ಸಿಬಿಐ ಕಸ್ಟಡಿಯಲ್ಲಿದ್ದಾಗಲೇ ಆಪ್ತನನ್ನು MLA ಮಾಡುವ ಪ್ಲ್ಯಾನ್: ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ಜನಾರ್ದನ ರೆಡ್ಡಿ
ಅಕ್ರಮ ಗಣಿಗಾರಿಕೆ ಕೇಸ್ ನಲ್ಲಿ ಸಿಬಿಐ ಕಸ್ಟಡಿಯಲ್ಲಿದ್ದಾಗಲೇ ತಮ್ಮ ಆಪ್ತನನ್ನ ಶಾಸಕನನ್ನಾಗಿ ಮಾಡಲು ಜನಾರ್ದನ ರೆಡ್ಡಿ ಪ್ಲ್ಯಾನ್ ಮಾಡಿದ್ದರಂತೆ
ಬಳ್ಳಾರಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮಾಜಿ ಸಚಿವ ಗಾಲಿ ಜನಾದರ್ನ ರೆಡ್ಡಿ ಸುದ್ದಿಯಲ್ಲಿದ್ದಾರೆ. ಮೊನ್ನೇ ಅಷ್ಟೇ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಕಣಕ್ಕಿಳಿಯುವ ಬಗ್ಗೆ ಸುಳಿವು ನೀಡಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದರು. ಇದೀಗ ಸಿಬಿಐ ಕಸ್ಟಡಿಯಲ್ಲಿದ್ದಾಗಲೇ ಆಪ್ತನನ್ನು MLA ಮಾಡಲು ಪ್ಲ್ಯಾನ್ ಮಾಡಿದ್ದ ಬಗ್ಗೆ ರೆಡ್ಡಿಗಾರು ಈ ಹಿಂದಿನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಹೌದು…ಅಕ್ರಮ ಗಣಿಗಾರಿಕೆ ಕೇಸ್ ನಲ್ಲಿ ಸಿಬಿಐ ಕಸ್ಟಡಿಯಲ್ಲಿದ್ದಾಗಲೇ ತಮ್ಮ ಆಪ್ತನನ್ನ ಶಾಸಕನನ್ನಾಗಿ ಮಾಡಲು ಜನಾರ್ದನ ರೆಡ್ಡಿ ಪ್ಲ್ಯಾನ್ ಮಾಡಿದ್ದರಂತೆ. ಮೆಹಪೂಜ್ ಅಲಿಖಾನ್ನ್ನು ಬೆಂಗಳೂರಿನ ಹೆಬ್ಬಾಳ ಕ್ಷೇತ್ರದ ಶಾಸಕನನ್ನಾಗಿ ಮಾಡಲು ಪ್ಲ್ಯಾನ್ ಮಾಡಿದ್ರಂತೆ. ಈ ಬಗ್ಗೆ ಸ್ವತಃ ರೆಡ್ಡಿ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿಯೇ ಮಾಹಿತಿ ಹಂಚಿಕೊಂಡಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡೋಕೆ ಸಿದ್ಧರಾದ ಜನಾರ್ದನ ರೆಡ್ಡಿ: ರೆಡ್ಡಿಗಾರು ಮುಂದೆ 2 ಕ್ಷೇತ್ರಗಳು..!
ಬಳ್ಳಾರಿಯಲ್ಲಿ ಅಲಿಖಾನ್ ಆಯೋಜಿಸಿದ್ದ ಕ್ರಿಕೇಟ್ ಟೂರ್ನಿ ಉದ್ಘಾಟಿಸಿ ಮಾತನಾಡಿದ ಜನಾರ್ದನ ರೆಡ್ಡಿ, ನಾನು ಸಿಬಿಐ ಕೇಸ್ ನಲ್ಲಿ ಒಳಗಡೆ ಇರುವ ಸಂದರ್ಭದಲ್ಲಿ ಅಲಿಖಾನ್ ನ ಶಾಸಕನನ್ನಾಗಿ ಮಾಡುವ ಆಸೆ ಇತ್ತು. ಬೆಂಗಳೂರಿನ ಹೆಬ್ಬಾಳ ಕ್ಷೇತ್ರದಲ್ಲಿ ಶಾಸಕನನ್ನಾ ಮಾಡುವ ಆಸೆ ಇತ್ತು. ಹೆಬ್ಬಾಳದಲ್ಲಿ ಎಂಎಲ್ಎ ಮಾಡೋದಕ್ಕೆ ಏನೆಲ್ಲ ವ್ಯವಸ್ಥೆ ಆಗಬೇಕಿತ್ತೋ ಅದೆಲ್ಲಾ ಆಗಿತ್ತು. ಅದಕ್ಕೆ ಬೇಕಾದ ಕೆಲಸ ಕೂಡಾ ಆಗಿತ್ತು. ಆದ್ರೆ, ದುರಾದೃಷ್ಟವಶಾತ್ ಎಲೆಕ್ಷನ್ ಸಂಬಂಧ ನಮ್ಮನ್ನ ಹೆಚ್ಚಾಗಿ ಹೊರಗಡೆ ಕರೆದುಕೊಂಡು ಬರಬಾರದು ಅಂತಾ ಸ್ಟಾಪ್ ಮಾಡಿದ್ರು. ಹೀಗಾಗಿ ನಮ್ಮ ಯೋಜನೆ ವಿಫಲವಾಯ್ತು. ಇಲ್ಲದಿದ್ರೆ, ಬೆಂಗಳೂರು ನಗರದಲ್ಲೇ ಒಂದು ರೆಕಾರ್ಡ್ ಆಗ್ತಾ ಇತ್ತು, ಅಲಿಖಾನ್ ಎಂಎಲ್ ಎ ಆಗ್ತಿದ್ದ ಎಂದು ಹೇಳಿದರು.
ಜನಾರ್ದನ ರೆಡ್ಡಿ ಆಪ್ತರಾಗಿರುವ ಮೆಹಪೂಜ್ ಅಲಿಖಾನ್ ಅವರು ಹೆಸರು ಸಹ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿತ್ತು.