AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯವರು ತಪ್ಪಿನಿಂದ ಬಚಾವ್ ಆಗಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ; ಸಿದ್ದರಾಮಯ್ಯ ಹೇಳಿಕೆ

ಬೆಳ್ತಂಗಡಿಯಲ್ಲಿ ದಿನೇಶ್ ಕೊಲೆ ನಡೆಯಿತು. ಆತನ ಕೊಲೆ ಮಾಡಿದ್ದು ಭಜರಂಗದಳದವರು. ನರಗುಂದದಲ್ಲಿ ಒಬ್ಬ ಮುಸ್ಲಿಂ ಕೊಲೆ ನಡೆಯಿತು. ಅವನ್ನು ಕೊಲೆ ಮಾಡಿದ್ದು ಶ್ರೀರಾಮ ಸೇನೆಯವರು.

ಬಿಜೆಪಿಯವರು ತಪ್ಪಿನಿಂದ ಬಚಾವ್ ಆಗಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ; ಸಿದ್ದರಾಮಯ್ಯ ಹೇಳಿಕೆ
ಸಿದ್ದರಾಮಯ್ಯ
TV9 Web
| Edited By: sandhya thejappa|

Updated on:Apr 24, 2022 | 2:04 PM

Share

ಶಿವಮೊಗ್ಗ: 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ವಿಚಾರಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಬಿಜೆಪಿ ನಾಯಕರು ತಪ್ಪಿನಿಂದ ಬಚಾವ್ ಆಗಲು ಕಾಂಗ್ರೆಸ್ (Congress) ಪಕ್ಷದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಬೇಡ. ಪ್ರಕರಣದಲ್ಲಿ ಯಾರೇ ಇರಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಕಲಬುರಗಿ ನಗರದ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆ. ಬಿಜೆಪಿ ನಾಯಕಿಗೆ ಸೇರಿದ ಶಾಲೆಯಲ್ಲಿ ಅಕ್ರಮ ನಡೆದಿದೆ. ಆಕೆ ತಲೆಮರೆಸಿಕೊಂಡಿದ್ದಾರೆ, ಪತಿಯನ್ನು ಬಂಧಿಸಲಾಗಿದೆ ಎಂದರು.

ಇನ್ನು ಇದೇ ವೇಳೆ ಹರ್ಷ ಕೊಲೆ ಪ್ರಕರಣದ ಬಗ್ಗೆಯೂ ಹೇಳಿಕೆ ನೀಡಿದ ಸಿದ್ದರಾಮಯ್ಯ, ಗಲಾಟೆ ಮಾಡಿದ್ದು, ಶವ ಯಾತ್ರೆ ಮಾಡಿದ್ದು, ಅವರಿಗೆ 25 ಲಕ್ಷ ಕೊಡಿಸಿದ್ದು ಯಾರು? ನಾನು ಹರ್ಷ ಕೊಲೆ ಖಂಡಿಸಿರುವೆ. ಕೊಲೆಗಾರರು ಯಾರೆ ಆಗಿರಲಿ ಅವರಿಗೆ ಕಠಿಣ ಶಿಕ್ಷೆ ಆಗಬೇಕು. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚಬಾರದು ಎಂದರು.

ಬೆಳ್ತಂಗಡಿಯಲ್ಲಿ ದಿನೇಶ್ ಕೊಲೆ ನಡೆಯಿತು. ಆತನ ಕೊಲೆ ಮಾಡಿದ್ದು ಭಜರಂಗದಳದವರು. ನರಗುಂದದಲ್ಲಿ ಒಬ್ಬ ಮುಸ್ಲಿಂ ಕೊಲೆ ನಡೆಯಿತು. ಅವನ್ನು ಕೊಲೆ ಮಾಡಿದ್ದು ಶ್ರೀರಾಮ ಸೇನೆಯವರು. ಈ ಕುಟುಂಬಕ್ಕೆ ಎಷ್ಟು ಲಕ್ಷ ಪರಿಹಾರ ಕೊಟ್ಟರಿ? ನಯಾ ಪೈಸಾ ಅವರಿಗೆ ಪರಿಹಾರ ಕೊಟ್ಟಿಲ್ಲ ಅಂತ ವಾಗ್ದಾಳಿ ನಡೆಸಿದರು.

ಯಾವುದೇ ಸಂದರ್ಭದಲ್ಲಿ ಚುನಾವಣೆ ಆದರೆ ನಾವು ಎದುರಿಸಲು ರೆಡಿ. ಚುನಾವಣೆ ಸಿದ್ಧತೆಗಳು ನಡೆಯುತ್ತಿವೆ. ಭ್ರಷ್ಟಾಚಾರವೇ ಅತೀ ದೊಡ್ಡ ಚುನಾವಣೆ ವಿಚಾರ ಆಗಿದೆ. ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಈಗ ಈಶ್ವರಪ್ಪ ಯಾಕೇ ರಾಜೀನಾಮೆ ಕೊಟ್ಟರು? ಸುಮ್ಮ ಸುಮ್ಮನೆ ಖುಷಿಗೆ ರಾಜೀನಾಮೆ ಕೊಟ್ಟರಾ? ಶಿವಮೊಗ್ಗ ಸೇರಿದಂತೆ ಎಲ್ಲಿಯೂ ಪಕ್ಷದಲ್ಲಿ ಅಸಮಾಧಾನ ಇಲ್ಲ. ಮೊದಲು ಶ್ರೀರಾಮ್ ಸೇನೆ, ಬಜರಂಗದಳ, ಹಿಂದೂ ಮಹಾಸಭಾ ಇವರಿಗೆ ಬುಲ್ಡೋಜರ್ ಮಾಡಬೇಕು ಅಂತ ಸಿದ್ದರಾಮಯ್ಯ ಹೇಳಿದರು.

ಹಿಜಾಬ್, ಹಲಾಲ್, ಜಟ್ಕಾ, ಅಜಾನ್ ಈ ವಿಚಾರ ಹುಟ್ಟಿ ಹಾಕಿದ್ದು ಯಾರು? ರಾಜ್ಯದಲ್ಲಿ ಅಶಾಂತಿ  ಮಾಡುತ್ತಿರುವವರು ಯಾರು? ಧಾರ್ಮಿಕ ವಿಚಾರ ಕೆರಳಿಸಿ, ಜನರ ಭಾವನೆ ಕೆರಳಿಸವುದು. ಸಂಘ ಪರಿಹಾರದವರು  ಈ ಎಲ್ಲ ಕೆಲಸ ಮಾಡಿದ್ದಾರೆ. ಬಜರಂಗದಳ, ಶ್ರೀರಾಮ್ ಸೇನೆ, ಆರ್​ಎಸ್ಎಸ್ ಇವರಿಂದ ಅಶಾಂತಿ ವಾತಾವರಣ  ನಿರ್ಮಾಣವಾಗಿದೆ ಅಂತ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ

Yes Bank Scam ಪ್ರಿಯಾಂಕಾ ಗಾಂಧಿಯಿಂದ ಎಂಎಫ್ ಹುಸೇನ್ ಪೇಂಟಿಂಗ್ ಖರೀದಿಸುವಂತೆ ಒತ್ತಾಯಿಸಲಾಯಿತು, ಅದಕ್ಕೆ 2 ಕೋಟಿ ಪಾವತಿಸಿದ್ದೇನೆ: ರಾಣಾ ಕಪೂರ್

WhatsApp: ಮುಂದಿನ ಅಪ್ಡೇಟ್​​ಗೆ ವಾಟ್ಸ್​ಆ್ಯಪ್ ಗ್ರೂಪ್​ ಕಾಲ್​ನಲ್ಲಿ ಬರಲಿದೆ ಅಚ್ಚರಿಯ ಫೀಚರ್

Published On - 2:01 pm, Sun, 24 April 22

Follow Us
TV9 Web
TV9 Web

TV9 Kannada

Read More
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ