AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

17 ಸಾವಿರ ಕೋಟಿ ರೂ ಅನುದಾನ ದುರ್ಬಳಕೆ: ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬೃಹತ್ ಹಗರಣ ಆರೋಪ

ಬಿಬಿಎಂಪಿ ಮಾಜಿ ನಾಯಕ ಎನ್​ಆರ್​ ರಮೇಶ್ ಕರ್ನಾಟಕ ಸರ್ಕಾರದ ವಿರುದ್ಧ 17 ಸಾವಿರ ಕೋಟಿ ರೂ ಅಮೃತ್ ಯೋಜನೆಯ ಅನುದಾನ ದುರ್ಬಳಕೆಯ ಬಗ್ಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ. 7281 ಪುಟಗಳ ದಾಖಲೆಗಳೊಂದಿಗೆ ಸಲ್ಲಿಸಲಾದ ಈ ದೂರಿನಲ್ಲಿ ಹಲವು ಸಚಿವರು ಮತ್ತು ಅಧಿಕಾರಿಗಳ ಹೆಸರು ಉಲ್ಲೇಖಿಸಿದ್ದಾರೆ. ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.

17 ಸಾವಿರ ಕೋಟಿ ರೂ ಅನುದಾನ ದುರ್ಬಳಕೆ: ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬೃಹತ್ ಹಗರಣ ಆರೋಪ
ವಿಧಾನಸೌಧ
Follow us
ಗಂಗಾಧರ​ ಬ. ಸಾಬೋಜಿ
|

Updated on: Apr 09, 2025 | 1:52 PM

ಬೆಂಗಳೂರು, ಏಪ್ರಿಲ್​ 09: ರಾಜ್ಯ ರಾಜಕೀಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಸೇರಿದಂತೆ ದರ ಏರಿಕೆಗೆ ಪ್ರತಿಭಟನೆಗಳು ನಡೆಯುತ್ತಿವೆ. ಹೀಗಿರುವಾಗಲೇ ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಬೃಹತ್ ಹಗರಣದ ಆರೋಪ ಕೇಳಿಬಂದಿದೆ. ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್​ಆರ್​ ರಮೇಶ್ (bjp leader nr ramesh), ಕೇಂದ್ರ ಸರ್ಕಾರದ ಅಮೃತ್ ಯೋಜನೆಯ 17 ಸಾವಿರ ಕೋಟಿ ರೂ. ಅನುದಾನ ದುರ್ಬಳಕೆ (Misappropriation of grants) ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದು, ಹಗರಣದ ಸಂಬಂಧ ಲೋಕಾಯುಕ್ತ ಅಪರ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪೌರಾಡಳಿತ ಇಲಾಖೆ ಕೇಂದ್ರ ಸರ್ಕಾರದ ಅಮೃತ್ ಯೋಜನೆಯ ಅನುಷ್ಠಾನ ಹೊಣೆ ಹೊತ್ತಿದೆ. ಆದರೆ ಇದೇ ಯೋಜನೆಯ 17 ಸಾವಿರ ಕೋಟಿ ರೂ. ಅನುದಾನ ದುರ್ಬಳಕೆ ಮಾಡಲಾಗಿದೆ ಎಂದು ಎನ್​ಆರ್ ರಮೇಶ್​ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ: 500 ಕೋಟಿ ಕಿಕ್‌ಬ್ಯಾಕ್ ಆರೋಪ, ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಅರ್ಜಿ

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಂ ಖಾನ್, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಶಾಸಕ ವಿನಯ ಕುಲಕರ್ಣಿ, ಪೌರಾಡಳಿತ ನಿರ್ದೇಶಕ ಐಎಎಸ್ ಅಧಿಕಾರಿ ಪ್ರಭುಲಿಂಗ ಕವಲಕಟ್ಟಿ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಖ್ಯ ಅಭಿಯಂತರ ವಿಎಲ್ ಚಂದ್ರಪ್ಪ ಮತ್ತು ಟಿಎನ್ ಮುದ್ದು ರಾಜಣ್ಣ ಸೇರಿ ಹಲವು ಅಧಿಕಾರಿಗಳ ವಿರುದ್ಧ 7,281 ಪುಟಗಳ ದಾಖಲೆ ಸಹಿತ ಲೋಕಾಯುಕ್ತಗೆ ದೂರು ನೀಡಿದ್ದು, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.

ಎನ್​ಆರ್ ರಮೇಶ್ ಅವರ ಆರೋಪವೇನು?

  • ದೇಶದ ಮಹಾನಗರಗಳನ್ನು ಹೊರತುಪಡಿಸಿ, ಇನ್ನುಳಿದ ನಗರಸಭೆ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಒಳ ಚರಂಡಿ ಮತ್ತು ಕೊಳಚೆ ನಿರ್ವಹಣೆ, ಬೃಹತ್ ನೀರುಗಾಲುವೆಗಳ ನಿರ್ಮಾಣ, ಮರು ಜೋಡಣೆ ಮತ್ತು ಪುನಶ್ಚೇತನ ಕಾರ್ಯಗಳು ಹಾಗೂ ಹಸಿರು ವಲಯಗಳು ಮತ್ತು ಉದ್ಯಾನವನಗಳ ನಿರ್ಮಾಣ ಅಲ್ಲದೇ ನಗರ ಸಾರಿಗೆಗೆ ಸುಸಜ್ಜಿತ ಮಾರ್ಗಗಳ ನಿರ್ಮಾಣಗಳಂತಹ ಕಾರ್ಯಗಳನ್ನು ಮಾಡುವ ಮೂಲಕ ಆ ಭಾಗಗಳ ನಾಗರಿಕರಿಗೆ ಅವಶ್ಯಕತೆ ಇರುವಂತಹ ಗುಣಮಟ್ಟದ ಜೀವನವನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಅಮೃತ್ ಯೋಜನೆಯನ್ನು 25/06/2015 ರಂದು ಪ್ರಾರಂಭಿಸಿದೆ.
  • ದೇಶದ 500 ಕ್ಕೂ ಹೆಚ್ಚು ನಗರಸಭೆ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ ಈ AMRUT ಯೋಜನೆಯ ಅನುಷ್ಠಾನಕ್ಕೆಂದು ಪ್ರತೀ ವರ್ಷ ಸರಾಸರಿ ಒಂದು ಲಕ್ಷ ಕೋಟಿ ರೂಪಾಯಿಗಳ ಅನುದಾನವನ್ನು ಕೇಂದ್ರದ “ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ”ದ ಮೂಲಕ ಬಿಡುಗಡೆ ಮಾಡುತ್ತಿದೆ.
  • AMRUT ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯದ 27 ನಗರಸಭೆ, ಪುರಸಭೆಗಳನ್ನು ಆಯ್ಕೆ ಮಾಡಿದೆ.
  • ರಾಜ್ಯದಲ್ಲಿ AMRUT ಯೋಜನೆಯನ್ನು ಅನುಷ್ಠಾನಗೊಳಿಸುವ ಹೊಣೆಯನ್ನು “ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ” ಮತ್ತು “ಪೌರಾಡಳಿತ ಇಲಾಖೆ”ಗಳು ಹೊತ್ತಿವೆ.
  • ಕರ್ನಾಟಕ ರಾಜ್ಯದಲ್ಲಿ ಆಯ್ದ 27 ನಗರಸಭೆ, ಪುರಸಭೆಗಳ ವ್ಯಾಪ್ತಿಯಲ್ಲಿ AMRUT ಯೋಜನೆಯ ಅನುಷ್ಠಾನಕ್ಕೆಂದು ಕೇಂದ್ರ ಸರ್ಕಾರವು 2023-24 ಮತ್ತು 2024-25 ರ ಸಾಲುಗಳಲ್ಲಿ ಒಟ್ಟು 16,989.66 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ.

ಇದನ್ನೂ ಓದಿ: Bengaluru Kukke Subrahmanya Train: ಬೆಂಗಳೂರು ಕುಕ್ಕೆ ಸುಬ್ರಹ್ಮಣ್ಯ ಮಧ್ಯೆ ಹೊಸ ರೈಲು: ಸಚಿವ ಸೋಮಣ್ಣ ಘೋಷಣೆ

  • 2023-24 ಮತ್ತು 2024-25 ರ ಸಾಲುಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಬಿಡುಗಡೆಯಾಗಿರುವ AMRUT ಯೋಜನೆಯ 16,989.66 ಕೋಟಿ ರೂ ಅನುದಾನಗಳ ಪೈಕಿ ಶೇ. 75% ರಷ್ಟು ಅನುದಾನ ಇಲಾಖೆಗೆ ಬಿಡುಗಡೆಯಾಗಿದ್ದು, ಇನ್ನುಳಿದ ಶೇ. 25% ರಷ್ಟು ಅನುದಾನ DMA ಇಲಾಖೆಗೆ ಬಿಡುಗಡೆಯಾಗಿದೆ.
  • 2024-25 ರ ಸಾಲಿನಲ್ಲಿ ಕರ್ನಾಟಕ ರಾಜ್ಯಕ್ಕೆ ಬಿಡುಗಡೆ ಆಗಿರುವ 8,989.66 ಕೋಟಿ ರೂ ಪೈಕಿ, ಈಗಾಗಲೇ ಒಟ್ಟು 5,799.98 ಕೋಟಿ ರೂ ವೆಚ್ಚದ 137 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳು ಮುಗಿದು ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ ಹಾಗೂ ಒಟ್ಟು 3,189.68 ಕೋಟಿ ರೂ ಮೊತ್ತದ 93 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳು ಮುಗಿದಿದ್ದು ಕಾಮಗಾರಿಗಳು ಇನ್ನಷ್ಟೇ ಪ್ರಾರಂಭಿಸಬೇಕಿದೆ ಎಂಬ ಮಾಹಿತಿಯನ್ನು KUWS & DB ಮತ್ತು DMA ಇಲಾಖೆಗಳು ನೀಡಿವೆ.
  • ಅಲ್ಲದೇ, 2023-24 ರ ಸಾಲಿನಲ್ಲಿ ರಾಜ್ಯಕ್ಕೆ AMRUT ಯೋಜನೆಯ ಅನುಷ್ಠಾನಕ್ಕೆಂದು ಒಟ್ಟು 8,000 ಕೋಟಿ ಮೊತ್ತದ ಅನುದಾನ ಬಿಡುಗಡೆ ಆಗಿದ್ದು, ಶೇ. 100% ರಷ್ಟು ಯೋಜನೆ ಅನುಷ್ಠಾನಗೊಂಡಿದೆ ಎಂಬ ಮಾಹಿತಿಯನ್ನೂ ಸಹ ಈ ಎರಡೂ ಇಲಾಖೆಗಳು ನೀಡಿವೆ.
  • KUWS & DB ಹಾಗೂ DMA ಈ ಎರಡೂ ಇಲಾಖೆಗಳ ಪ್ರಮುಖ ಹುದ್ದೆಗಳಲ್ಲಿರುವ ಭ್ರಷ್ಟ ಅಧಿಕಾರಿಗಳು ರಾಜ್ಯದ ನಗರಾಭಿವೃದ್ಧಿ ಇಲಾಖೆಯ ಸಚಿವರಾದ ಭೈರತಿ ಸುರೇಶ್ ಮತ್ತು KUWS & DB ಯ ಅಧ್ಯಕ್ಷರಾದ ವಿನಯ್ ಕುಲಕರ್ಣಿ ಹಾಗೂ ಪೌರಾಡಳಿತ ಇಲಾಖೆಯ ಸಚಿವ ರಹೀಮ್ ಖಾನ್ ರವರ ನೇತೃತ್ವದಲ್ಲಿ ಕಳೆದ ಎರಡು ಸಾಲುಗಳಲ್ಲಿ 16,989.66 ಕೋಟಿ ರೂ ಅನುದಾನಗಳ ಪೈಕಿ ಶೇ. 50% ಕ್ಕೂ ಹೆಚ್ಚು ಮೊತ್ತವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
  • ಕರ್ನಾಟಕ ರಾಜ್ಯದ ಆಯ್ದ 27 ನಗರಸಭೆ, ಪುರಸಭೆಗಳ ವ್ಯಾಪ್ತಿಯಲ್ಲಿ AMRUT ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಗಳಲ್ಲಿರುವ ಕಾಮಗಾರಿಗಳ ಅಂದಾಜು ಪಟ್ಟಿಗಳಲ್ಲಿನ ಶೇ. 50% ರಷ್ಟು ಕಾರ್ಯಗಳನ್ನೂ ಸಹ ಮಾಡದೇ ಹಣ ದೋಚಿರುವುದು ಎಲ್ಲರ ಕಣ್ಣಿಗೂ ರಾಚುವಂತಿದೆ.
  • ಒಂದೇ ಕಾಮಗಾರಿಗೆ ಸಂಬಂಧಿಸಿದ 03 ಹಂತಗಳ ಛಾಯಾಚಿತ್ರಗಳನ್ನೇ ಹಲವಾರು ಕಾಮಗಾರಿಗಳ Work Completion Certificate ಗಳಿಗೆ ಜೋಡಿಸಲಾಗಿದೆ.
  • ಹಣ ಲಪಟಾಯಿಸುವ ದುರುದ್ದೇಶದಿಂದಲೇ ಪೂರ್ವ ನಿಗದಿತ ಗುತ್ತಿಗೆದಾರರಿಗೆ ಮಾತ್ರವೇ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸುವ ಅವಕಾಶ ದೊರಕಿಸಿಕೊಟ್ಟಿದ್ದಾರೆ.
  • ಇಂತಹುದೇ ಹತ್ತಾರು ಕಾನೂನು ಬಾಹಿರ ಕಾರ್ಯಗಳನ್ನು ಯಥೇಚ್ಛವಾಗಿ ಮಾಡಿರುವುದು ಎರಡೂ ಇಲಾಖೆಗಳಲ್ಲಿ ನಡೆದಿರುವ ವ್ಯಾಪಕವಾದ ಭ್ರಷ್ಟಾಚಾರಗಳಿಗೆ ಹಿಡಿದ ಕೈಗನ್ನಡಿಗಳಂತಿವೆ ಎಂದು ಆರೋಪ ಮಾಡಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ನಿನ್ನೆ ಸಾಯಂಕಾಲ ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ!
ನಿನ್ನೆ ಸಾಯಂಕಾಲ ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ!
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ
ಸುದೀಪಣ್ಣ, ಶಿವಣ್ಣ ನನಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ ನಾನಿ ಮುಕ್ತ ಮಾತು
ಸುದೀಪಣ್ಣ, ಶಿವಣ್ಣ ನನಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ ನಾನಿ ಮುಕ್ತ ಮಾತು
VIDEO: ಚಮೀರ... ಚಮೀರ... ಚಮೀರ... ಇದು ದುಷ್ಮಂತನ ಕ್ಯಾಚ್
VIDEO: ಚಮೀರ... ಚಮೀರ... ಚಮೀರ... ಇದು ದುಷ್ಮಂತನ ಕ್ಯಾಚ್
ಆಂಧ್ರಪ್ರದೇಶ, ದೇವಸ್ಥಾನದ ಗೋಡೆ ಕುಸಿದು 8 ಮಂದಿ ಸಾವು
ಆಂಧ್ರಪ್ರದೇಶ, ದೇವಸ್ಥಾನದ ಗೋಡೆ ಕುಸಿದು 8 ಮಂದಿ ಸಾವು
ಹಿಡಿಯುವಾಗ ಕೊರಳಿಗೆ ಸುತ್ತಿಕೊಂಡ ಕೇರೆ ಹಾವು! ಆಮೇಲೇನಾಯ್ತು?
ಹಿಡಿಯುವಾಗ ಕೊರಳಿಗೆ ಸುತ್ತಿಕೊಂಡ ಕೇರೆ ಹಾವು! ಆಮೇಲೇನಾಯ್ತು?
ಭಕ್ತಿಯಿಂದ ನಮಸ್ಕರಿಸಿ ಕಾಣಿಕೆ ಹುಂಡಿ ಕದ್ದೊಯ್ದ! ಸಿಸಿಟಿವಿ ವಿಡಿಯೋ ನೋಡಿ
ಭಕ್ತಿಯಿಂದ ನಮಸ್ಕರಿಸಿ ಕಾಣಿಕೆ ಹುಂಡಿ ಕದ್ದೊಯ್ದ! ಸಿಸಿಟಿವಿ ವಿಡಿಯೋ ನೋಡಿ