- TV9 Kannada Photo gallery Tourist Places: must visit the beautiful places of Mount Abu to enjoy the summer vacation ..!
Tourist Places: ಬೇಸಿಗೆ ರಜೆಯನ್ನು ಆನಂದಿಸಲು ಮೌಂಟ್ ಅಬುವಿನಂತಹ ಸುಂದರ ಸ್ಥಳಗಳಿಗೊಮ್ಮೆ ಭೇಟಿ ನೀಡಲೇಬೇಕು..!
Tourist Places: ಮೌಂಟ್ ಅಬು ರಾಜಸ್ಥಾನ ರಾಜ್ಯದ ಒಂದು ಸುಂದರವಾದ ಗಿರಿಧಾಮವಾಗಿದೆ. ಇದು ಪ್ರಾಚೀನ ದೇವಾಲಯಗಳು, ಧಾರ್ಮಿಕ ಸ್ಮಾರಕಗಳು, ಸರೋವರಗಳು ಮತ್ತು ಬೃಹತ್ ಕೋಟೆಗಳಿಗೆ ಹೆಸರುವಾಸಿಯಾಗಿದೆ.
Updated on:May 31, 2022 | 4:14 PM



ನಕ್ಕಿ ಸರೋವರ; ಈ ಸರೋವರವು ಬೆಟ್ಟಗಳಿಂದ ಆವೃತವಾಗಿದೆ. ಇಲ್ಲಿ ನೀವು ಬೋಟಿಂಗ್ ಮಾಡಿ ಆನಂದಿಸಬಹುದು. ಮಹಾರಾಜ ಜೈಪುರ ಅರಮನೆ ಮತ್ತು ರಘುನಾಥ ದೇವಾಲಯ ಇದರ ದಂಡೆಯಲ್ಲಿದೆ. ನೀವು ಇಲ್ಲಿ ಸುಂದರವಾದ ನೋಟಗಳನ್ನು ಆನಂದಿಸಬಹುದು.

ದಿಲ್ವಾರಾ ದೇವಾಲಯ; ಈ ದೇವಾಲಯವು ಮೌಂಟ್ ಅಬುವಿನಿಂದ ಸುಮಾರು 3 ಕಿಮೀ ದೂರದಲ್ಲಿದೆ. ಈ ದೇವಾಲಯವು ತುಂಬಾ ಸುಂದರವಾಗಿದೆ. ಈ ದೇವಾಲಯವು ಹಚ್ಚ ಹಸಿರಿನಿಂದ ಆವೃತವಾಗಿದೆ. ಈ ದೇವಾಲಯವು ಪ್ರವಾಸಿಗರಿಗೆ ಬಹಳ ಆಕರ್ಷಕವಾಗಿದೆ.

ಮೌಂಟ್ ಅಬು ಅತ್ಯಂತ ಸುಂದರವಾದ ಗಿರಿಧಾಮವಾಗಿದೆ. ಇಲ್ಲಿನ ವಾತಾವರಣ ತುಂಬಾ ಶಾಂತವಾಗಿದ್ದು, ಹಸಿರು ಬೆಟ್ಟಗಳಿಂದ ಆವೃತವಾಗಿದೆ. ಈ ಗಿರಿಧಾಮ ನಿಮ್ಮನ್ನು ಆಕರ್ಷಿಸುವುದರಲ್ಲಿ ಸಂದೇಹವಿಲ್ಲ. ಮೌಂಟ್ ಅಬುಗೆ ನೀವು ಭೇಟಿ ನೀಡಿದಾಗ ಈ ಸ್ಥಳಗಳಿಗೆ ಭೇಟಿ ನೀಡುವುದನ್ನು ಮರೆಯಬೇಡಿ.
Published On - 3:53 pm, Tue, 31 May 22

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್, ವೈಯಿಸ್ ಓವರ್, ಎಡಿಟಿಂಗ್ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.
Read More



