಅವರು ಪೂರ್ಣ ಪ್ರಮಾಣದಲ್ಲಿ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ.

3 / 7
ಖ್ಯಾತ ನಿರ್ದೇಶಕ ಶಂಕರ್ ಅವರ ಪುತ್ರಿ ಅದಿತಿ ಶಂಕರ್ ಕೂಡ ವೈದ್ಯರಾಗಿದ್ದಾರೆ. ಅವರು ಶ್ರೀ ರಾಮಚಂದ್ರ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದ್ದಾರೆ. ಬಳಿಕ ಕಾರ್ತಿ ನಟನೆಯ 'ವಿರುಮನ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು.

4 / 7
ಮಾಡೆಲಿಂಗ್ ಮತ್ತು ನಟನೆಯಲ್ಲಿ ಗುರುತಿಸಿಕೊಂಡಿರುವ ಅದಿತಿ ಗೋವಿತ್ರಿಕರ್ ಎಂಬಿಬಿಎಸ್ ಪದವೀಧರೆ. ಅವರು ಮಿಸ್ ವರ್ಲ್ಡ್ ಬ್ಯೂಟಿ ಪೆಜೆಂಟ್ ಕೂಡ ಗೆದ್ದಿದ್ದಾರೆ. ವೈದ್ಯಕೀಯ ಶಿಕ್ಷಣವು ತಮಗೆ ಶಿಸ್ತು ಕಲಿಸಿದೆ ಎಂದು ಅವರು ಹೇಳಿಕೊಳ್ಳುತ್ತಾರೆ.

5 / 7
ಹಿರಿಯ ನಟ ಮೋಹನ್ ಅಗಾಶೆ ಅವರು ರಂಗಭೂಮಿ ಮತ್ತು ಚಿತ್ರರಂಗದಲ್ಲಿ ದೊಡ್ಡ ಹೆಸರು. ಅವರು ಪುಣೆಯ ಬಿ.ಜೆ. ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿದ್ದಾರೆ. ನಂತರ ಸೈಕಿಯಾಟ್ರಿ (Psychiatry) ವಿಭಾಗದಲ್ಲಿ ಎಂಡಿ ಪದವಿ ಪಡೆದಿದ್ದಾರೆ. ಅವರು ಮನೋವೈದ್ಯರಾಗಿ ಮತ್ತು ಪ್ರೊಫೆಸರ್ ಆಗಿ ಕೆಲಸ ಮಾಡಿದ್ದಾರೆ.

6 / 7
ಬಾಲಿವುಡ್ ನಟ ಮತ್ತು ಗಾಯಕ ಮೇಯಾಂಗ್ ಚಾಂಗ್ ಅವರು ದಂತ ವೈದ್ಯರಾಗಿದ್ದಾರೆ (Dentist). ಅವರು ಬೆಂಗಳೂರಿನ ಒಕ್ಕಲಿಗರ ಸಂಘದ ಡೆಂಟಲ್ ಕಾಲೇಜಿನಲ್ಲಿ ಬಿಡಿಎಸ್ ಮುಗಿಸಿದ್ದಾರೆ. ಗಾಯನ ಮತ್ತು ನಟನೆಯತ್ತ ಆಕರ್ಷಿತರಾಗುವ ಮುನ್ನ ಅವರು ಪ್ರಾಕ್ಟೀಸ್ ಮಾಡುತ್ತಿದ್ದರು.

7 / 7

Published On - 3:18 pm, Wed, 1 July 26

Follow Us
ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು

ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಬರೋರಿಗೆ ಹಾಲು ಬಿಸ್ಕೆಟ್ ವ್ಯವಸ್ಥೆ!

ರಾಮಮಂದಿರ ದೇಣಿಗೆ ಕಳ್ಳತನ ಕೇಸ್​: ಅನಧಿಕೃತ ಕಾಣಿಕೆ ಹುಂಡಿಗಳು ಪತ್ತೆ

ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ಸೋನು ಗೌಡ

ವೈದ್ಯಕೀಯ ಪರೀಕ್ಷೆಗೆ ಕರೆತಂದ ವೇಳೆ ಶಂಕಿತ ಉಗ್ರ ಸುಹೇಲ್ ಉದ್ದಟತನ

ಆಷಾಢದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರ ಗಮನಕ್ಕೆ ಬಿಗ್ ಅಪ್​ಡೇಟ್

ಬಸ್ ಪ್ರಯಾಣ ದರ ಹೆಚ್ಚಳದ ಬಗ್ಗೆ ಸಚಿವ ಭೈರತಿ ಸುರೇಶ್ ಹೇಳಿದ್ದೇನು?

ಮೆಡಿಕಲ್ ಗಾರ್ಬೇಜ್ ತಾಣವಾಗ್ತಿದೆಯಾ ನೆಲಮಂಗಲ?
ಮೆಡಿಕಲ್ ಗಾರ್ಬೇಜ್ ತಾಣವಾಗ್ತಿದೆಯಾ ನೆಲಮಂಗಲ?
ಫುಟ್​ಪಾತ್ ತೆರವು ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳಿಂದ ತೀವ್ರ ಆಕ್ರೋಶ

ನಿರ್ಮಾಪಕಿ ಬಳಿಕ ಈಗ ಹಿನ್ನೆಲೆ ಗಾಯಕಿಯಾದ ಗಣೇಶ್ ಪತ್ನಿ ಶಿಲ್ಪಾ