Sign In

By signing in or creating an account, you agree with Associated Broadcasting Company's Terms & Conditions and Privacy Policy.

IT ಉದ್ಯಮ ಬೆಳಗಲು ಏನೆಲ್ಲಾ ಆಗಬೇಕು; ಟಿವಿ9 ಸಂವಾದದಲ್ಲಿ ಮೋಹನ್​ದಾಸ್​ ಪೈ

2022ರ ವೇಳೆಗೆ ಐಟಿ ವಲಯದಲ್ಲಿ 3 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ. ಅದರಲ್ಲೂ ಬೆಂಗಳೂರು ಒಂದರಲ್ಲೇ 2 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ.

IT ಉದ್ಯಮ ಬೆಳಗಲು ಏನೆಲ್ಲಾ ಆಗಬೇಕು; ಟಿವಿ9 ಸಂವಾದದಲ್ಲಿ ಮೋಹನ್​ದಾಸ್​ ಪೈ
ಆ್ಯಂಕರ್ ಆನಂದ ಬುರಲಿ ಮತ್ತು ಉದ್ಯಮಿ ಟಿ.ವಿ.ಮೋಹನ್​ದಾಸ್ ಪೈ
Follow us
ಪೃಥ್ವಿಶಂಕರ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 15, 2021 | 6:43 PM

ಬೆಂಗಳೂರು: ಕೊರೊನಾ ಬಂದು ಜಗತ್ತಿನ ಎಲ್ಲಾ ವ್ಯವಹಾರಗಳು ಸಂಕಷ್ಟದಲ್ಲಿ ಸಿಲುಕಿರುವಾಗ ಆಶಾ ಭಾವನೆ ಹುಟ್ಟಿಸುವ ಸುದ್ದಿ IT ವಲಯದಿಂದ ಬರುತ್ತಿದೆ. ವಿಪ್ರೊ ಕಂಪೆನಿಯ ಪ್ರಕಾರ ಈ ವರ್ಷ IT ಉದ್ಯಮದಲ್ಲಿ ಬುದ್ಧಿಮತ್ತೆಯ ಯುದ್ಧ (talent war) ಆಗಬಹುದು. ಇದೇ ಹೊತ್ತಿನಲ್ಲಿ Infosys ಕೂಡ ಹೊಸ ಮುಖಗಳ ತಲಾಶ್​ಗೆ ತಯಾರಾಗುತ್ತಿದೆ. ನಮ್ಮ IT ಉದ್ಯಮದಲ್ಲಿ ಹೊಸ ಅಲೆ ಬರುತ್ತಿದೆಯಾ ಎಂಬ ಪ್ರಶ್ನೆ ಈಗ ಉದ್ಯೋಗ ಮಾರುಕಟ್ಟೆಯಲ್ಲಿ ಚಾಲ್ತಿಗೆ ಬಂದಿದೆ.

ಟಿವಿ9 ಕನ್ನಡ ಡಿಜಿಟಲ್ ಶುಕ್ರವಾರ ನಡೆಸಿದ ಫೇಸ್​ಬುಕ್ ಸಂವಾದದಲ್ಲಿ ಇದೇ ವಿಚಾರದ ಬಗ್ಗೆ ಚರ್ಚಿಸಲಾಯಿತು. ಖ್ಯಾತ ಉದ್ಯಮಿ, ವೆಂಚುರ್ ಕ್ಯಾಪಿಟಲಸ್ಟ್​ (ಸಾಂಸ್ಥಿಕ ಹಣಕಾಸು ತಜ್ಞ) ಮೋಹನ್​ದಾಸ್​ ಪೈ ಜೊತೆ ನಮ್ಮ ಆ್ಯಂಕರ್​ ಆನಂದ್​ ಬುರಲಿ ಸವಿವರವಾಗಿ ಸಂವಾದ ನಡೆಸಿದರು.

‘ಕೊರೊನಾ ಸೋಂಕಿನಿಂದಾಗಿ ಇಡೀ ಪ್ರಪಂಚವೇ ಆರ್ಥಿಕ ಹಿನ್ನಡೆ ಅನುಭವಿಸಿದೆ. ಆದರೆ IT ಉದ್ಯಮದಲ್ಲಿ ಮಾತ್ರ ಗಮನಾರ್ಹ ಬೆಳವಣಿಗೆಯಾಗಿದೆ’ ಎಂದು ಹೇಳಿದ ಮೋಹನ್​ದಾಸ್ ಪೈ, ಈ ಬೆಳವಣಿಗೆಗಳಿಗೆ ಹಲವು ಕಾರಣಗಳನ್ನು ಸಹ ನೀಡಿದರು. ಅವರ ಮಾತುಗಳ ಅಕ್ಷರರೂಪ ಇಲ್ಲಿದೆ. ಡಿಜಿಟಲ್ ಮಾರ್ಕೆಟಿಂಗ್ ಹೆಚ್ಚಾಯಿತು.. ಕೊರೊನಾ ಸೋಂಕಿಗೆ ಕಡಿವಾಣ ಹಾಕಲೆಂದು ವಿಶ್ವದ ಹಲವು ದೇಶಗಳಲ್ಲಿ ಲಾಕ್​ಡೌನ್ ಘೋಷಣೆಯಾಯಿತು. ಲಾಕ್​ಡೌನ್ ಘೋಷಣೆಯಿಂದಾಗಿ ಜನರು ಹೊರಗೆ ಹೋಗದಂಥ ಪರಿಸ್ಥಿತಿ ನಿರ್ಮಾಣವಾಯಿತು. ಜನರು ಸಹ ಕೊರೊನಾ ಸೋಂಕಿಗೆ ಹೆದರಿ ಹೊರಗೆ ಬರುವುದನ್ನು ನಿಲ್ಲಿಸಿದರು. ಡಿಜಿಟಲ್ ಮಾರ್ಕೆಟಿಂಗ್​ಗೆ ಇದು ಪೂರಕವಾಯಿತು. ಜನರು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಆನ್​ಲೈನ್​ ಮೊರೆ ಹೋದರು. ಇದು IT ಉದ್ಯಮ ದೊಡ್ಡದಾಗಿ ಬೆಳೆಯಲು ಸಹಕಾರಿಯಾಯಿತು. ಕೊರೊನಾ ಪೀಡಿತ ಈ 9 ತಿಂಗಳಲ್ಲಿ ಡಿಜಿಟಲ್​ ಮಾರುಕಟ್ಟೆಗೆ ಬಹಳ ಬೇಡಿಕೆ ಬಂದಿದೆ. ಪ್ರಪಂಚದಲ್ಲಿರುವ 5 ಲಕ್ಷ ಕೋಟಿ ಜನರು ಇಂಟರ್​ನೆಟ್​ ಬಳಕೆ ಮಾಡುತ್ತಿದ್ದಾರೆ. ಇದು ಡಿಜಿಟಲ್​ ಮಾರುಕಟ್ಟೆಗೆ ಸಹಕಾರಿಯಾಗಿದೆ.

2022ಕ್ಕೆ 3 ಲಕ್ಷ ಉದ್ಯೋಗ ಸೃಷ್ಟಿ.. ಕೊರೊನಾದಿಂದಾಗಿ ಎಲ್ಲಾ ಉದ್ಯಮಕ್ಕೂ ಹೊಡೆತ ಬಿದ್ದಿದೆ. ಇದರಿಂದಾಗಿ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ IT ಉದ್ಯಮದ ಬೆಳವಣಿಗೆ ಇದಕ್ಕೆ ವಿರುದ್ಧವಾಗಿದೆ. ಕೇವಲ ಡಿಸೆಂಬರ್ ತಿಂಗಳೊಂದರಲ್ಲೇ IT ಉದ್ಯಮದಲ್ಲಿ 1 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಮಾರ್ಚ್​ ತಿಂಗಳ ವೇಳೆಗೆ ಇದು ಇನ್ನೂ 1 ಲಕ್ಷಕ್ಕೆ ಏರಿಕೆಯಾಗಲಿದೆ. 2022ರ ವೇಳೆಗೆ 3 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ. ಅದರಲ್ಲೂ ಬೆಂಗಳೂರು ನಗರ ಒಂದರಲ್ಲೇ 2 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ.

ಬೆಂಗಳೂರು ತೆರಿಗೆ ಸಂಗ್ರಹ ಶೇ 11ಕ್ಕೆ ಏರಿಕೆ ಕೊರೊನಾದಿಂದಾಗಿ ದೇಶ ಆರ್ಥಿಕ ಹಿನ್ನಡೆ ಅನುಭವಿಸಿದೆ. ಆದರೆ ದೇಶದಲ್ಲಿ ಉಳಿದ ದೊಡ್ಡ ರಾಜ್ಯಗಳಿಗೆ ಹೊಲಿಸಿಕೊಂಡರೆ ಬೆಂಗಳೂರಲ್ಲಿ ತೆರಿಗೆ ಸಂಗ್ರಹ ಶೇ 11ಕ್ಕೆ ಏರಿಕೆಯಾಗಿದೆ. ಇದಕ್ಕೆ ಪರೋಕ್ಷವಾಗಿ IT ಉದ್ಯಮವೂ ಸಹಕರಿಸಿದೆ. ಒಟ್ಟಾರೆ ದೇಶದಲ್ಲಿ ತೆರಿಗೆ ಸಂಗ್ರಹ ಶೇ 9ರಷ್ಟು ಇಳಿಕೆ ಕಂಡಿದೆ. ಆದರೆ ಬೆಂಗಳೂರಲ್ಲಿ ಮಾತ್ರ ಏರಿಕೆಯಾಗಲು IT ಉದ್ಯಮವೇ ಕಾರಣ. ಬೆಂಗಳೂರಲ್ಲಿ 20 ಲಕ್ಷ IT ಉದ್ಯೋಗಿಗಳಿದ್ದಾರೆ. ಅದರಲ್ಲಿ 10 ಲಕ್ಷ ಜನ ಕನ್ನಡದವರಾಗಿದ್ದಾರೆ.

IT ವಲಯದಲ್ಲಿ ಬೆಂಗಳೂರು ಬಹಳ ಬೇಗನೇ ಬೆಳೆಯುತ್ತಿದೆ. ಆದರೆ ಬೆಂಗಳೂರಲ್ಲಿರುವ IT ಕಂಪನಿಗಳಲ್ಲಿ ಕನ್ನಡಿಗರ ಪಾಲು ಅಷ್ಟಕಷ್ಟೆ. ಅದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಇಂಜಿನಿಯರಿಂಗ್​ ಕಾಲೇಜ್​ಗಳಿವೆ. ಅಲ್ಲಿಂದ ಬಹಳಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದಾರೆ. ಆದರೆ ಅವರಿಗೆಲ್ಲಾ ಉದ್ಯೋಗ ಸಿಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಅವರಿಗೆ ಸರಿಯಾದ ತರಬೇತಿ ಸಿಗುತ್ತಿಲ್ಲ. ವಿದ್ಯಾರ್ಥಿಗಳಿಗಾಗಿ ಸರ್ಕಾರ ತರಬೇತಿ ಕೇಂದ್ರಗಳನ್ನು ಆರಂಭಿಸಬೇಕಿದೆ.

ಉತ್ತರ ಕರ್ನಾಟಕದವರ ಪಾಲ್ಗೊಳ್ಳುವಿಕೆ ಕಡಿಮೆ.. IT ಉದ್ಯಮಕ್ಕೆ ಸಂಬಂಧಿಸದಂತೆ ಉತ್ತರ ಕರ್ನಾಟಕ ಭಾಗದ ಜನರಿಗೆ ಅರಿವು ತುಂಬಾ ಕಡಿಮೆ. ಹೀಗಾಗಿ ಸರ್ಕಾರ ಆ ಭಾಗದ ವಿದ್ಯಾರ್ಥಿಗಳಿಗಾಗಿ ತರಬೇತಿ ಕೇಂದ್ರಗಳನ್ನ ತೆರೆದು, ಕೋಡಿಂಗ್​, ಡೆಟಾ ಅನಾಲಿಸಿಸ್ ಹಾಗೂ ಆರ್ಟಿಫೀಷಿಯಲ್​ ಇಂಟಲಿಜೆನ್ಸ್ ಬಗ್ಗೆ ಮಾಹಿತಿ ನೀಡಬೇಕು. ಎಂಜಿನಿಯರಿಂಗ್​ ಮಕ್ಕಳು ಕಾಲೇಜು ಪರೀಕ್ಷೆಗಳಲ್ಲಿ ಪಾಸ್​ ಆಗುತ್ತಿದ್ದಾರೆ. ಆದರೆ ಕಂಪನಿಗಳ ಎಂಟ್ರೆನ್ಸ್​ ಎಕ್ಸಾಮ್​ಗಳಲ್ಲಿ ಪಾಸ್​ ಆಗುತ್ತಿಲ್ಲ. ಇದರಿಂದಲೇ ತಿಳಿಯುತ್ತದೆ ವಿದ್ಯಾರ್ಥಿಗಳಿಗೆ ತರಬೇತಿಯ ಕೊರತೆಯಿದೆ ಎಂಬುದು.

ಬಜೆಟ್​ನಲ್ಲಿ 500 ಕೋಟಿ ಮೀಸಲಿಡಬೇಕು.. ರಾಜ್ಯಸರ್ಕಾರ IT ಉದ್ಯಮಕ್ಕಾಗಿ ಬಜೆಟ್​ನಲ್ಲಿ 500 ಕೋಟಿಯಷ್ಟು ಹಣ ಮೀಸಲಿಡಬೇಕು. ಆ ಹಣವನ್ನು ಅಭಿವೃದ್ಧಿಯ ಸಾಲಿನಲ್ಲಿರುವ ನಗರಗಳಾದ ಮೈಸೂರು, ಮಂಗಳೂರು ಹಾಗೂ ಇತರ ಜಿಲ್ಲೆಗಳಿಗೆ ಮೀಸಲಿಡಬೇಕು. ಪ್ರತಿ ಜಿಲ್ಲೆಗಳಲ್ಲೂ ತರಬೇತಿ ಕೇಂದ್ರಗಳನ್ನ ತೆರೆಯಬೇಕು. ಅದರಲ್ಲೂ ಉತ್ತರ ಕರ್ನಾಟಕ ಭಾಗಕ್ಕೆ ಅಧಿಕ ಹಣ ಮೀಸಲಿಡಬೇಕು.

ಬೆಂಗಳೂರು ದಿನೇದಿನೇ ತನ್ನ ವ್ಯಾಪ್ತಿಯನ್ನ ಹೆಚ್ಚಿಸುತ್ತಲೇ ಇದೆ. ಆದರೆ IT ಉದ್ಯಮಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸುವುದರಲ್ಲಿ ರಾಜ್ಯ ಸರ್ಕಾರ ಎಡವುತ್ತಿದೆ. ಹೀಗಾಗಿಯೇ ಕಳೆದ ಕೆಲ ವರ್ಷಗಳಲ್ಲಿ ಬೆಂಗಳೂರಿಗೆ ಬರಬೇಕಿದ್ದ ಪ್ರತಿಷ್ಠಿತ ಕಂಪನಿಗಳು ಹೈದರಾಬಾದ್ ಪಾಲಾದವು. ಬೆಳೆಯುತ್ತಿರುವ ಬೆಂಗಳೂರಲ್ಲಿ ಟ್ರಾಫಿಕ್​ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ನಗರವಾಸಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ಅಭಿವೃದ್ಧಿಯ ಹೆಸರಲ್ಲಿ ನಗರದ ರಸ್ತೆಗಳಲ್ಲಿ ಗುಂಡಿ ಬಿಳಿಸಿದ್ದಾರೆ. ಇದರಿಂದ IT ಉದ್ಯಮ ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದೆ. ಹಾಗಾಗಿ ಸರ್ಕಾರ ಕೂಡಲೇ ಇದರ ಬಗ್ಗೆ ಗಮನ ಹರಿಸಬೇಕು. ಮೆಟ್ರೋ ಸಾರಿಗೆಯನ್ನು ಎಲ್ಲೆಡೆ ಹೆಚ್ಚಿಸಬೇಕು. ಟ್ರಾಫಿಕ್​ ಸಮಸ್ಯೆಗೆ ಪರಿಹಾರ ಹುಡುಕಬೇಕು.

ಐಟಿ ನೀತಿ 2020-25: ಏನಿದೆ ಏನಿಲ್ಲ? ಕನ್ನಡಿಗರಿಗೆ ಏನುಪಯೋಗ?

Published On - 6:12 pm, Fri, 15 January 21

ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್