ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಆವೃತ್ತಿಯ ಬೆಲೆ ಇಳಿಕೆಯೊಂದಿಗೆ ಹೊಸ ಕಾರಿನಲ್ಲಿ ಮತ್ತೊಂದು ಹೊಸ ವೆರಿಯೆಂಟ್ ಬಿಡುಗಡೆ ಮಾಡಿದ್ದು, ಜೊತೆಗೆ ಸಾಫ್ಟ್ ವೇರ್ ಅಪ್ ಡೇಟ್ ಮೂಲಕ ಮೈಲೇಜ್ ಪ್ರಮಾಣದಲ್ಲಿ ಹೆಚ್ಚಳ ಮಾಡಿರುವುದಾಗಿ ಮಾಹಿತಿ ಹಂಚಿಕೊಂಡಿದೆ.
Jan 19, 2023 | 7:46 PM
ಮಹೀಂದ್ರಾ ಎಕ್ಸ್ ಯುವಿ400 ಇವಿ ಬಿಡುಗಡೆಯಾದ ಕೇವಲ 2 ದಿನಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ ಮಾದರಿಯಲ್ಲಿ ಭಾರೀ ಬದಲಾವಣೆಯೊಂದಿಗೆ ಬೆಲೆ ಇಳಿಕೆ ಘೋಷಣೆ ಮಾಡಿದೆ.
1 / 7
ನವೀಕೃತ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ವಿವಿಧ ವೆರಿಯೆಂಟ್ ಗಳ ಬೆಲೆಯಲ್ಲಿ ರೂ. 31 ಸಾವಿರದಿಂದ ರೂ. 85 ಸಾವಿರ ತನಕ ಇಳಿಕೆ ಮಾಡಲಾಗಿದ್ದು, ಹೊಸ ದರಪಟ್ಟಿಯಲ್ಲಿ ನೆಕ್ಸಾನ್ ಇವಿ ಕಾರು ರೂ. 14.49 ಲಕ್ಷ ಆರಂಭಿಕ ಎಕ್ಸ್ ಶೋರೂಂ ದರ ಪಡೆದುಕೊಂಡಿದೆ.
2 / 7
ನೆಕ್ಸಾನ್ ಇವಿ ಮ್ಯಾಕ್ಸ್ ಹೈಎಂಡ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 18.99 ಲಕ್ಷ ಬೆಲೆ ಪಡೆದುಕೊಂಡಿದ್ದು, ಇದು ಈ ಹಿಂದಿನ ಮಾದರಿಗಿಂತಲೂ ರೂ. 85 ಸಾವಿರದಷ್ಟು ಬೆಲೆ ಇಳಿಕೆ ಪಡೆದುಕೊಂಡಿದೆ.
3 / 7
ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿಯಲ್ಲಿ ಪ್ರೈಮ್ ಮತ್ತು ಮ್ಯಾಕ್ಸ್ ಎಡಿಷನ್ ಮಾರಾಟ ಮಾಡುತ್ತಿದ್ದು, ನೆಕ್ಸಾನ್ ಇವಿ ಮ್ಯಾಕ್ಸ್ ನಲ್ಲಿ ಟಾಟಾ ಕಂಪನಿಯು ಹೊಸದಾಗಿ ಎಕ್ಸ್ಎಂ ವೆರಿಯೆಂಟ್ ಪರಿಚಯಿಸಿದೆ.
4 / 7
ನೆಕ್ಸಾನ್ ಇವಿ ಕಾರಿನ ಬೆಲೆ ಇಳಿಕೆ ಮತ್ತು ಹೊಸ ವೆರಿಯೆಂಟ್ ಬಿಡುಗಡೆಯ ಜೊತೆಗೆ ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ ಮ್ಯಾಕ್ಸ್ ಮೈಲೇಜ್ ರೇಂಜ್ ನಲ್ಲೂ ಹೆಚ್ಚಳ ಮಾಡಿದ್ದು, 34.5 kWh ಬ್ಯಾಟರಿ ಪ್ಯಾಕ್ ಅನ್ನು ನವೀಕರಿಸಲಾಗಿದೆ.
5 / 7
ನವೀಕರಿಸಿದ ನೆಕ್ಸಾನ್ ಇವಿ ಮ್ಯಾಕ್ ಮಾದರಿಯು ಪ್ರತಿ ಚಾರ್ಜ್ ಗೆ 453 ಕಿ.ಮೀ ಮೈಲೇಜ್ ನೀಡಲಿದ್ದು, ಇದು ಹಳೆಯ ಮಾದರಿಗಿಂತಲೂ ಹೆಚ್ಚುವರಿಯಾಗಿ 16 ಕಿ.ಮೀ ಮೈಲೇಜ್ ನೀಡುತ್ತದೆ.
6 / 7
ಹೊಸ ನೆಕ್ಸಾನ್ ಇವಿ ಕಾರಿನಲ್ಲಿ ಪ್ರೈಮ್ ವೆರಿಯೆಂಟ್ ಗಳು ಎಕ್ಸ್ ಶೋರೂಂ ಪ್ರಕಾರ ರೂ. 14.49 ಲಕ್ಷದಿಂದ ರೂ. 16.99 ಲಕ್ಷ ಬೆಲೆ ಹೊಂದಿದ್ದು, ಮ್ಯಾಕ್ಸ್ ವೆರಿಯೆಂಟ್ ಗಳು ಎಕ್ಸ್ ಶೋರೂಂ ಪ್ರಕಾರ ರೂ. 16.49 ಲಕ್ಷದಿಂದ ರೂ. 18.99 ಲಕ್ಷ ಬೆಲೆ ಹೊಂದಿದೆ.