ರಾಹುಲ್ ಗಾಂಧಿ ನೇತೃತ್ವದಲ್ಲಿ ಚುನಾವಣೆಗೆ ಹೋದ್ರೆ ಕಾಂಗ್ರೆಸ್ ಸಿಂಗಲ್ ಡಿಜಿಟ್​ಗೆ ಬರುತ್ತೆ: ಸಿಟಿ ರವಿ ವ್ಯಂಗ್ಯ

ರಾಹುಲ್ ಗಾಂಧಿ ನೇತೃತ್ವದಲ್ಲಿ ಚುನಾವಣೆಗೆ ಹೋದ್ರೆ ಕಾಂಗ್ರೆಸ್ ಸಿಂಗಲ್ ಡಿಜಿಟ್​ಗೆ ಬರುತ್ತೆ: ಸಿಟಿ ರವಿ ವ್ಯಂಗ್ಯ
ಸಿಟಿ ರವಿ

ಮುಂಬರುವ ಮೂರು ತಿಂಗಳ ಅವದಿಯಲ್ಲಿ ಪಕ್ಷ ಸಂಘಟನೆಯನ್ನ ಮಾಡಬೇಕಿದೆ. 11 ಜನ ಎಂಎಲ್​ಸಿ, ಓರ್ವ ಶಾಸಕರಿಗೆ ಸತ್ಕಾರ ಮಾಡಲಾಗಿದೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.

TV9kannada Web Team

| Edited By: ganapathi bhat

Dec 29, 2021 | 6:07 PM


ಹುಬ್ಬಳ್ಳಿ: ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಎಂಎಲ್​ಸಿ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂಬರುವ ಮೂರು ತಿಂಗಳ ಅವಧಿಯಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು. ಕಾಮನ್ ಮ್ಯಾನ್ ಆಗಿ ಕೆಲಸ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಳಿದ್ದಾರೆ. ಕರ್ನಾಟಕ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​​ ಸಿಂಗ್ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಬಳಿಕ ಮಹೇಶ ಟೆಂಗಿನಕಾಯಿ ಹೇಳಿಕೆ ನೀಡಿದ್ದಾರೆ. 2022ರ ಮಾರ್ಚ್​ 28, 29 ರಂದು ಬಿಜೆಪಿ ವಿಜಯನಗರ ಜಿಲ್ಲೆಯಲ್ಲಿ ಮುಂದಿನ ಕಾರ್ಯಕಾರಿಣಿಗೆ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಕಾರ್ಯಕಾರಣಿ ಸಭೆ ಮಾಡಿದಕ್ಕೆ‌ ಧನ್ಯವಾದಗಳನ್ನ ಹೇಳುತ್ತೆನೆ. ಹೊಸ ದಿಕ್ಸೂಚಿ ಕೊಡಲು ಈ ಸಭೆ ನಡೆದಿದೆ. ನಿನ್ನೆ ಮಧ್ಯಾಹ್ನ ಆರಂಭವಾದ ಕಾರ್ಯಕಾರಣಿ ಸಭೆಯಲ್ಲಿ ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ಮಾಡಲಾಗಿದೆ. ಮುಂಬರುವ ಮೂರು ತಿಂಗಳ ಅವದಿಯಲ್ಲಿ ಪಕ್ಷ ಸಂಘಟನೆಯನ್ನ ಮಾಡಬೇಕಿದೆ. 11 ಜನ ಎಂಎಲ್​ಸಿ, ಓರ್ವ ಶಾಸಕರಿಗೆ ಸತ್ಕಾರ ಮಾಡಲಾಗಿದೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.

ಮುಂದಿನ ಕಾರ್ಯಕಾರಣಿ ಸಭೆ ಮಾರ್ಚ 28, 29 ರಂದು ವಿಜಯ ನಗರ ಜಿಲ್ಲೆಯಲ್ಲಿ ಮಾಡಲಾಗುವುದು. 150 ಪ್ಲಸ್ ಘೋಷವ್ಯಾಕ್ಯದಿಂದ ನಮ್ಮ ಪಕ್ಷ ಕೆಲಸ ಮಾಡುತ್ತೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವಿಸ್ತಾರಕರನ್ನ ನೇಮಕ ಮಾಡಲಾಗುತ್ತೆ. ಈ ಕಾರ್ಯಕಾರಣಿ ಸಭೆಯಲ್ಲಿ ಒಳ್ಳೆಯ ರಿಸ್ಪಾನ್ಸ್ ಸಿಕ್ಕಿದೆ. ಈ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ ಎಲ್ಲರಿಗೂ ಧನ್ಯವಾದ ಎಂದು ಅವರು ತಿಳಿಸಿದ್ದಾರೆ.

ಸಿಎಂ ಕುರ್ಚಿಗೆ ಕಾಂಗ್ರೆಸ್ ನಾಯಕರು ಟವೆಲ್​ ಹಾಕುತ್ತಿದ್ದಾರೆ: ಸಿ.ಟಿ ರವಿ ವ್ಯಂಗ್ಯ
ಕಾರ್ಯಕಾರಣಿಯಲ್ಲಿ ವಿಷಯಾಧಾರಿತ ಚರ್ಚೆ ನಡೆದಿದೆ. ಮತ್ತೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತೆ. ಕಾಂಗ್ರೆಸ್ ತಿರುಕನ ಕನಸು ಕಾಣುತ್ತಿದೆ. ಹಿಂದುತ್ವವಾದಿಗಳನ್ನ ಆತಂಕವಾದಿಗಳು ಎಂದು ಬಿಂಬಿಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಯ ತಪ್ಪು ನಿರ್ಣಯಗಳಿಂದ 44 ಸ್ಥಾನಳಿಗೆ ಬಂದು ನಿಂತಿದ್ದಾರೆ. ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಚುನಾವಣೆಗೆ ಹೋದ್ರೆ ಸಿಂಗಲ್ ಡಿಜಿಟ್ ಬರುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​ ಅಧಿಕಾರಕ್ಕೆ ಬರುವ ಬಗ್ಗೆ ತಿರುಕನ ಕನಸು ಕಾಣುತ್ತಿದೆ. ಸಿಎಂ ಕುರ್ಚಿಗೆ ಕಾಂಗ್ರೆಸ್ ನಾಯಕರು ಟವೆಲ್​ ಹಾಕುತ್ತಿದ್ದಾರೆ. ಅವರು ಹಾಕುವ ಟವೆಲ್ ಮುಖ ಒರೆಸಿಕೊಳ್ಳಲು ಬರುತ್ತದೆ. ಅಧಿಕಾರದಲ್ಲಿದ್ದಾಗ ಯಾಕೆ ಮೇಕೆದಾಟು ಯೋಜನೆ ಮಾಡಲಿಲ್ಲ. ಹಿಂದೂಗಳು ದೇಶಭಕ್ತರೇ ಹೊರತು ದೇಶ ವಿರೋಧಿಗಳಲ್ಲ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಎಲ್ಲದಕ್ಕೂ ಬಂದ್‌ ಅಂತಿಮ ನಿರ್ಧಾರವಲ್ಲ; ಡಿಸೆಂಬರ್ 31ರ ಬಂದ್ ಕೈಬಿಡುವಂತೆ ಬಸವರಾಜ ಬೊಮ್ಮಾಯಿ ಮನವಿ

ಇದನ್ನೂ ಓದಿ: ಬಿಜೆಪಿ ರಾಜ್ಯ ಕಾರ್ಯಕಾರಣಿಗೆ ಗೈರಾಗಿ ದೆಹಲಿಗೆ ಹಾರಿದ ರಮೇಶ್ ಜಾರಕಿಹೊಳಿ; ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡದ ಬೊಮ್ಮಾಯಿ

Follow us on

Related Stories

Most Read Stories

Click on your DTH Provider to Add TV9 Kannada