ಮಿರಿಮಿರಿ ಮಿಂಚುವ ಕರಿ ಬೆಕ್ಕು ಈ ದೇಶಗಳಲ್ಲಿ ಶುಭದ ಸಂಕೇತ! ಏನಿದರ ರಹಸ್ಯ, ತಿಳಿಯಿರಿ

ನಾನಾ ದೇಶಗಳಲ್ಲಿ ನಾನಾ ಜನರು ನಾನಾ ನಂಬಿಕೆಗಳನ್ನು ಹೊಂದಿದ್ದಾರೆ; ಅವುಗಳನ್ನು ಚಾಚೂತಪ್ಪದೆ ಆಚರಿಸುತ್ತಾರೆ, ಪೂಜಿಸುತ್ತಾರೆ. ಅನೇಕ ದೇಶಗಳಲ್ಲಿ ಕಪ್ಪು ಬೆಕ್ಕು ಕಾಣಿಸಿಕೊಂಡರೆ ಅದನ್ನು ಶುಭದ ಸಂಕೇತ ಎಂದು ಬಗೆಯುವುದುಂಟು, ಸಂತಾನೋತ್ಪತ್ತಿ ಗುಣಲಕ್ಷಣದ್ದು ಎಂದೂ ಪರಿಗಣಿಸುತ್ತಾರೆ, ಪ್ರೇಮ ಮತ್ತು ಸಮೃದ್ಧಿಯ ಸಂಕೇತ ಎಂದು ಅದಕ್ಕೆ ಮಣೆ ಹಾಕುತ್ತಾರೆ. ಅದೇ ನಮ್ಮ ಭಾರತದಲ್ಲಿ ಕರಿ ಬೆಕ್ಕು ಹಾಗಿರಲೀ ಯಾವುದೇ ಬಣ್ಣದ ಬೆಕ್ಕಾಗಲೀ ಪ್ರಯಾಣಿಸುವಾಗ ದಾರಿಗೆ ಅಡ್ಡ ಬಂದರೆ ಮುಗಿಯಿತು, ಹಾವು ತುಳಿದವರಂತೆ ಬೆಚ್ಚಿಬೀಳುತ್ತಾರೆ!

ಸಾಧು ಶ್ರೀನಾಥ್​
|

Updated on:Dec 07, 2021 | 7:03 AM

1. ಬ್ರಿಟನ್​  (Briton and Cat):
ಯುನೈಟೆಡ್​ ಕಿಂಗ್ಡಮ್​ನಲ್ಲಿ ಪ್ರಚಲಿತದಲ್ಲಿರುವ ಅಂಧ ವಿಶ್ವಾಸದ ಪ್ರಕಾರ ಮದುವೆಯ ದಿನ ಕಪ್ಪು ಬೆಕ್ಕನ್ನು ವಧುಗೆ ಕಾಣಿಕೆಯಾಗಿ ನೀಡುವುದು ಸೌಭಾಗ್ಯದಾಯಕ ಎಂದು ಪರಿಗಣಿಸುತ್ತಾರೆ.  ನವವಿವಾಹಿತರ ಮನೆಯಲ್ಲಿ ಒಂದು ಬೆಕ್ಕು ಇದ್ದರೆ ಅದು ಕೆಟ್ಟದ್ದನ್ನು ದೂರ ಮಾಡುತ್ತದೆ ಎಂಬ ನಂಬಿಕೆಯಿದೆ. ಕರಿ ಬೆಕ್ಕು ಅಂದರೆ ಬ್ರಿಟಿಷರಿಗೆ ಭಾಗ್ಯಶಾಲಿಯಂತೆ! ಅಲ್ಲಿಯ ಜನ ತಮ್ಮ ಮನೆಯಲ್ಲಿ ಅದನ್ನು ‘ಪುಸ್ಸಿ ಕ್ಯಾಟ್, ಪುಸ್ಸಿ ಕ್ಯಾಟ್!​ ವೇರ್​ ಹ್ಯಾಡ್​ ಯು ಬೀನ್‘ ಎಂದು ಪದ್ಯ ಕಟ್ಟಿ ಮುದ್ದುಮಾಡುವುದೂ ಉಂಟು (black cat as good omen).

these countries consider black cat as good omen or boon know why and how in kannada

1 / 6
2. ಜಪಾನ್​ (Japan and Cat): 
ಜಪಾನ್​ ದೇಶದಲ್ಲಿ ಕಪ್ಪು ಬಣ್ಣದ್ದೇ ಆಗಲಿ ಅಥವಾ ಅಚ್ಚ ಬಿಳುಪಿನ ಬೆಕ್ಕನ್ನೇ ಆಗಲೀ ಶುಭ ಎಂದು ಕಾಣುತ್ತಾರೆ. ಸಮೃದ್ಧಿ ಮತ್ತು ಸೌಭಾಗ್ಯವೆಂದು ಪರಿಗಣಿಸುತ್ತಾರೆ. ಕೆಟ್ಟದ್ದನ್ನು ದೂರ ಮಾಡಿಬಿಡುತ್ತದೆ ಎಂದು ಬಗೆಯುತ್ತಾರೆ. ಜಪಾನೀಯರ ಪ್ರಕಾರ ಅದು ಪ್ರೀತಿಯ ಪ್ರತೀಕ ಮತ್ತು ಸಂತಾನೋತ್ಪತ್ತಿಯ ಸಂಕೇತ.

these countries consider black cat as good omen or boon know why and how in kannada

2 / 6
3. ಫ್ರಾನ್ಸ್ (France and Cat):
ಫ್ರಾನ್ಸ್​ನಲ್ಲಿ ಆಚರಣೆಯಲ್ಲಿರುವ ಮೂಢನಂಬಿಕೆಯ ಪ್ರಕಾರ ಕಪ್ಪು ಬೆಕ್ಕಿಗೆ ಸರಿಯಾದ ರೀತಿಯಲ್ಲಿ ಉಣಬಡಿಸಿದ್ದೇ ಆದರೆ ಅದು ಸೌಭಾಗ್ಯವೆಂದು ಹೇಳುತ್ತಾರೆ.

3. ಫ್ರಾನ್ಸ್ (France and Cat): ಫ್ರಾನ್ಸ್​ನಲ್ಲಿ ಆಚರಣೆಯಲ್ಲಿರುವ ಮೂಢನಂಬಿಕೆಯ ಪ್ರಕಾರ ಕಪ್ಪು ಬೆಕ್ಕಿಗೆ ಸರಿಯಾದ ರೀತಿಯಲ್ಲಿ ಉಣಬಡಿಸಿದ್ದೇ ಆದರೆ ಅದು ಸೌಭಾಗ್ಯವೆಂದು ಹೇಳುತ್ತಾರೆ.

3 / 6
ಸ್ಕಾಟ್ಲೆಂಡ್ (Scotland and Cat):
ಸ್ಕಾಟ್ಲೆಂಡ್ ದೇಶದವರಲ್ಲಿ ಈ ಮೂಢನಂಬಿಕೆ ಇನ್ನೂ ಒಂದು ತೂಕ ಹೆಚ್ಚೇ ಇದೆ. ಸ್ಕಾಟ್ಲೆಂಡ್​ನಲ್ಲಿ ಯಾರದಾದರೂ ಮನೆಗಳಿಗೆ ಬೆಕ್ಕು ನುಗ್ಗಿದ್ದೇ ಆದರೆ, ಬಣ್ಣ ಯಾವುದೇ ಆದರೂ ಪರವಾಗಿಲ್ಲ, ಅದು ಶುಭದಾಯಕವಾಗಿದ್ದು, ಧನ ಮನೆಯೊಳಗೆ ಪ್ರವೇಶಿಸಲು ಸಿದ್ಧವಾಗಿಯೇ ಇದೆ ಎಂದು ‘ಅರ್ಥ’.

ಸ್ಕಾಟ್ಲೆಂಡ್ (Scotland and Cat): ಸ್ಕಾಟ್ಲೆಂಡ್ ದೇಶದವರಲ್ಲಿ ಈ ಮೂಢನಂಬಿಕೆ ಇನ್ನೂ ಒಂದು ತೂಕ ಹೆಚ್ಚೇ ಇದೆ. ಸ್ಕಾಟ್ಲೆಂಡ್​ನಲ್ಲಿ ಯಾರದಾದರೂ ಮನೆಗಳಿಗೆ ಬೆಕ್ಕು ನುಗ್ಗಿದ್ದೇ ಆದರೆ, ಬಣ್ಣ ಯಾವುದೇ ಆದರೂ ಪರವಾಗಿಲ್ಲ, ಅದು ಶುಭದಾಯಕವಾಗಿದ್ದು, ಧನ ಮನೆಯೊಳಗೆ ಪ್ರವೇಶಿಸಲು ಸಿದ್ಧವಾಗಿಯೇ ಇದೆ ಎಂದು ‘ಅರ್ಥ’.

4 / 6
ನಾರ್ವೆ (Norway and Cat):  ನಾರ್ವೆಯ ಪರಾಣ ಕತೆಗಳ ಪ್ರಕಾರ ಕರಿ ಬೆಕ್ಕುಗಳು ಪ್ರೀತಿಯ ಪ್ರತೀಕವಂತೆ. ಅದು ಸಂತಾನೋತ್ಪತ್ತಿಯ ಸಂಕೇತ ಎನ್ನುತ್ತಾರೆ. ಇದಕ್ಕೆ ಕಾರಣವೂ ಇಂಟರೆಸ್ಟಿಂಗ್ ಆಗಿದೆ. ಏನೆಂದರೆ ನಾರ್ವೆಯ ಪರಾಣ ಕತೆಗಳ ಲ್ಲಿ ಬರುವ ಫ್ರೀಜಾ (Freja) ಎಂಬ ಪ್ರೇಮದ ಅಧಿದೇವತೆಯ ರಥವನ್ನು ಎಳೆಯುವುದು ಇದೇ ಬೆಕ್ಕುಗಳು!

5 / 6
ಈಜಿಪ್ಟ್ (Egypt and Cat): 
ಅಪಾರ ನಂಬಿಕೆಗಳ ದೇಶವಾದ ಈಜಿಪ್ಟ್​ನಲ್ಲಿ ಬೆಕ್ಕುಗಳನ್ನು ಭಗವಂತನ ಸ್ವರೂಪ ಎಂದು ಪೂಜಿಸುತ್ತಾರೆ. ಸುಂದರ, ಸ್ನೇಹಮಯ ಮತ್ತು ಬುದ್ಧಿಮತ್ತೆಯ ಸಂಕೇತದ್ದೆಂದು ಹೇಳುತ್ತಾರೆ. ಅಕಸ್ಮಾತ್ ಮನೆಗಳಲ್ಲಿ ಕರಿ ಬೆಕ್ಕು ಸತ್ತು ಹೋದರೆ ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿಬಿಡುತ್ತದೆ.

ಈಜಿಪ್ಟ್ (Egypt and Cat): ಅಪಾರ ನಂಬಿಕೆಗಳ ದೇಶವಾದ ಈಜಿಪ್ಟ್​ನಲ್ಲಿ ಬೆಕ್ಕುಗಳನ್ನು ಭಗವಂತನ ಸ್ವರೂಪ ಎಂದು ಪೂಜಿಸುತ್ತಾರೆ. ಸುಂದರ, ಸ್ನೇಹಮಯ ಮತ್ತು ಬುದ್ಧಿಮತ್ತೆಯ ಸಂಕೇತದ್ದೆಂದು ಹೇಳುತ್ತಾರೆ. ಅಕಸ್ಮಾತ್ ಮನೆಗಳಲ್ಲಿ ಕರಿ ಬೆಕ್ಕು ಸತ್ತು ಹೋದರೆ ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿಬಿಡುತ್ತದೆ.

6 / 6

Published On - 7:00 am, Tue, 7 December 21

Follow us
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’