- Kannada News Photo gallery Tech Tips and Tricks How to remove scratches from your smartphone display
Tech Tips: ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮೇಲಿನ ಗೀರುಗಳನ್ನು ನಿಮಿಷಗಳಲ್ಲಿ ತೆಗೆದುಹಾಕಿ: ಇಲ್ಲಿದೆ ಬೆಸ್ಟ್ ಟಿಪ್ಸ್
ಹೆಚ್ಚಿನವರ ಮೊಬೈಲ್ ಡಿಸ್ ಪ್ಲೇ ಒಂದಲ್ಲ ಒಂದು ರೀತಿಯಲ್ಲಿ ಹಾನಿಯಾಗಿರುತ್ತದೆ. ಡಿಸ್ ಪ್ಲೇಗೆ ಸ್ಕ್ರೀನ್ ಕವರ್ ಹಾಕಿದ್ದರೂ ಅದು ಕೆಲವೊಂದು ಬಾರಿ ಉಪಯೋಗಕ್ಕೆ ಬರುವುದಿಲ್ಲ. ದಿನನಿತ್ಯದ ಬಳಕೆಯ ನಡುವೆ ಸ್ಮಾರ್ಟ್‌ಫೋನ್ ಸ್ಕ್ರಾಚ್ ಆಗಿಯೇ ಆಗುತ್ತದೆ. ಆದ್ದರಿಂದ ನಿಮ್ಮ ಫೋನ್ನಲ್ಲಾದ ಸ್ಕ್ರಾಚ್ ಅನ್ನು ಸುಲಭವಾಗಿ ಹೇಗೆ ತೆಗೆಯಬಹುದು ಎಂದು ಲೇಖನದಲ್ಲಿ ತಿಳಿಸಲಾಗಿದೆ.
Updated on: Nov 02, 2024 | 3:43 PM

ಇಂದು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ನಾನಾ ನಮೂನೆಯ ಮೊಬೈಲ್ಗಳಿವೆ. ಮಡಚುವ ಫೋನ್ನಿಂದ ಹಿಡಿದು ಕೀಪೈಡ್ ಮೊಬೈಲ್ ವರೆಗೆ ಖರೀದಿ ಮಾಡುತ್ತಾರೆ. ಮುಖ್ಯವಾಗಿ ಈಗ ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ಸ್ ಸುಲಭದಿಂದ ಸಿಗುತ್ತಿರುವ ಕಾರಣ ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳುವವರು ಕಮ್ಮಿ.

ಹೆಚ್ಚಿನವರ ಮೊಬೈಲ್ ಡಿಸ್ ಪ್ಲೇ ಒಂದಲ್ಲ ಒಂದು ರೀತಿಯಲ್ಲಿ ಹಾನಿಯಾಗಿರುತ್ತದೆ. ಡಿಸ್ ಪ್ಲೇಗೆ ಸ್ಕ್ರೀನ್ ಕವರ್ ಹಾಕಿದ್ದರೂ ಅದು ಕೆಲವೊಂದು ಬಾರಿ ಉಪಯೋಗಕ್ಕೆ ಬರುವುದಿಲ್ಲ. ದಿನನಿತ್ಯದ ಬಳಕೆಯ ನಡುವೆ ಸ್ಮಾರ್ಟ್‌ಫೋನ್ ಸ್ಕ್ರಾಚ್ ಆಗಿಯೇ ಆಗುತ್ತದೆ. ಆದ್ದರಿಂದ ನಿಮ್ಮ ಫೋನ್ನಲ್ಲಾದ ಸ್ಕ್ರಾಚ್ ಅನ್ನು ಸುಲಭವಾಗಿ ಹೇಗೆ ತೆಗೆಯಬಹುದು ಎಂದು ಲೇಖನದಲ್ಲಿ ತಿಳಿಸಲಾಗಿದೆ.

ಬೇಕಿಂಗ್ ಸೋಡಾ: ಸ್ಕ್ರಾಚ್ ನಿವಾರಣೆಗಾಗಿ ಬೇಕಿಂಗ್ ಸೋಡಾ ಉತ್ತಮ ವಿಧಾನ. ಒಂದು ಪಾತ್ರೆಗೆ ನೀರು ಮತ್ತು ಸೋಡಾವನ್ನು ಬೆರೆಸಿಕೊಳ್ಳಿ. ಇವೆರಡನ್ನು ನುಣ್ಣನೆ ಪೇಸ್ಟ್ ಮಾಡಿ ಮತ್ತು ಹತ್ತಿ ಬಟ್ಟೆ ಬಳಸಿ ಸ್ಕ್ರಾಚ್ ನಿವಾರಣೆ ಮಾಡಿ. ಹಾಗೆಯೆ ಮಾರುಕಟ್ಟೆಯಲ್ಲಿ ಹಲವಾರು ಕಾರು ಸ್ಕ್ರಾಚ್ ರಿಮೂವಲ್ ಕ್ರೀಮ್‌ಗಳಿವೆ. ಅವುಗಳಲ್ಲಿ ಯಾವುದಾದರೂ ಒಂದನ್ನು ಬಳಸಿ ನಿಮ್ಮ ಫೋನ್ ಡಿಸ್‌ಪ್ಲೇ ಸ್ಕ್ರಾಚ್ ಹೋಗಲಾಡಿಸಿ.

ಮೊಟ್ಟೆಯ ಬಿಳಿಭಾಗ: ಹೌದು, ಮೊಟ್ಟೆಯ ಬಿಳಿಭಾಗ ಮತ್ತು ಪೊಟ್ಯಾಶಿಯಮ್ ಸಲ್ಫೇಟ್ ಬಳಸಿ ಫೋನ್ ಸ್ಕ್ರಾಚ್ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಇವೆರಡನ್ನು ಮಿಶ್ರಣ ಮಾಡಿ. ಮತ್ತು ಈ ಮಿಶ್ರಣದಿಂದ ಸ್ಮಾರ್ಟ್‌ಫೋನ್ ಪರದೆಯನ್ನು ಒರೆಸಿ. ಅಂತೆಯೆ ಬೇಬಿ ಪೌಡರ್ ಮೂಲಕವೂ ಡಿಸ್‌ಪ್ಲೇ ಸ್ಕ್ರಾಚ್ ರಿಮೂವ್ ಮಾಡಬಹುದು ಎಂಬುದು ನಿಮಗೆ ಗೊತ್ತೆ. ಒಂದು ಪಾತ್ರೆಗೆ ನೀರು ಮತ್ತು ಬೇಬಿ ಪೌಡರ್ ಬೆರೆಸಿಕೊಳ್ಳಿ. ಇವೆರಡನ್ನು ನುಣ್ಣನೆ ಪೇಸ್ಟ್ ಮಾಡಿ ಮತ್ತು ಹತ್ತಿ ಬಟ್ಟೆ ಬಳಸಿ ಸ್ಕ್ರಾಚ್ ಆದ ಜಾಗದಲ್ಲಿ ಹಚ್ಚಿರಿ.

ಸುಲಭದ ವಿಧಾನ ಎಂದರೆ ಸ್ವಲ್ಪ ಒದ್ದೆಯಾದ ಬಟ್ಟೆ ಅಥವಾ ಹತ್ತಿಯಿಂದ ಸ್ವಚ್ಛಗೊಳಿಸುವುದು. ಅಗತ್ಯವಿದ್ದರೆ, ಮೃದುವಾದ ನೀರಿನಿಂದ ಬಟ್ಟೆಯ ತುಂಡನ್ನು ತೇವಗೊಳಿಸಿ. ನೀವು ಬಟ್ಟೆಯ ಮೇಲೆ ನೀರು ಹಾಕಬೇಕು, ಫೋನ್ ಮೇಲೆ ಅಲ್ಲ ಎಂಬುದನ್ನು ತಿಳಿದುಕೊಳ್ಳಿ. ಇದರ ನಂತರ, ಒದ್ದೆಯಾದ ಭಾಗದಿಂದ ಪರದೆಯನ್ನು ಒರೆಸಿ ಮತ್ತು ನಂತರ ತಕ್ಷಣವೇ ಕ್ಲೀನ್ ಸೈಡ್ನೊಂದಿಗೆ ಒರೆಸಿ.

ಪೆಟ್ರೋಲಿಯಂ ಜೆಲ್ಲಿಯ ಸಹಾಯವನ್ನು ತೆಗೆದುಕೊಳ್ಳಿ: ಹೆಚ್ಚಿನ ಮನೆಗಳಲ್ಲಿ (ವ್ಯಾಸಲಿನ್ ಪೆಟ್ರೋಲಿಯಂ ಜೆಲ್ಲಿ) ಇರುತ್ತದೆ. ಅದರ ಸಹಾಯದಿಂದ ನೀವು ನಿಮ್ಮ ಫೋನ್ ಪರದೆಯನ್ನು ಫ್ಲಾಶ್ ಮಾಡಬಹುದು. ಫೋನ್ ಪರದೆಯ ಮೇಲೆ ವ್ಯಾಸಲೀನ್ ಹಚ್ಚಿ ಸ್ವಚ್ಛವಾದ ಬಟ್ಟೆಯಿಂದ ಒರೆಸಿದರೂ ಪರದೆಯು ಹೊಳೆಯಲು ಪ್ರಾರಂಭಿಸುತ್ತದೆ ಮತ್ತು ಗೀರುಗಳು ಮಾಯವಾಗುತ್ತವೆ.

ಟೂತ್‌ಪೇಸ್ಟ್ ಕೂಡ ಉತ್ತಮ ಆಯ್ಕೆಯಾಗಿದೆ: ಹಲ್ಲುಗಳ ಜೊತೆಗೆ, ಟೂತ್‌ಪೇಸ್ಟ್ ಅನ್ನು ಫೋನ್ ಪರದೆಯನ್ನು ಸ್ವಚ್ಛಗೊಳಿಸಲು ಸಹ ಬಳಸಲಾಗುತ್ತದೆ, ನೀವು ಹತ್ತಿಯ ಮೇಲೆ ಟೂತ್‌ಪೇಸ್ಟ್ ಅನ್ನು ಅನ್ವಯಿಸಬೇಕು ಮತ್ತು ಅದನ್ನು ಡಿಸ್ಪ್ಲೇಯ ಮೇಲೆ ರಬ್ ಮಾಡಿ. ಈ ಟ್ರಿಕ್ ಪರದೆಯ ಮೇಲಿನ ಎಲ್ಲಾ ರೀತಿಯ ಗೀರುಗಳನ್ನು ಮಾಯವಾಗಿಸುತ್ತದೆ. ಇದಕ್ಕಾಗಿ ನೀವು ಬಿಳಿ ಟೂತ್‌ಪೇಸ್ಟ್ ಅನ್ನು ಮಾತ್ರ ಅನ್ವಯಿಸಬೇಕು.



















