- Kannada News Photo gallery Urvashi Rautela and Tamannah Bhatia attend 75th Cannes film festival red carpet
ಕಾನ್ ಚಿತ್ರೋತ್ಸವದಲ್ಲಿ ಮಿಂಚಿದ ತಮನ್ನಾ, ಊರ್ವಶಿ ರೌಟೇಲಾ; ಇಲ್ಲಿವೆ ಕಲರ್ಫುಲ್ ಫೋಟೋಗಳು
75ನೇ ಕಾನ್ ಚಿತ್ರೋತ್ಸವ ಆರಂಭ ಆಗಿದೆ. ಈ ಬಾರಿ ತಮನ್ನಾ ಭಾಟಿಯಾ, ಊರ್ವಶಿ ರೌಟೇಲಾ ಸೇರಿ ಭಾರತದ ಅನೇಕ ನಟಿಯರು ಇದರಲ್ಲಿ ಭಾಗಿ ಆಗಿದ್ದಾರೆ.
Updated on: May 18, 2022 | 12:14 PM

Urvashi Rautela and Tamannah Bhatia attend 75th Cannes film festival red carpet

Urvashi Rautela and Tamannah Bhatia attend 75th Cannes film festival red carpet

ವಿಶೇಷವಾಗಿ ವಿನ್ಯಾಸಗೊಂಡ ಗೌನ್ ಧರಿಸಿ ತಮ್ಮನಾ ಭಾಟಿಯಾ ಅವರು ಪೋಸ್ ನೀಡಿದ್ದಾರೆ. ಅವರ ಈ ಕಾಸ್ಟ್ಯೂಮ್ ಕಂಡು ಅಭಿಮಾನಿಗಳು ವಾವ್ ಎಂದಿದ್ದಾರೆ. ನೆರೆದಿದ್ದ ನೂರಾರು ಕ್ಯಾಮೆರಾಗಳು ತಮನ್ನಾ ಆವರ ಚೆಲುವನ್ನು ಸೆರೆ ಹಿಡಿದಿವೆ.

ನಟಿ ಊರ್ವಶಿ ರೌಟೇಲಾ ಅವರು ಹಿಂದಿ ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ‘ಮಿಸ್ಟರ್ ಐರಾವತ’ ಸಿನಿಮಾದಲ್ಲಿ ಅಭಿನಯಿಸಿ ಕನ್ನಡಿಗರಿಗೆ ಪರಿಚಿತರಾದ ಅವರು ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.

ಶ್ವೇತ ವರ್ಣದ ಗೌನ್ ಧರಿಸಿ ಊರ್ವಶಿ ರೌಟೇಲಾ ಅವರು ಕಾಣಿಸಿಕೊಂಡಿದ್ದಾರೆ. ಅನೇಕ ಪ್ರತಿಷ್ಠಿತ ಕಂಪನಿಗಳಿಗೆ ಅವರು ರಾಯಭಾರಿ ಕೂಡ ಹೌದು. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಊರ್ವಶಿ ರೌಟೇಲಾ ಫೋಟೋಗಳು ವೈರಲ್ ಆಗಿವೆ.




