ಸಿದ್ದರಾಮಯ್ಯ ಹೆಸ್ರು ಹಾಳು ಮಾಡಲು ಸ್ಟಿಂಗ್ ಮಾಡಿದ್ದಾರೆ; ಇದನ್ನೆಲ್ಲಾ ನೋಡಿ ಅವರ ರಕ್ತ ಕುದಿಯುತ್ತಿಲ್ವಾ; ಹೆಚ್​ಡಿಕೆ ಪ್ರಶ್ನೆ

ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಚುರುಕುಗೊಂಡಿದೆ. ಸೈಬರ್ ಕ್ರೈಮ್ ಪೊಲೀಸರು 3 ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಸ್ಟಿಂಗ್ ಆಪರೇಷನ್ ಪ್ರಕರಣದ ಕಿಂಗ್​ಪಿನ್​​​ ಬಂಧಿಸುವಂತೆ ಆಗ್ರಹಿಸಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಇಂದು ಡಿಜಿ&ಐಜಿಪಿ ಡಾ. ಸಲೀಂ ಅವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಹೆಸರು ಹಾಳು ಮಾಡಲು ಸ್ಟಿಂಗ್ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸಿದ್ದರಾಮಯ್ಯ ಹೆಸ್ರು ಹಾಳು ಮಾಡಲು ಸ್ಟಿಂಗ್ ಮಾಡಿದ್ದಾರೆ; ಇದನ್ನೆಲ್ಲಾ ನೋಡಿ ಅವರ ರಕ್ತ ಕುದಿಯುತ್ತಿಲ್ವಾ; ಹೆಚ್​ಡಿಕೆ ಪ್ರಶ್ನೆ
ಹೆಚ್​ಡಿ ಕುಮಾರಸ್ವಾಮಿ
Edited By:

Updated on: Oct 17, 2026 | 6:02 PM

ಮುಖ್ಯಾಂಶಗಳು

  • ಸ್ಟಿಂಗ್ ಆಪರೇಷನ್ ಪ್ರಕರಣದ ಕಿಂಗ್​ಪಿನ್ ಬಂಧಿಸುವಂತೆ ಆಗ್ರಹ
  • ಪೊಲೀಸ್ ಪ್ರಧಾನ ಕಚೇರಿಯಲ್ಲಿ ಡಾ.ಸಲೀಂ ಭೇಟಿಯಾಗಿ ಮನವಿ
  • ಸ್ಟಿಂಗ್ ಆಪರೇಷನ್ ಸಂಬಂಧ ಉನ್ನತ ಮಟ್ಟದ ತನಿಖೆಗೆ ಒತ್ತಾಯ

ಬೆಂಗಳೂರು, ಅಕ್ಟೋಬರ್​​ 17: ಸ್ಟಿಂಗ್ ಆಪರೇಷನ್ ವಿಚಾರ ಸದ್ಯ ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಆರೋಪ, ಪ್ರತ್ಯಾರೋಪ ಹೆಚ್ಚಾಗುತ್ತಿವೆ. ಸ್ಟಿಂಗ್ ಆಪರೇಷನ್ ಕಿಂಗ್‌ಪಿನ್​ ಬಂಧಿಸುವಂತೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಹಿನ್ನೆಲೆ ಇಂದು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಗೆ ಆಗಮಿಸಿದ ಹೆಚ್‌.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ನಿಯೋಗ, ಡಿಜಿಪಿ ಸಲೀಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಸ್ಟಿಂಗ್ ಮಾಡಿದವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಫ್ರೀಡಂಪಾರ್ಕ್​ ಬಳಿ ಹೈಡ್ರಾಮಾ 

ಮೊನ್ನೆ ಕಮಿಷನರ್ ಕಚೇರಿಗೆ ತೆರಳಿ ದೂರು ನೀಡಿದ್ದ ಹೆಚ್‌ಡಿ ಕುಮಾರಸ್ವಾಮಿ, ಮೆಟ್ಟಿಲ ಮೇಲೆ ಧರಣಿ ಮಾಡಿದ್ದರು. ಆರೋಪಿಗಳ ಎರಡು ದಿನದ ಡೆಡ್‌ಲೈನ್ ನೀಡಿದ್ದರು. ಇದೀಗ ಇರಡು ದಿನದ ಡೆಡ್‌ಲೈನ್ ಮುಕ್ತಾಯವಾದ್ದರಿಂದ ಡಿಜಿ & ಐಜಿಪಿ ಕಚೇರಿಗೆ ಕಚೇರಿ ಮುತ್ತಿಗೆ ಹಾಕಲು ಪಾದಯಾತ್ರೆ ಮೂಲಕ ಹೊರಟಿದ್ದರು. ಆದರೆ ಈ ವೇಳೆ ಅವರನ್ನು ಪೊಲೀಸರು ತಡೆದರು. ಹೀಗಾಗಿ ಫ್ರೀಡಂಪಾರ್ಕ್​ ಬಳಿ ಭಾರೀ ಹೈಡ್ರಾಮಾವೇ ನಡೆದಿದೆ. ಬಳಿಕ ಜೆಡಿಎಸ್ ನಿಯೋಗ ಡಿಜಿಪಿಯನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಹೆಸರು ಹಾಳು ಮಾಡಲು ಸ್ಟಿಂಗ್ ಮಾಡಿದ್ದಾರೆ: ಹೆಚ್‌.ಡಿ ಕುಮಾರಸ್ವಾಮಿ 

ಮನವಿ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್‌.ಡಿ ಕುಮಾರಸ್ವಾಮಿ, ‘ಕಿಂಗ್‌ಪಿನ್‌ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಡಿಜಿ&ಐಜಿಪಿಗೆ ಸಲ್ಲಿಸಿದ್ದೇವೆ. ಪ್ರಕರಣದ ಕಿಂಗ್​ಪಿನ್ ನಿವೃತ್ತ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಾನೆ. ಸಿದ್ದರಾಮಯ್ಯ ಹೆಸರು ಹಾಳು ಮಾಡಲು ಸ್ಟಿಂಗ್ ಮಾಡಿದ್ದಾರೆ. ಕಿಂಗ್​ಪಿನ್ ಜೊತೆ ಇಬ್ಬರು ಮೂವರು ನಾಯಕರು ಚರ್ಚಿಸಿದ್ದಾರೆ. ನಾನೇ ವಿಡಿಯೋ ಮಾಡಿದ್ದೇನೆಂದು ನಿನ್ನೆ ಕಿಂಗ್‌ಪಿನ್‌ ಹೇಳಿದ್ದಾನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರ ರಕ್ತ ಕುದಿಯುತ್ತಿಲ್ಲವಾ? 

‘ರಾಜ್ಯದ ಮುಖ್ಯಮಂತ್ರಿ ಹಲವಾರು ಮಂತ್ರಿಗಳ ಸ್ಟಿಂಗ್ ಆಗುತ್ತಿದೆ. ಸಂಪುಟದಲ್ಲಿ ಚರ್ಚೆಯಾದ ವಿಚಾರಗಳು ಮಾಧ್ಯಮಗಳಿಗೆ ಸೋರಿಕೆ ಆಗಿದೆ. ಯಾವ ಉದ್ದೇಶದಿಂದ ಸಿದ್ದರಾಮಯ್ಯರನ್ನು ಸಿಲುಕಿಸಲು ಯತ್ನಿಸಿದ್ರಿ, ಮಹಿಳೆಯನ್ನು ಪ್ರಶ್ನೆ ಮಾಡಿರುವ ವಿಡಿಯೋ ಹರಿಬಿಟ್ಟಿದ್ದು ಏಕೆ, ಸಿದ್ದರಾಮಯ್ಯನವರನ್ನು ಗುರುತಿಸುತ್ತೀಯಾ ಎಂದು ಮಹಿಳೆಗೆ ಪ್ರಶ್ನೆ ಮಾಡಲಾಗಿದೆ. ಇದನ್ನೆಲ್ಲ ನೋಡಿದರೆ ಸಿದ್ದರಾಮಯ್ಯನವರ ರಕ್ತ ಕುದಿಯುತ್ತಿಲ್ವಾ’ ಎಂದು ಪ್ರಶ್ನೆ ಮಾಡಿದ ಕುಮಾರಸ್ವಾಮಿ, ‘ಇದು ಬರೀ ಸಿದ್ದರಾಮಯ್ಯ ಒಬ್ಬರ ಪ್ರಶ್ನೆ ಅಲ್ಲ. ರಾಜ್ಯದ ಮರ್ಯಾದೆ ಪ್ರಶ್ನೆ, ಇಂತಹ ವ್ಯಕ್ತಿ ವಿರುದ್ಧ ರಾಜ್ಯ ಸರ್ಕಾರ ಏಕೆ ಕ್ರಮಕೈಗೊಳ್ಳುತ್ತಿಲ್ಲ. ರಾಜ್ಯ ಸರ್ಕಾರ ಕ್ರಮಕೈಗೊಳ್ಳದಿದ್ದರೆ ಕೇಂದ್ರ ಸರ್ಕಾರ ನಿರ್ಧರಿಸಲಿದೆ’ ಎಂದು ಅವರು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಸ್ಟಿಂಗ್ ಆಪರೇಷನ್​ ಕಿಂಗ್​ಪಿನ್ ಬಂಧಿಸುವಂತೆ ಆಗ್ರಹ: ಡಿಜಿ ಕಚೇರಿಗೆ ಹೊರಟಿದ್ದ ಕುಮಾರಸ್ವಾಮಿಯನ್ನ ತಡೆದ ಪೊಲೀಸ್​​

‘ಗೃಹ ಸಚಿವ ಪ್ರಿಯಾಂಕ್ ಖರ್ಗೆ ವೀರಾವೇಷದಿಂದ ಮಾತನಾಡುತ್ತಿದ್ದಾರೆ. ಗೃಹ ಇಲಾಖೆಗೆ ಬಿಟ್ಟಿದ್ದೇನೆಂದು ಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಾರೆ. ಕಿಂಗ್‌ಪಿನ್‌ ವಿರುದ್ಧ ಹಲವು ವಾರಂಟ್‌ಗಳಿವೆ, ಏಕೆ ಕ್ರಮ ಕೈಗೊಂಡಿಲ್ಲ. ಇದಕ್ಕೆ ಉತ್ತರ ಕೊಡಿ. ವಿಧಾನಸೌಧ ಮುಂದೆ ಕೂರಿಸಿ ಕಿಂಗ್‌ಪಿನ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಿ’ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

Karnataka Sting Operation Row: HD Kumaraswamy First Reaction After Meeting DG & IGP

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:59 pm, Sat, 17 October 26

ಈರಣ್ಣಾ ಬಸವಾ

ಈರಣ್ಣಾ ಬಸವಾ.. ಮೂಲತಃ ವಾಣಿಜ್ಯ ನಗರಿ ಹುಬ್ಬಳ್ಳಿಯವರು. ಈರಣ್ಣಾ ಬಿ.ಕಾಮ್ ಪದವೀಧರರಾಗಿದ್ದಾರೆ. ಕಂಟೆಂಟ್ ರೈಟರ್ ಆಗಿ ವೃತ್ತಿಜೀವನ ಆರಂಭಿಸಿದ ನಂತರ ಕನ್ನಡದ ಬೇರೆ ಬೇರೆ ಸುದ್ದಿ ಮಾದ್ಯಮದಲ್ಲಿ ಸುಮಾರು ೬ ವರ್ಷ ಕಾಲ ಡೆಸ್ಕ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸದ್ಯ ಸತತ ಪರಿಶ್ರಮದಿಂದ ಟಿವಿ9 ಕನ್ನಡದಲ್ಲಿ ರಾಜಕೀಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹಲವು ಎಕ್ಸ್ ಕ್ಲೂಸಿವ್ ಸುದ್ದಿಗಳನ್ನು ಹೆಕ್ಕಿ ತೆಗೆದಿದ್ದಾರೆ. ಸಿಎಂ, ಡಿಸಿಎಂ ಬೀಟ್ ಜವಾಬ್ದಾರಿ ಇವರ ಮೇಲಿದ್ದು ಜನರಿಗೆ ಸಿಗಬೇಕಾದ ಅಮೂಲ್ಯ ಸುದ್ದಿಗಳನ್ನು ತಲುಪಿಸುವ ಕಾಯಕವನ್ನು ಜವಾಬ್ದಾರಿಯಿಂದ ಮಾಡುತ್ತಿದ್ದಾರೆ. ಬರವಣಿಗೆ, ಕತೆ, ಕವನ ಇವರ ಆಸಕ್ತಿಯ ಕ್ಷೇತ್ರ.

Read More
Loading...
Unable to load recommendations.
Follow Us