ಮುಂದಿನ ದಿನದಲ್ಲಿ ಓರ್ವ ಐಪಿಎಸ್ ಅಧಿಕಾರಿ ಅರೆಸ್ಟ್: ಹೊಸ ಬಾಂಬ್ ಸಿಡಿಸಿದ ಯತ್ನಾಳ್

ಲೋಕಸಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಇದರ ಮಧ್ಯೆ ಮತ್ತೆ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಮತ್ತೆ ಶುರುವಾಗಿದೆ. ಈ ಬಾರಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರ ಜಿಲ್ಲೆ ಶಿವಮೊಗ್ಗದಿಂದ ಆರಂಭವಾಗಿದ್ದು, ಈ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸ್ವಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಓರ್ವ ಐಪಿಎಸ್ ಅಧಿಕಾರಿ ಬಂಧನದ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.

ಮುಂದಿನ ದಿನದಲ್ಲಿ ಓರ್ವ ಐಪಿಎಸ್ ಅಧಿಕಾರಿ ಅರೆಸ್ಟ್: ಹೊಸ ಬಾಂಬ್ ಸಿಡಿಸಿದ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Feb 14, 2024 | 5:45 PM

ಶಿವಮೊಗ್ಗ, (ಫೆಬ್ರವರಿ 14): ನಮ್ಮ ಬಿಜೆಪಿ(BJP) ಪಕ್ಷದಲ್ಲಿ ಕೆಲವರು ಸಮಾಜದ ಹೆಸರಲ್ಲಿ ದೊಡ್ಡ ಸ್ಥಾನದಲ್ಲಿದ್ದಾರೆ. ಅಶೋಕನ ಕೆಳಗಡೆ ನಾನು ಉಪ ನಾಯಕ ಆಗಬೇಕಾ? ಕೆಲವು ವ್ಯಕ್ತಿಗಳ ಕೈಯಲ್ಲಿ ಈಗ ಪಕ್ಷ ಸೇರಿಕೊಂಡಿದೆ. ಬಲಿಪಶು ಮಾಡುವ ಕೆಲಸವನ್ನು ಕೆಲವರು ಮಾಡಿದರು. ಮ್ಯಾಲಿನವರು ಆಶೀರ್ವಾದ ಮಾಡಿದರೇ ರಾಜ್ಯದ ಇತಿಹಾಸವನ್ನು ಚೇಂಜ್ ಮಾಡುತ್ತೇನೆ ಎಂದು ಬಸಬಗೌಡ ಪಾಟೀಲ್​ ಯತ್ನಾಳ್(Basangouda Patil Yatnal)  ಹೇಳಿದ್ದಾರೆ. ಅಲ್ಲದೇ ಇದೇ ವೇಳೆ ಮುಂದಿನ ದಿನದಲ್ಲಿ ಐಪಿಎಸ್ ಅಧಿಕಾರಿಯೊಬ್ಬ ಅರೆಸ್ಟ್ ಆಗುತ್ತಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.  ಅರೆಸ್ಟ್​ ಆಗಲಿರುವ ಆ ಐಪಿಎಸ್​ ಅಧಿಕಾರಿ ಯಾರು? ಯಾವ ಪ್ರಕರಣ? ಎಂದು ​ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

.ಶಿವಮೊಗ್ಗದಲ್ಲಿಂದು ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಕಾರ್ಯಕ್ರಮದಲ್ಲಿ ಮಾತನಾಡಿದ ಯತ್ನಾಳ್, ಸ್ವಯಂ ಘೋಷಿಸಿತ ಲಿಂಗಾಯತ ನಾಯಕರೊಬ್ಬರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿಗೆ ಅಡ್ಡ ಹಾಕಿದರು. ಅವರು ಲಿಂಗಾಯಿತರೇ ಅಲ್ಲ. ರಾಜಕಾರಣದಲ್ಲಿ ನನ್ನ ತುಳಿಯುತ್ತಿದ್ದಾರೆ. ಸಾಮಾಜಿ ಜಾಲತಾದಲ್ಲಿ ಯಾರು ವಿರೋಧ ಪಕ್ಷ ನಾಯಕನಾಗಬೇಕು? ಯಾರು ರಾಜ್ಯಾಧ್ಯಕ್ಷರಾಗಬೇಕು ಅಂದ್ರು. ಆಗ ಎಲ್ಲರು ಯತ್ನಾಳ್ ಮಾಡಬೇಕು ಅಂದ್ರು. ಆದ್ರೆ ಕೆಲವರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ನನ್ನ ತಡೆದರು ಎಂದು ಸ್ವಪಕ್ಷದ ನಾಯಕರ ವಿರುದ್ಧ ಅದರಲ್ಲೂ ಪರೋಕಕ್ಷವಾಗಿ ಬಿಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮಜಾ ಮಾಡಿ ಮೋದಿ ಬಳಿ ಹೋಗಿ ಹಣ ಕೇಳುತ್ತಿದ್ದಾರೆ: ಶಿವಮೊಗ್ಗದಲ್ಲಿ ಸಿಎಂ ವಿರುದ್ಧ ಶಾಸಕ ಬಸನಗೌಡ ಯತ್ನಾಳ್ ವಾಗ್ದಾಳಿ

ನನ್ನ ಸೋಲಿಸಲು ಕೆಲವರು ವಿಜಯಪುರಕ್ಕೆ ಬಹಳ ಹಣ ಕಳಿಸಿದ್ರು

ಉತ್ತರ ಕನ್ನಡ ಹುಲಿಯದು ಏನು ನಡೆಯಲ್ಲ ಎಂದು ಕೆಲವರು ಬರೆಯುತ್ತಾರೆ. ಮರಿ ಹುಲಿ ಆ ಹುಲಿಯದ್ದೇ ನಡೆಯುತ್ತೆ ಎಂದು ಕೆಲ ಮಾಧ್ಯಮಗಳಲ್ಲಿ ಬರೆಯುತ್ತಾರೆ. ನನ್ನ ಮುಗಿಸಲು ಯತ್ನಿಸಿದವರು ಆಗ ಸೋತಿದ್ದರು. ಕೆಲವರು ನನ್ನ ಹೊರಗೆ ಹಾಕಲು ಯತ್ನಿಸಿದರು. ನಾನು ಮಂತ್ರಿ ಆಗುವುದಕ್ಕೆ, ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕ ಆಗುವುದಕ್ಕೆ ಸ್ವಾಮೀಜಿಯಿಂದ ಲಾಬಿ ಮಾಡಲ್ಲ. ನನ್ನ ಸೋಲಿಸಲು ಕೆಲವರು ವಿಜಯಪುರಕ್ಕೆ ಬಹಳ ಹಣ ಕಳಿಸಿದ್ರು. ಜನ ಅದಕ್ಕೆ ತಲೆ ಕಡೆಸಿಕೊಳ್ಳದೆ ಹಣ ಇಸ್ಕೊಂಡ್ರು ನನಗೆ ಮತ ಹಾಕಿದರು. ಎಲ್ಲಾ ಅರ್ಹತೆ ಇದ್ದರೂ ನನಗೆ ಪಕ್ಷದಲ್ಲಿ ಸ್ಥಾನಮಾನ ನೀಡಿಲ್ಲ. ನಮ್ಮದು ಏಕಲವ್ಯನಂತೆ ತ್ಯಾಗ ಮಾಡುವುದೇ ಆಗಿದೆ ಎಂದು ಸ್ವಪಕ್ಷದ ವಿರುದ್ಧ ಬೇಸರ ಹೊರಹಾಕಿದರು.

ದೆಹಲಿ ಭೇಟಿ ವೇಳೆ ಯಾವುದೇ ರಾಜಿ ಸಂಧಾನ ನಡೆದಿಲ್ಲ

ಹೋರಾಟಕ್ಕೆ ದುಡ್ಡು ಕೊಟ್ಟು ಕರೆಯುವ ಗಿರಾಕಿಗಳು ನಾವಲ್ಲ. ಇವತ್ತು ಇಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರತಿಭಟನೆ ಆಗಿದೆ. ಸಮಾಜದ ಭವಿಷ್ಯಕ್ಕಾಗಿ ಹೋರಾಟ ಹೊರತು ಯಾರನ್ನೋ ಮುಖ್ಯಮಂತ್ರಿ ಮಾಡಲು ಅಲ್ಲ. ನಾನು ಸಹ ನಾಯಕರ ಬಳಿ ಯಾವುದೇ ಸ್ಥಾನಮಾನ ಕೇಳಿಲ್ಲ. ನಮ್ಮ ಹಣೆಬರಹದಲ್ಲಿ ಇದ್ದರೆ ಸ್ಥಾನಮಾನ ಸಿಗುತ್ತದೆ. ದೆಹಲಿ ಭೇಟಿ ವೇಳೆ ಯಾವುದೇ ರಾಜಿ ಸಂಧಾನ ನಡೆದಿಲ್ಲ. ನಾಯಕರ ಜೊತೆ ಒಟ್ಟಿಗೆ ಕುಳಿತು ಟೀ ಕುಡಿದಿದ್ದೇವೆ ಅಷ್ಟೇ. ಹೈಕಮಾಂಡ್ ನಾಯಕರು ನನಗೆ ಯಾವುದೇ ಎಚ್ಚರಿಕೆ ನೀಡಿಲ್ಲ ಎಂದು ​ಸ್ಪಷ್ಟಪಡಿಸಿದರು.

ನಾವು ಒಂದು ಸಮಾಜದ ಪರ ಹೋರಾಟ ಮಾಡುತ್ತಿಲ್ಲ. ಎಲ್ಲಾ ಸಮಾಜದ ಧ್ವನಿ ಆಗಿ ಹೋರಾಟ ಮಾಡುತ್ತಿದ್ದೇವೆ. ವೀರೇಶೈವ,ಲಿಂಗಾಯತರು ಹಿಂದೂಗಳಲ್ಲ ಅಂತ ದಾವಣಗೆರೆಯಲ್ಲಿ ಕೆಲವರು ಹೇಳಿದರು. ಈ ಹೋರಾಟವನ್ನು ಹಾಳು ಮಾಡಬೇಕು ಅಂತ ಕೆಲವರು ಸಂಚು ಮಾಡಿದರು. ಹಣ ಕೊಡುತ್ತೇವೆ,ಚಲೋ‌ಗಾಡಿ ಕೊಡಿಸುತ್ತೇವೆ ಅಂತ ಕೆಲವು ಮಂತ್ರಿಗಳು ಸ್ವಾಮೀಜಿ ಹತ್ರ ಹೋಗ್ತಾರೆ ಎಂದು ವಾಗ್ದಾಳಿ ನಡೆಸಿದರು.

10 ಕೋಟಿ ರೂ. ಚೆಕ್ ಹಿಡಿದುಕೊಂಡು ಬಂದಿದ್ರು

ನಮ್ಮ ಸಮಾಜದ ಮಂತ್ರಿಯೇ ಒಬ್ಬ ಹತ್ತು ಕೋಟಿ ರೂ. ಚೆಕ್ ಹಿಡಿದುಕೊಂಡು ಬಂದಿದ್ರು. ಆಗ ಹತ್ತು ಕೋಟಿಗೆ ನನ್ನ ಸಮಾಜವನ್ನು ಮಾರಲ್ಲ ಎಂದು ಸ್ವಾಮೀಜಿ ಹೇಳಿದರು. ನಾಯಕತ್ವಕ್ಕಾಗಿ ನಮ್ಮ ಹೋರಾಟ ಅಲ್ಲ. ರಾಜಕೀಯ ಮೀಸಲಾತಿ ನಾವು ಕೇಳುತ್ತಿಲ್ಲ. ಬಡ ಮಕ್ಕಳಿಗೆ ನೇಮಕಾತಿ ಮತ್ತು ಶೈಕ್ಷಣಿಕ ಮೀಸಲಾತಿಗಾಗಿ ನಮ್ಮ ಹೋರಾಟ. ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ. ನಾವು ಯಾವುದೇ ಸಮಾಜಕ್ಕೆ ಅನ್ಯಾಯ ಮಾಡಲು ಈ ಹೋರಾಟ ಅಲ್ಲ ಎಂದರು.

ನಾನು ಬಂದ್ರೆ ಭಯೋತ್ಪಾದಕ ಬಂದಂಗೆ ಮಾಡುತ್ತಾರೆ. ಅಷ್ಟು ಪೊಲೀಸ್ ಭದ್ರತೆ ಕೊಡುತ್ತಾರೆ. ಕೆಲವೇ ದಿನಗಳಲ್ಲಿ ದಾವಣಗೆರೆಯಲ್ಲಿ ಹೋರಾಟ ಮಾಡುತ್ತೆವೆ. ಲೋಕಸಭಾ ಚುನಾವಣೆ ಅಷ್ಟರಲ್ಲಿ ನಮ್ಮ ಸಮಾಜಕ್ಕೆ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲವಾದರೆ ಲೋಕಸಭಾ ಚುನಾವಣೆಯಲ್ಲಿ ನಾವು ಪಾಠ ಕಳಿಸುತ್ತೇವೆ. ಎಲ್ಲರೂ ಎಲ್ಲಾ ಕಡೆಯಿಂದ ಪ್ರತಿಭಟನೆ ಪ್ರಾರಂಭ ಮಾಡಬೇಕು ಎಂದು ಕರೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ