ದೇಹ ಮುಚ್ಚಲೇ ಇಲ್ಲ ಊರ್ಫಿ ಜಾವೇದ್ ಹಾಕಿದ ಬಟ್ಟೆ; ಟ್ರೋಲ್ ಆದ ನಟಿ
ಚಿತ್ರ-ವಿಚಿತ್ರ ಉಡುಗೆ ತೊಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು ಊರ್ಫಿ. ಅವರು ಕಸದ ಚೀಲದಲ್ಲಿ ಮಾಡಿಕೊಂಡ ಬಟ್ಟೆ ಎಲ್ಲರ ಗಮನ ಸೆಳೆದಿತ್ತು.
Updated on: Mar 24, 2022 | 6:06 PM

ಕಳೆದ ವರ್ಷ ಪ್ರಸಾರವಾಗಿದ್ದ ‘ಬಿಗ್ ಬಾಸ್ ಒಟಿಟಿ’ ಜನಪ್ರಿಯತೆ ಪಡೆದುಕೊಂಡಿತ್ತು. ಟಿವಿಯಲ್ಲಿ ಪ್ರಸಾರವಾಗದೆ ಕೇವಲ ಒಟಿಟಿಯಲ್ಲಿ ಮಾತ್ರ ಈ ಶೋ ಪ್ರಸಾರವಾಗಿದ್ದರಿಂದ ಸೆನ್ಸಾರ್ ಸಮಸ್ಯೆ ಇರಲಿಲ್ಲ. ಈ ಕಾರಣಕ್ಕೆ ಈ ರಿಯಾಲಿಟಿ ಶೋ ಒಳ್ಳೆಯ ಹೈಪ್ ಪಡೆದುಕೊಂಡಿತ್ತು.

ಈ ರಿಯಾಲಿಟಿ ಶೋಗೆ ಬಂದಿದ್ದ ಊರ್ಫಿ ಜಾವೇದ್ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡರು.

ಚಿತ್ರ-ವಿಚಿತ್ರ ಉಡುಗೆ ತೊಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅವರು ಕಸದ ಚೀಲದಲ್ಲಿ ಮಾಡಿಕೊಂಡ ಬಟ್ಟೆ ಎಲ್ಲರ ಗಮನ ಸೆಳೆದಿತ್ತು. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರವೂ ಅವರು ಚಿತ್ರ ವಿಚಿತ್ರ ಬಟ್ಟೆ ತೊಡುವುದನ್ನು ಮುಂದುವರಿಸಿದ್ದಾರೆ.

ಈ ಬಾರಿ ಹಸಿರು ಬಣ್ಣದ ಬಟ್ಟೆಯನ್ನು ಧರಿಸಿದ್ದಾರೆ. ಆ ಬಟ್ಟೆ ಅವರ ದೆಹವನ್ನು ಪೂರ್ತಿಯಾಗಿ ಮುಚ್ಚುತ್ತಿಲ್ಲ. ಕ್ಯಾಮೆರಾ ಎದುರು ಅವರು ಸ್ಟೈಲಿಶ್ ಆಗಿ ಪೋಸ್ ನೀಡಿದ್ದಾರೆ.

‘ಊರ್ಫಿ ಅವರೇ ನಿಮಗೆ ಹಣವಿಲ್ಲ ಎಂದರೆ ಹೇಳಿ. ದಯವಿಟ್ಟು ನಾವು ಹಣ ಕೊಡುತ್ತೇವೆ. ಒಂದೊಳ್ಳೆಯ ಶರ್ಟ್ ತೆಗೆದುಕೊಳ್ಳಿ’ ಎಂದು ಕೋರಿದ್ದಾರೆ.

ಭಿನ್ನ ಉಡುಗೆಯಲ್ಲಿ ಊರ್ಫಿ

TV9 Kannada
Read More




